ಯುವಕರು ದೇಶಿ ಸಂಸ್ಕೃತಿ ಬೆಳೆಸಲಿ
ಸಿಂಧನೂರು: ಭವ್ಯ ದೇಶಿ ಸಂಸ್ಕೃತಿಯನ್ನು ಯುವ ಪೀಳಿಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದು ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಹೇಳಿದರು.
ನಗರದ ಸುಕಾಲಪೇಟೆಯ ನಂಜುಂಡೇಶ್ವರ ಗುರುವಿನ ಮಠದಲ್ಲಿ ಯಲ್ಲಾಲಿಂಗೇಶ್ವರ ಪುರಾಣ, ಸಾಮೂಹಿಕ ಮದುವೆಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿಯೇ ಮಹಿಳೆಯರ ಪಾತ್ರ ಹಿರಿದಾದುದು. ತನ್ನ ಜೀವನವನ್ನು ಒತ್ತಿಯಿಟ್ಟು ಇನ್ನೊಂದು ಜೀವಕ್ಕೆ ಜನ್ಮ ನೀಡುವ ಕೆಲಸ ತ್ಯಾಗಮಯವಾದದು. ಇಂದಿನ ದಿನಗಳಲ್ಲಿ ಗಂಡು- ಹೆಣ್ಣು ಎಂಬ ತಾರತಮ್ಯ ಮಾಡದೇ ಇಬ್ಬರೂ ಸಮಾನರೆಂಬ ಭಾವನೆಯಿಂದ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ತೊಡಗಿ ಒಳ್ಳೆಯ ಜ್ಞಾನ, ಸಂಸ್ಕಾರವನ್ನು ಪಡೆದುಕೊಳ್ಳಬೇಕು ಎಂದರು.
ನಂಜುಂಡೇಶ್ವರ ಮಠದ ವೇ.ಮೂ. ಹನುಮಂತಯ್ಯ ಗುರುವಿನ ಸಾನ್ನಿಧ್ಯ ವಹಿಸಿದ್ದರು. ವಿಜಯಲಕ್ಷ್ಮೀ ಕೆ.ಕರಿಯಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ, ಜಿಪಂ ಮಾಜಿ ಸದಸ್ಯೆ ಟಿ.ಲಕ್ಷ್ಮೀದೇವಿ, ಇಂದುಮತಿ, ಪುರಾಣ ಪ್ರವಚನಕಾರ ಮಡಿವಾಳಯ್ಯ ಶಾಸ್ತ್ರಿ, ಕನಕ ಗುರುಪೀಠದ ತಾಲೂಕಾಧ್ಯಕ್ಷ ಟಿ.ಹನುಮಂತಪ್ಪ, ಶರಣಪ್ಪ ಬರಸಿ, ಪೂಜಾರಪ್ಪ ಹೊಸಗೇರಿ, ಬಾದಲರ್ ಫಕೀರಪ್ಪ, ಮಾಡಗಿರಿ ಮಲ್ಲಯ್ಯ, ಬಿ.ಲಿಂಗಪ್ಪ, ನಂಜುಂಡಯ್ಯ ಗುರುವಿನ ಹಿರಿಯ ಮುಖಂಡರು ಉಪಸ್ಥಿತರಿದ್ದರು.ಗಿರೀಶ ಸ್ವಾಗತಿಸಿ, ಸಂಗೊಳ್ಳಿ ರಾಯಣ್ಣ ಸುರೇಶ ಅಚ್ಚೊಳ್ಳಿ ನಿರೂಪಿಸಿ, ಹನುಮೇಶ ಬಾಗೋಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

