'ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗಲಿ'
ಶಹಾಬಾದ್: ಮಹಿಳೆ ಪರಂಪರಾಗತ ದಾಸ್ಯತ್ವದಿಂದ ಹೊರಗೆ ಬಂದು, ಒಳ್ಳೆಯ ಶಿಕ್ಷಣ ಪಡೆದು, ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ತನ್ನ ಹಕ್ಕಿನ ಬಗ್ಗೆ ತಿಳಿದುಕೊಂಡು ಪುರುಷ ಪ್ರಧಾನ ಸಮಾಜದಲ್ಲಿ ನಾನು ಅಬಲೆಯಲ್ಲ ಎಂಬುದನ್ನು ಸಾಧಿಸಿ ತೋರಿಸಬೇಕು ಎಂದು ನಿರ್ಮಲಾ ಸೊಲಂಕಿ ಹೇಳಿದರು.
ಅವರು ವಾಡಿ ಎಸಿಸಿ ಕಾರ್ಖಾನೆಯ ಸಿಎಸ್ಆರ್ ವತಿಯಿಂದ ಆಚರಿಸಲಾದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಎಸಿಸಿಯ ಅಹೇಡ್ ಆರೋಗ್ಯ ಮತ್ತು ಶಿಕ್ಷಣ ಅಭಿವೃದ್ಧಿ ಒಕ್ಕೂಟದ ವತಿಯಿಂದ ಪ್ರತಿಭಾಸಿಂಗ್, ರೇಖಾಸಿಂಗ್, ಸುಜಾತಾ ಪವಾರ, ಶಕುಂತಲಾ ಆಚಾರ್ಯ, ಕಾಂತಮ್ಮ ರಾಜರತ್ನಂ, ಹಸೀನಾಬೇಗಂ ಖುರೇಶಿ, ಸುಮಿತ್ರಾ ದೊರಿ, ಸಂಗಮ್ಮ ಪಾಟೀಲ, ಅಲಕಾ ಬಂಸಲೆ, ನಿವೇದಿತಾ ದಯಾಂಡೆ, ಆಕೃತಿ ಟ್ರಸ್ಟ್ನ ಮಂಜ ಭಾನುಪ್ರಕಾಶ ಅವರನ್ನು ಸನ್ಮಾನಿಸಲಾಯಿತು.
ಎಸಿಸಿ ಸಿಎಸ್ಆರ್ ವಿಭಾಗದ ಮುಖ್ಯಸ್ಥ ನಿತೇಶ್ವರಕುಮಾರ, ಸೈನಾದ ಬಾನು ಉಪಸ್ಥಿತರಿದ್ದರು.
ತಾಲೂಕ ತೋಟಗಾರಿಕೆ ಇಲಾಖೆಯಿಂದ ವಿವಿಧ ಮಹಿಳಾ ಸಂಘಗಳಿಗೆ ತರಕಾರಿ ಬೀಜಗಳ ಕಿಟ್ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

