ನವನಿಹಾಳದಲ್ಲಿ ಜಾತ್ರಾ ಮಹೋತ್ಸವ
ಗುಲ್ಬರ್ಗ: ತಾಲೂಕಿನ ನವನಿಹಾಳದಲ್ಲಿ ವೈರಾಗ್ಯಮೂರ್ತಿ ಈಶ್ವರಮುತ್ಯಾನ 5ನೇ ಜಾತ್ರಾ ಮಹೋತ್ಸವ ಮಾ. 9ರಿಂದ ಆರಂಭವಾಗಿದ್ದು ಶುಕ್ರವಾರ 14ರ ವರೆಗೆ ನಡೆಯಲಿದೆ. ಪ್ರತಿದಿನ ಸಂಜೆ 7.30ರಿಂದ ರಾತ್ರಿ 10.30ರವರೆಗೆ ಶರಭುಲಿಂಗ ಶಾಸ್ತ್ರಿ ಗೊಬ್ಬೂರ ಅವರಿಂದ ಪ್ರವಚನ, ಸಿದ್ದಲಿಂಗಯ್ಯ ಗವಾಯಿ ಮರಪಳ್ಳಿ ಅವರಿಂದ ಸಂಗೀತ, ರೇವಣಸಿದ್ದಪ್ಪ ಧರ್ಕಿ ನವನಿಹಾಳರಿಂದ ತಬಲಾವಾದನ ಏರ್ಪಡಿಸಲಾಗಿದೆ. ಮಾ.14ರಂದು ಬೆಳಗ್ಗೆ ಶರಣಯ್ಯ ಸ್ವಾಮಿ ಕಲ್ಲೂರರಿಂದ ಮುತ್ಯಾನ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, 8.30ರಿಂದ 12ರವರೆಗೆ ಪಲ್ಲಕ್ಕಿ ಉತ್ಸವ, ಸಾಯಂಕಾಲ 4ಕ್ಕೆ ಮಹಾಪ್ರಸಾದ ವಿತರಣೆ ನಡೆಯಲಿದೆ. ಶ್ರೀನಿವಾಸ ಸರಡಗಿ ರೇವಣಸಿದ್ಧ ಶಿವಾಚಾರ್ಯರು ಮಾತನಾಡಿದರು. ಕಮಲಾಪುರ ಜಿಪಂ ಸದಸ್ಯ ಬಸವರಾಜ ಮಾಲಿಪಾಟೀಲ ಮಾತನಾಡಿದರು. ಗುರುಪಾದಪ್ಪ ಕಶೆಟ್ಟಿ, ಪ್ರಕಾಶ ಕಟ್ಟಿ, ರಾಮಲಿಂಗಯ್ಯ ಗುತ್ತೇದಾರ, ಗ್ರಾಪಂ ಮಾಜಿ ಅಧ್ಯಕ್ಷ ಓಕಳಿ, ಈಶ್ವರ ಕಮಲಾಪುರ ಇದ್ದರು.
ಶಿಲ್ಪಕಲಾ ಸಂವಾದ
ಗುಲ್ಬರ್ಗ: ವಿಶ್ವಕರ್ಮ ಶಿಕ್ಷಣ ಸಂಸ್ಥೆ ರಾಜಪೂರದಲ್ಲಿ ಇತ್ತೀಚೆಗೆ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದ ದಿಗ್ಗಾಂವ ಗ್ರಾಮದ ಶಿಲ್ಪಿ, ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾಗಿರುವ ಮಹಾದೇವಪ್ಪ ಅವರೊಂದಿಗೆ ಸಂವಾದ ನಡೆಸಲಾಯ್ತು. ಶಿಲ್ಪಿಯವರನ್ನು ಗುರುತಿಸಿ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದಕ್ಕೆ ಸರ್ಕಾರವನ್ನು ಅನೇಕರು ಸಮಾರಂಭದಲ್ಲಿ ಅಭಿನಂದಿಸಿದರು. ಉದ್ಘಾಟಕರಾಗಿ ಆಗಮಿಸಿದ ಡಾ. ಗುರುಮೂರ್ತಿ ಬಡಿಗೇರ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತಿನಂತೆ ಸಂಸ್ಥೆ ಇಂತಹ ವ್ಯಕ್ತಿಯನ್ನು ಗುರುತಿಸಿ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ಸ್ಥಾನ ದೊರಕಿಸಿರುವುದು ವಿಶ್ವಕರ್ಮ ಜನಾಂಗಕ್ಕೆ ಸಂತೋಷ ಒದಗಿಸಿಕೊಟ್ಟಿದೆ ಎಂದು ಮಾತನಾಡಿದರು. ಸಂಸ್ಥೆ ಅಧ್ಯಕ್ಷ ವೀರೆಂದ್ರ ಇನಾಮದಾರ ಅಧ್ಯಕ್ಷತೆ ವಹಿಸಿದ್ದರು. ಮೋನಪ್ಪ ಇನಾಮದಾರ ಅತಿಥಿಯಾಗಿ ಆಗಮಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹಾದೇವಪ್ಪ ಶಿಲ್ಪಿ ಬಹುಮಾನ ವಿತರಿಸಿದರು. ಸಂಗೀತಾ ರಾಯಕೊಡಿ, ಪಲ್ಲವಿ ಶೇಟಗಾರ, ಈಶ್ವರಿ ಪಾಟೀಲ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಮನ್ನೂರ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಸ್ತಾವಿಕ ಮಾತುಗಳನ್ನು ಹಾಗೂ ಸ್ವಾಗತ ಹೇಮಾ ಪತ್ತಾರ ಮಾಡಿದರು.
ಮೇಳಕ್ಕೆ ಆಯ್ಕೆ
ಚಿತ್ತಾಪುರ:ಇಲ್ಲಿನ ಭಾಗಮ್ಮ ಪದವಿ ಕಾಲೇಜಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿ ಕಾಶಿನಾಥ ಚಂದಪ್ಪ ನಾಯಕ ಕರದಾಳ, ಕೊಪ್ಪಳದಲ್ಲಿ ನಡೆದ ಗುಲ್ಬರ್ಗ ವಿಭಾಗ ಮಟ್ಟದ ಯುವಜನ ಮೇಳದ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಅಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯ ಡೇವಿಡ್ ತಿಳಿಸಿದ್ದಾರೆ. ವಿದ್ಯಾರ್ಥಿ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಅಡಳಿತ ಮಂಡಳಿ ಮತ್ತು ಉಪನ್ಯಾಸಕರು, ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.
ಪದಾಧಿಕಾರಿಗಳು
ಸೇಡಂ: ತಾಪಂ. ಆವರಣದಲ್ಲಿ ನಡೆದ ಸಾಕ್ಷರರ ಸಭೆಯಲ್ಲಿ ಸಾಕ್ಷರತಾ ಪ್ರೇರಕರ ಒಕ್ಕೂಟದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ. ನರಸಿಂಹಲು ಕುಂಬಾರ ಯಾನಾಗುಂದಿ (ಅಧ್ಯಕ್ಷ), ನರಸಮ್ಮ ಕೋಡ್ಲಾ (ಉಪಾಧ್ಯಕ್ಷ), ಹುಸೆನಪ್ಪ ಕೋಲಕುಂದಾ(ಪ್ರ. ಕಾರ್ಯದರ್ಶಿ), ನರಸರೆಡ್ಡಿ ಹೇಮಾರೆಡ್ಡಿ ದುಗನೂರ(ಖಜಾಂಚಿ)ಯಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ಪ್ರತಿ ಗ್ರಾಪಂ.ನ ಲೋಕ ಶಿಕ್ಷಣ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಾಕ್ಷರತಾ ಪ್ರೇರಕರು ಸಂಘದ ಸದಸ್ಯರಾಗಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಸಭೆಯಲ್ಲಿ ರಾಜು ನೀಲಹಳ್ಳಿ, ರಾಘವೇಂದ್ರ, ಅಯ್ಯಪ್ಪ ಹಂದರಕಿ, ಪ್ರೇಮಾ ಜಾಕನಪಲ್ಲಿ ಇದ್ದರು.
ಪಿಎಚ್.ಡಿ ಪದವಿ
ಆಳಂದ: ಸ್ಥಳೀಯ ಎಚ್ಕೆಇ ಪ್ರತಿಷ್ಠಿತ ಎ.ವಿ. ಪಾಟೀಲ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಸ್ಯ ಶಾಸ್ತ್ರದ ಪ್ರಾಧ್ಯಾಪಕ ರಾಜಶೇಖರ ಶಿವಶರಣಪ್ಪಾ ಬಬನೂರ್ ಅವರಿಗೆ ಗುಲ್ಬರ್ಗ ವಿಶ್ವ ವಿದ್ಯಾಲಯವು ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ. ವಿವಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎ.ಎಚ್. ರಾಜಸಾಬ ಅವರ ಮಾಗದರ್ಶನದಲ್ಲಿ ಹತ್ತರಕಿ ಪಲ್ಯ ಮತ್ತು ಅದರ ಮಹತ್ವಗಳು ಕುರಿತಾಗಿ ಮಂಡಿಸಿದ ಪ್ರಬಂಧಕ್ಕೆ ಪಿಹೆಚ್ಡಿ ಪ್ರಕಟಿಸಲಾಗಿದೆ. ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಕ್ರಿಕೆಟ್ಗೆ ಚಾಲನೆ
ಗುಲ್ಬರ್ಗ: ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವದ ಬೆಳ್ಳಿ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಸಿದ್ದಾರ್ಥ ನಗರ ದೀಕ್ಷಾ ಭೂಮಿಯಲ್ಲಿ ಗುಲ್ಬರ್ಗ ವಿಭಾಗ ಕ್ರಿಕೆಟ್ ಟೂರ್ನಾಮೆಂಟ್ ಅನ್ನು ದಕ್ಷಿಣ ಮತಕ್ಷೇತ್ರದ ಶಾಸಕ ದತಾತ್ರೇಯಸಿ. ಪಾಟೀಲ್ ರೇವೂರ ಚಾಲನೆ ನೀಡಿದರು. ಉತ್ತರ ಕರ್ನಾಟಕದ ದಲಿತ ಮುಖಂಡರು ಜ್ಯೋತಿ ಬೆಳಗಿಸಿದರು. ಜಿಪಂ ಮಾಜಿ ಅಧ್ಯಕ್ಷ ಅಂಬರಾಯ ಅಷ್ಟಗಿ, ಮಹಾನಗರ ಪಾಲಿಕೆ ಸದಸ್ಯರಾದ ವಿಶಾಲ ದರ್ಗಿ, ಪರಶುರಾಮ ಹೊಳ್ಕರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ರಾಜು ನೂಲಕರ್, ಭೀಮಾಶಂಕರ ಡಾಳಿ, ಲಕ್ಷ್ಮೀಕಾಂತ ಕಾಂಬಳೆ ಇದ್ದರು ಎಂದು ಸಮಿತಿ ಜಿಲ್ಲಾಧ್ಯಕ್ಷ ಎಸ್.ಎಸ್. ತಾವಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

