ವಿಮಾ ನೌಕರರ ಸಂಘದಿಂದ ಸಹಿ ಸಂಗ್ರಹ
ಸಿಂಧನೂರು: ಅಖಿಲ ಭಾರತ ವಿಮಾ ನೌಕರರ ಸಂಘಕ್ಕೆ ಮಾನ್ಯತೆ ನೀಡಲು ಒತ್ತಾಯಿಸಿ ಜೀವ ವಿಮಾ ನೌಕರರ ಸಂಘದ ನೌಕರರು ತಮ್ಮ ಸಹಿ ಸಂಗ್ರಹಣೆ ಮಾಡಿ ಶಾಖಾ ವ್ಯವಸ್ಥಾಪಕ ಜಿ.ಪಿ.ಶಂಕರ ಅವರ ಮುಖಾಂತರ ಎಲ್ಐಸಿ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಕಳುಹಿಸಿದರು. ಭಾರತ ದೇಶದಲ್ಲಿ 1951ರಲ್ಲಿ ಸ್ಥಾಪನೆಯಾದ ವಿಮಾ ನೌಕರರ ಸಂಘ ಖಾಸಗಿ ವಿಮಾ ಕಂಪನಿಗಳನ್ನು ಒಗ್ಗೂಡಿಸಿ ವಿಮಾ ಉದ್ದಿಮೆ ರಾಷ್ಟ್ರೀಕರಣಗೊಳಿಸಲು ಯಶಸ್ವಿಯಾಗಿದೆ. ಮೂರು ಮತ್ತು ನಾಲ್ಕನೇ ದರ್ಜೆಯ ನೌಕರರಲ್ಲಿ ಶೇ.90 ಸಂಖ್ಯೆಯನ್ನು ವಿಮಾ ನೌಕರರ ಸಂಘ ಹೊಂದಿದೆ. ಹಲವಾರು ವರ್ಷಗಳಿಂದ ಸಂಘಕ್ಕೆ ಮಾನ್ಯತೆ ನೀಡುವಂತೆ ಮನವಿ ಮಾಡುತ್ತ ಬಂದಿದ್ದರೂ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಇಲ್ಲಿಯವರೆಗೆ ಬೇಡಿಕೆ ನೆನೆಗುದಿಗೆ ಬಿದ್ದಿದೆ. ಕಾರಣ ಇನ್ನು ಮುಂದಾದರೂ ತಮ್ಮ ಸಂಘಕ್ಕೆ ಮಾನ್ಯತೆ ನೀಡುವಂತೆ ಸಂಘ ತಾಲೂಕು ಘಟಕ ಅಧ್ಯಕ್ಷ ಹುಲಗಯ್ಯ ಜಾಲವಾಡಗಿ, ಕಾರ್ಯದರ್ಶಿ ಶರಣಬಸವ ಒತ್ತಾಯಿಸಿದ್ದಾರೆ.
ಮತದಾರರ ಸೌಲಭ್ಯ ಕೇಂದ್ರ ಉದ್ಘಾಟನೆ
ಲಿಂಗಸ್ಗೂರು: ಸ್ಥಳೀಯ ತಹಸೀಲ್ದಾರ್ ಕಚೇರಿ ಚುನಾವಣಾ ಕಚೇರಿಯಲ್ಲಿ ಮತದಾರರ ಸೌಲಭ್ಯ ಕೇಂದ್ರವನ್ನು ಸಹಾಯಕ ಆಯುಕ್ತ ಟಿ. ಯೋಗೇಶ್ ಶುಕ್ರವಾರ ಉದ್ಘಾಟಿಸಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಲಿಂಗಸ್ಗೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಮತಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಹೊಸ ಸೇರ್ಪಡೆ, ಮತಪಟ್ಟಿಯಲ್ಲಿನ ತಿದ್ದುಪಡಿ, ವರ್ಗಾವಣೆ, ಹೊಸ ಗುರುತಿನ ಚೀಟಿ ನೀಡುವುದು ಸೇರಿದಂತೆ ಮತದಾರರಿಗೆ ಸಂಬಂಧಿಸಿದ ಎಲ್ಲ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಮತದಾರರ ಸೌಲಭ್ಯ ಕೇಂದ್ರ ಆರಂಭಿಸಲಾಗಿದೆ. ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಈ ವೇಳೆ ತಹಸೀಲ್ದಾರ್ ಜಿ.ಎಸ್. ಮಹಾಜನ್, ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದಾರ್ ಇದ್ದರು.
ಸೈನಿಕ ಶಾಲೆಗೆ ಆಯ್ಕೆ
ಮುದಗಲ್, ಮಾ. 14: ಸಮೀಪದ ತುರಡಗಿ ಸ. ಹಿ. ಪ್ರಾಥಮಿಕ ಶಾಲೆ ವಿದ್ಯಾರ್ಥಿ ಹನುಮಂತರಡ್ಡಿ ಮಲ್ಲಪ್ಪ ವಿಜಾಪುರದ ಸೈನಿಕ ಶಾಲೆಗೆ ಆಯ್ಕೆಯಾಗಿದ್ದಾನೆ. 2014-15ನೇ ಸಾಲಿಗಾಗಿ 6ನೇ ತರಗತಿಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ 6ನೇ ರ್ಯಾಂಕ್ ಪಡೆದಿದ್ದಾನೆ ಎಂದು ಶಾಲೆ ಮುಖ್ಯಗುರು ಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

