ರಾಜ್ಯಾಧ್ಯಕ್ಷರೆದುರೇ ಭಿನ್ನಮತ ಬಯಲು
ಮುದಗಲ್: ವಿಧಾನಸಭೆ ಚುನಾವಣೆಯಿಂದ ಉಂಟಾಗಿರುವ ಕಾಂಗ್ರೆಸ್‌ನಲ್ಲಿನ ಭೀನ್ನಮತ ಇನ್ನು ಜೀವಂತವಾಗಿದೆ ಎನ್ನುವುದಕ್ಕೆ ಶುಕ್ರವಾರ ಲಿಂಗಸುಗೂರನಲ್ಲಿ ನಡೆದ ಪಾದಯಾತ್ರೆಯಲ್ಲಿ ರಾಜ್ಯಧ್ಯಕ್ಷ ಜಿ. ಪರಮೇಶ್ವರನ್ನು ಪ್ರತ್ಯೇಕ ಎರಡು ಗುಂಪುಗಳು ಸ್ವಾಗತ ಮಾಡಿಕೊಂಡಿರುವುದೇ ಪ್ರತ್ಯಕ್ಷ ಸಾಕ್ಷಿಯಾಯಿತು.
ಕಾಂಗ್ರೇಸ್‌ನ ರಾಜ್ಯಧ್ಯಕ್ಷ ಜಿ. ಪರಮೇಶ್ವರ ನಗರಕ್ಕೆ ಆಗಮಿಸುತ್ತಿದ್ದಂತೆ ಅಮರೇಗೌಡ ಪಾಟೀಲ್ ಬಯ್ಯಾಪೂರ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಗಕಲ್ ಮತ್ತು ಕಾರ್ಯಕರ್ತರು ಬಸ್‌ನಿಲ್ದಾಣದ ಬಳಿಯ ಚೌಕದಿಂದ ಪಾದಯಾತ್ರೆಗೆ ಸ್ವಾಗತ ನೀಡಿದರೆ, ಇತ್ತ ಭಿನ್ನಮತಿಯ ಕಾಂಗ್ರೆಸ್ ಮುಖಂಡ ಶರಣಪ್ಪ ಮೇಟಿ, ಜಿ.ಪಂ. ಮಾಜಿ ಅಧ್ಯಕ್ಷ ಪಾಮಯ್ಯ ಮುರಾರಿ, ಬಸವರಾಜಗೌಡ ಗಣೇಕಲ್, ಮಲ್ಲೇಶಗೌಡ ಪಾಟೀಲ್ ಮಟ್ಟೂರ ಮತ್ತವರ ನೂರಾರು ಬೆಂಬಲಿಗರು ತಮ್ಮ ಹಳೆ ಕಾಂಗ್ರೆಸ್ ಕಚೇರಿಯ ಬಳಿ ಸ್ವಾಗತ ಕೋರಿದರು. ನಂತರ ಬಂದ ಲೋಕಸಭೆ ಅಭ್ಯರ್ಥಿ ಬಲವಂತ ನಾಯಕ್ ಶರಣಪ್ಪ ಮೇಟಿಯವರ ಬಳಿ ತೆರಳಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಗೆಲವಿಗೆ ಶ್ರಮಿಸಿ: ಮುಖಂಡರಲ್ಲಿ ಕಾರ್ಯಕರ್ತರಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇವೆ. ಅದನ್ನು ಕೂಡಲೇ ಶಮನ ಮಾಡಲಾಗುತ್ತದೆ. ಎಲ್ಲರೂ ಕಾಂಗ್ರೆಸ್ ಗೆಲವಿಗೆ ಶ್ರಮಿಸಬೇಕು ಎಂದರು.
ಅತ್ತ ಅಮರೇಗೌಡರ ನಿವಾಸ ಈಗಿನ ಕಾಂಗ್ರೆಸ್ ಕಚೇರಿಯ ಬಳಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಜಿ.ಪರಮೇಶ್ವರ, ಎನ್.ಎಸ್. ಬೋಸರಾಜ, ಜಿಲ್ಲಾಧ್ಯಕ್ಷ ವಸಂತಕುಮಾರ, ಅಮರೇಗೌಡ ಬಯ್ಯಾಪುರ ಮುಂತಾದವರು ಮಾತನಾಡಿದರು.
ಅಸಮಧಾನ: ಕಾಂಗ್ರೆಸ್ ಮುಖಂಡರ ಈ ಭಿನ್ನಮತ, ಪ್ರತ್ಯೇಕ ಸ್ವಾಗತ, ಗುಂಪುಗಾರಿಕೆಯನ್ನು ಕಂಡ ಕಾರ್ಯಕರ್ತರು ಅಸಮಧಾನಗೊಂಡರು. ಹಿರಿಯರಾದವರೇ ಈ ರೀತಿ ಗುಂಪುಗಾರಿಕೆ ಮಾಡಿದರೆ ಕಾಂಗ್ರೆಸ್ ಗತಿ ಏನಾಗುತ್ತದೆ ಎಂದು ಮಾತನಾಡಿಕೊಂಡರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಿನ್ನಮತ ತಾರಕಕ್ಕೇರಿದ್ದರಿಂದಲೇ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು. ಭಿನ್ನಮತ ಶಮನಕ್ಕೆ ಜಿಲ್ಲೆ ಮುಖಂಡರಾಗಲಿ, ರಾಜ್ಯ ಮುಖಂಡರಾಗಲಿ ಶ್ರಮಿಸದೇ ಇರುವುದು ಭಿನ್ನಮತ ಶಮನವಾಗದೆ ಬೂದಿ ಮುಚ್ಚಿದ ಕೆಂಡದಂತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

