ಅಮರೇಶ್ವರ ದೇವರ ಕಳಸ ಮೆರವಣಿಗೆ
ಲಿಂಗಸ್ಗೂರು: ತಾಲೂಕಿನ ಗುಡಗುಂಟಿ ಗ್ರಾಮದಲ್ಲಿ ಅಮರೇಶ್ವರ ದೇವರ ಕಳಸ ಮೆರವಣಿಗೆ ಪುರವಂತಿಕೆ ಸಮೇತ ಅದ್ಧೂರಿಯಾಗಿ ಶನಿವಾರ ಬೆಳಗಿನ ಜಾವ ಜರುಗಿತು.
ಇತಿಹಾಸ ಪ್ರಸಿದ್ಧ ಗುಡಗುಂಟಿ ಸುಕ್ಷೇತ್ರ ಅಮರೇಶ್ವರ ದೇವರ ಜಾತ್ರಾಮಹೋತ್ಸವ ಮಾ. 16ರಂದು ಮಹಾರಥೋತ್ಸವ ಕಾರ್ಯಕ್ರಮ ಜರುಗಲಿದೆ. ಶುಕ್ರವಾರ ಅಮರೇಶ್ವರ ದೇವರ ಪ್ರಥಮ ಉತ್ಸವ ಕಾರ್ಯ ನೆರವೇರಿದ ಬಳಿಕ ಮಾ.16 ರಂದು ಮಹಾರಥೋತ್ಸವ ಜರುಗಲಿದೆ. ಬಳಿಕ ರಾತ್ರಿಯಿಡಿ ಪುರವಂತಿಗೆ, ಮಹಿಳೆಯರಿಂದ ಕಳಸ, ಭಜನೆ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಹೊತ್ತ ಕಳಸ ಮೆರವಣಿಗೆ ಜರುಗಿತು. ಶನಿವಾರ ಬೆಳಗ್ಗೆ ಪಾದಯಾತ್ರೆ ಮೂಲಕ ಗುಂತಗೋಳಕ್ಕೆ ತರಳಲಾಯಿತು.
ಪಾದಯಾತ್ರೆ: ಶನಿವಾರ ಗುಂತಗೋಳ ಸಂಸ್ಥಾನದಲ್ಲಿ ಪುರವಂತಿಕೆ ಸಮೇತ ಮೆರವಣಿಗೆ ಜರುಗಿ ಅಮರೇಶ್ವರ ಸುಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ ಅಮರೇಶ್ವರದಲ್ಲಿ ತೃತೀಯ ಉತ್ಸವ, ಮಧ್ಯಾಹ್ನ ಮಹಾರಥೋತ್ಸವಕ್ಕೆ ಕಳಸಾರೋಹಣ ಜರುಗಲಿದೆ. ಸಂಜೆ 6.30 ಗಂಟೆಗೆ ಮಹಾರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಲಿದೆ. ಗುರುಗುಂಟಾದಲ್ಲಿ ಕಳಸ ಮೆರವಣಿಗೆಯಲ್ಲಿ ಗ್ರಾಮದ ಮುಖಂಡರಾದ ಗುಂಡಣ್ಣ ಅರಳಿ, ತಿಪ್ಪಣ್ಣ ಪತ್ತಾರ, ಆದಯ್ಯಸ್ವಾಮಿ ಕಳಸದಗುಡಿ, ಅಮರೇಶ ಕಳಸದಗುಡಿ, ಚನ್ನಬಸಯ್ಯ ಹೊರಪೇಟಮಠ, ನಾಗರಾಜ ಕಳಸದಗುಡಿ, ಬಸವರಾಜ ಬಲ್ಲಟಗಿ, ಅಮರೇಶಸ್ವಾಮಿ, ರೇವಣಸಿದ್ಧಯ್ಯ ಕಳಸದಗುಡಿ, ಮಲ್ಲಿಕಾರ್ಜುನ ಕಳಸದಗುಡಿ, ನಂದೇಶ ನಾಯಕ, ಲಿಂಗಪ್ಪ ಕುಂಬಾರ ಮತ್ತಿತರ ಭಕ್ತರು ಪಾಲ್ಗೊಂಡಿದ್ದರು.
ಜಾನುವಾರು ಜಾತ್ರೆ
ಲಿಂಗಸ್ಗೂರು: ತಾಲೂಕಿನ ಸುಕ್ಷೇತ್ರ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಾ.17ರಿಂದ ವಾರದವರೆಗೆ ಜಾನುವಾರು ಜಾತ್ರೆ ನಡೆಯಲಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಕಟಣೆ ಮೂಲಕ ತಿಳಿಸಿದೆ.
ಅಮರೇಶ್ವರ ಜಾತ್ರಾ ಮಹೋತ್ಸವ ಮಾ.16ರಂದು ಜರುಗಲಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಲಿಂಗಸ್ಗೂರು ವತಿಯಿಂದ ಮಾ.17ರಿಂದ ವಾರದವರೆಗೆ ಜಾನುವಾರು ಜಾತ್ರೆ ಜರುಗಿಸಲಾಗುವುದು. ರೈತರು ತಮ್ಮ ಜಾನುವಾರುಗಳನ್ನು ಮಾರಾಟಕ್ಕೆ ತರಬಹುದಾಗಿದೆ. ಜಾತ್ರೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಎಪಿಎಂಸಿ ಅಧ್ಯಕ್ಷ ಚನ್ನವೀರಪ್ಪಗೌಡ ಪಾಗದ್, ಕಾರ್ಯದರ್ಶಿ ಡಿ.ರಂಗಪ್ಪ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

