ಕಷ್ಟ ಎದುರಿಸದೇ ಮನುಷ್ಯ ಯಶಸ್ಸು ಕಾಣಲಾರ; ವಕೀಲ ಹೊನ್ನಾರೆಡ್ಡಿ
ಶಹಾಪುರ: ಕಷ್ಟಗಳನ್ನೆದುರಿಸದೇ ಮನುಷ್ಯ ಜೀವನದಲ್ಲಿ ಯಶಸ್ಸು ಕಾಣಲಾರ. ದುಡಿಯುವ ಕಾರ್ಮಿಕ ವರ್ಗ ಸಂಘಟನಾತ್ಮಕವಾಗಿ ಸಂಕಷ್ಟಗಳನ್ನು ಎದುರಿಸಿ ಬುದ್ಧಿವಂತಿಕೆ ಯಿಂದ ಸಫಲತೆ ಕಾಣಬೇಕೆಂದು ಶಹಾಪುರ ವಕೀಲರ ಸಂಘದ ಅಧ್ಯಕ್ಷ ಆರ್.ಎಂ. ಹೊನ್ನಾರಡ್ಡಿ ತಿಳಿಸಿದರು.
ಪಟ್ಟಣದ ಪುರಸಭೆಯ ಆವರಣದಲ್ಲಿ ಕಾರ್ಮಿಕ ವರ್ಗಕ್ಕಾಗಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಮಿಕರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಮಿಕರ ನೆರವಿಗೆ ಪ್ರಾಧಿಕಾರ: ಬೆವರು ಸುರಿಸಿ ದುಡಿಯುವ ವರ್ಗ ಮಾನವ ಸಮುದಾಯದಲ್ಲಿ ಅತ್ಯಂತ ಮೇಲ್ಪಂಕ್ತಿಯಾಗಿದ್ದು ದುಡಿತಕ್ಕೆ ಪ್ರತಿಫಲವಾಗಿ ಪಡೆಯಲೇಬೇಕು. ಆದರೆ ಪ್ರಸ್ತುತ ಸಂದರ್ಭದಲ್ಲಿ ದುಡಿಮೆಗೆ ತಕ್ಕಂತೆ ಫಲ ಸಿಗುತ್ತಿಲ್ಲ. ಹೀಗಾಗಿ ದುಡಿಯುವ ವರ್ಗ ಇನ್ನು ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅದಕ್ಕಾಗಿ ಸರ್ವರಿಗೂ ಸಮಬಾಳು ದಿಸೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ನೊಂದವರಿಗೆ ಹಕ್ಕುಗಳಿಂದ ವಂಚಿತರಾದವರಿಗೆ ಉಚಿತ ನ್ಯಾಯ ದೊರಕಿಸಿ ಕೊಡುವ ಪ್ರಯತ್ನ ಮಾಡುತ್ತಿದೆ.
ಕಾರ್ಮಿಕ ವರ್ಗ ಅನಕ್ಷರಸ್ಥರಿರಬಹುದು ಆದರೆ ಅಲೋಚಿಸುವ ಮಾತನಾಡುವ ಬುದ್ಧಿವಂತಿಕೆಯ ಪ್ರಯೋಜನ ಪಡೆದು ಸರ್ಕಾರದಿಂದ ಸಿಗುವ ಸಮಸ್ತ ಪ್ರಯೋಜನಗಳನ್ನು ಪಡೆಯಲು ಹಿಂದೆ ಮುಂದೆ ನೋಡಬಾರದು ಎಂದರು.
ನೆರವು ಪಡೆಯಲು ಸಲಹೆ: ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಅಭಿಯೋಜಕ ಎನ್.ಎಚ್. ಹಕೀಂ ಮಾತನಾಡಿ, ಕಾರ್ಮಿಕ ವರ್ಗಕ್ಕೆ ಸರ್ಕಾರ ಸಾಕಷ್ಟು ಅನುಕೂಲ ಕಲ್ಪಿಸಿದ್ದರೂ ಅವುಗಳನ್ನು ಪಡೆಯುವಲ್ಲಿ ಹಿಂಜರಿಯಬಾರದು. ಸಂವಿಧಾನದಡಿಯಲ್ಲಿ ಕಾರ್ಮಿಕರ ಹಕ್ಕುಗಳನ್ವಯ ಉಚಿತ ವೈದ್ಯಕೀಯ ಸೌಲಭ್ಯ ಕಾರ್ಮಿಕರ ಮಕ್ಕಳಿಗಾಗಿ ವಿಶೇಷ ಶಿಕ್ಷಣದ ಅನುಕೂಲವಿದ್ದು ಪ್ರಯೋಜನ ಪಡೆಯಬೇಕು. ಪರಿಸರ ಕಾಳಜಿಗೆ ನೈರ್ಮಲ್ಯ ವ್ಯವಸ್ಥೆಗೆ ಕಾರ್ಮಿಕ ವರ್ಗದ ಶ್ರಮ ಬಹುಮುಖ್ಯವಾಗಿದ್ದು ಯಾವುದೇ ತೊಂದರೆಯಾದರೂ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ನೆರವು ಪಡೆದುಕೊಳ್ಳಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಎಂ.ಎನ್. ಪೂಜಾರಿ ವಕೀಲರು ಮತ್ತು ಎಸ್.ಎಂ. ಸಜ್ಜನ ವಕೀಲರು ಕಾನೂನು ನೆರವುಗಳ ಬಗ್ಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

