ರಾಯಚೂರು

ಆಲಿಕಲ್ಲಿಗೆ ಕರಗಿದ 8.59 ಕೋಟಿಯ ಬೆಳೆ

Published On :

ಲಿಂಗಸ್ಗೂರು: ತಾಲೂಕಿನಲ್ಲಿ ಮಾ.7 ರಂದು ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ರು.    8.59 ಕೋಟಿ ಹಾನಿ ಸಂಭವಿಸಿದ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
 ತಾಲೂಕಿನ ಅಮರೇಶ್ವರ, ದೇವರಭೂಪುರ, ಗೋನವಾಟ್ಲ, ಗುಂತಗೋಳ, ಹಂಚಿನಾಳ, ಯಳಗುಂದಿ, ಕಡದರಗಡ್ಡಿ ಸೇರಿದಂತೆ ಇನ್ನಿತರೆ ಗ್ರಾಮಗಳ ವ್ಯಾಪ್ತಿಯಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿ, ಕೆಲವೆಡೆ ಕುರಿ, ಮೇಕೆ, ಕೋಳಿ ಸೇರಿದಂತೆ ಜಾನುವಾರುಗಳು ಸಾವನ್ನಪ್ಪಿದ್ದವು. ಹಾನಿಗೀಡದ ಪ್ರದೇಶಕ್ಕೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷಾ ಕಾರ್ಯ ಕೈಗೊಳ್ಳುವಲ್ಲಿ ನಿರತರಾಗಿದ್ದರು. ಹಾನಿಗೀಡಾದ ಕುರಿತು ಕಂದಾಯ ಇಲಾಖೆ ತನ್ನ ವರದಿ ಸಿದ್ಧಪಡಿಸಿದೆ.
ಹಾನಿ ವಿವರ: ಇತ್ತೀಚಿಗೆ ಸುರಿದ ಆಲಿಕಲ್ಲು ಮಳೆಯಿಂದ ತಾಲೂಕಿನ ವಿವಿಧೆಡೆ 16 ಕಿಮೀ ರಸ್ತೆ ಹಾನಿಗೆ ರು.    14.50 ಲಕ್ಷ ಮತ್ತು ಸೇತುವೆ ಹಾನಿಗೆ 6 ಲಕ್ಷ ಹಾಗೂ ವಿದ್ಯುತ್ ಮತ್ತು ಕಂಬಗಳ ಹಾನಿಗೆ 5.5 ಲಕ್ಷ ಸೇರಿದಂತೆ ಒಟ್ಟು 26 ಲಕ್ಷ ಹಾನಿ ಸಂಭವಿಸಿದೆ. 193 ಮನೆಗಳ ಹಾನಿಗೆ 3.71 ಲಕ್ಷ ಅಲ್ಲದೆ 6 ಗ್ರಾಮಗಳಲ್ಲಿ 85 ಜಾನುವಾರುಗಳು ಸಾವನ್ನಪ್ಪಿದ್ದು, 4.10 ಲಕ್ಷ ಹಾನಿ ಅಂದಾಜು ಮಾಡಲಾಗಿದೆ.
 ತೋಟಗಾರಿಕೆ ಬೆಳೆಗಳು 132 ಹೆಕ್ಟೇರ್ ಪ್ರದೇಶದಲ್ಲಿ ರು.    8.01 ಕೋಟಿ ಹಾನಿಗೀಡಾಗಿದ್ದು, ಕೃಷಿ ಪ್ರದೇಶದಲ್ಲಿ 280.35 ಹೆಕ್ಟೇರ್ ಪ್ರದೇಶದಲ್ಲಿ 24.99 ಲಕ್ಷ ಹಾನಿ ಸಂಭವಿಸಿದ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕೇಂದ್ರ ತಂಡ ಭೇಟಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇತ್ತಿಚಿಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿದೆ.  ಕೆಲವೆಡೆ ಜಾನುವಾರುಗಳು ಸಾವನ್ನಪ್ಪಿವೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ತಜ್ಞರ ತಂಡ ಲಿಂಗಸ್ಗೂರು ತಾಲೂಕಿಗೆ ಮಂಗಳವಾರ ಆಗಮಿಸಲಿದ್ದು, ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ಕೈಗೊಳ್ಳಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.