ರಾಯಚೂರು

ನೋಡುಗರನ್ನು ರಂಜಿಸಿದ ವೀರಗಾಸೆ

Published On :

ಮುದಗಲ್: ಪಟ್ಟಣದ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದ ನಂದಿ ಮೆರವಣಿಗೆ ಕಾರ್ಯಕ್ರಮದಲ್ಲಿ ಮಹಿಳಾ ವೀರಗಾಸೆ ನೃತ್ಯ ಹಾಗೂ ಆಮದಿಹಾಳ ಕರಡಿ ಮಜಲು ವಾದ್ಯಗಳು ಸಾರ್ವಜನಿಕರ ಮನಸೆಳೆದವು.
ಚಿಕ್ಕಮಗಳೂರ ಜಿಲ್ಲೆಯ ತರಿಕೇರಿ ತಾಲೂಕಿನ ಲಿಂಗದಳ್ಳಿ ಸಂವಾಧ್ರಿ ಮಹಿಳಾ ವೀರಗಾಸೆ ನೃತ್ಯ ಕಲಾ ತಂಡದವರು ಸತತ ನಾಲ್ಕು ಗಂಟೆಗಳ ಕಾಲ ವೀರಗಾಸೆ ನೃತ್ಯ ನಡೆಸುವ ಮೂಲಕ ಜನರ ಮೈನವಿರೇಳಿಸುವಂತೆ ಮಾಡಿತು. ವೀರಭದ್ರನ ಅವತಾರ, ಚಾಮುಂಡಿ ಅವತಾರಗಳ ವೇಷಧಾರಿಗಳು ಮದ್ದಲಿಗಳ ಆಳಕ್ಕೆ ಹೆಜ್ಜೆ ಹಾಕುತ್ತಿದ್ದರೆ ಮಹಿಳೆಯರು, ಪುರುಷರು ಶಹಬ್ಬಾಷ್‌ಗಿರಿ ನೀಡಿದರು.
ಮನಸೆಳೆದ ಕರಡಿ ಮಜಲು: ವಾರ್ಡ್ 12ರಲ್ಲಿರುವ ಬಸವಣ್ಣ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೊರಟ ಮೆರವಣಿಗೆ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿತು. ಇದೇ ಸಮಯದಲ್ಲಿ ಆಮದಿಹಾಳ ಗ್ರಾಮದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ ಗದ್ದೆಪ್ಪ ಭಜಂತ್ರಿಯವರ ಕರಡಿ ಮಜಲು ವಾದ್ಯ ನೋಡುಗರ ಮನಸೆಳೆದವು.  ಎರಡು ತಂಡಗಳ ವಿವಿಧ ಭಂಗಿಯ ಕಲಾ ಪ್ರದರ್ಶನವನ್ನು ಕಂಡ ಜನರು ಉರಿ ಬಿಸಿಲನ್ನು ಲೆಕ್ಕಿಸಿದೆ ಕುತೂಹಲದಿಂದ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ 135 ಕುಂಭಗಳನ್ನು ಹೊತ್ತ ಮಹಿಳೆಯರು ಬೇಸರವಿಲ್ಲದೆ ನಾಲ್ಕು ಗಂಟೆವರೆಗೆ ನಡೆದರು.
 ಮುಖಂಡರಾದ ಸುರೇಂದ್ರಗೌಡ ಪಾಟೀಲ್, ಚನ್ನಬಸನಗೌಡ, ಅಮರೇಗೌಡ ಮಟ್ಟೂರು, ಗುರುಬಸ್ಸಪ್ಪ ಸಜ್ಜಲ್, ಮಹಾಂತೇಶ ಪಾಟೀಲ್, ಲಿಂಗಪ್ಪ ಹಣಗಿ, ಉದಯಕುಮಾರ ಕಂಬಾರ, ಶಿವಪ್ಪ ಸುಂಕದ್, ರಾಜಕುಮಾರ ಪಾಟೀಲ್, ರಾಘವೆಂದ್ರ ದೇಶಪಾಂಡೆ, ಹೇಮಂತ ನಾಗಲಾಪುರ, ನಾಗನಗೌಡ, ಎಲ್.ಟಿ.ನಾಯಕ, ಶಿವರಾಜ ತಳವಾರ, ಅನಿಲಕುಮಾರ, ಅಶೋಕಗೌಡ ಪಾಟೀಲ್, ಯಮಲಪ್ಪ ಬುಸೆಟ್ಟಿ, ಶಶಿಧರ ಪಾಟೀಲ್, ಸೇರಿದಂತೆ ಅನೇಕ ಮುಖಂಡರು, ಭಕ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.