ಸೃಜನ ಸಾಹಿತ್ಯ ರಚನೆಗೆ ಕೀಳರಿಮೆ ಬೇಡ: ನಾಗವೇಣಿ
ಸಿಂಧನೂರು: ಸಾಹಿತ್ಯ ಸೃಷ್ಟಿಯ ಭಾಷೆಯಲ್ಲಿ ಯಾವುದೇ ಸ್ವರೂಪದ ಸ್ವಾತಂತ್ರ್ಯ ಮೊಟಕಾಗಬಾರದು. ಕಾವ್ಯ, ಕಥೆ ವಸ್ತು, ನಿರೂಪಣೆಯಲ್ಲಿ ಪುರುಷರು ಬಳಸುವ ಭಾಷೆ ಬಳಸುವುದು ಬೇಡವೆನ್ನುವುದು ಕೀಳರಿಮೆಯಾಗುತ್ತದೆ. ಮಹಿಳೆಯರನ್ನು ನೋಡುವ ಸಮಾಜದ ದೃಷ್ಟಿ ಬದಲಾಗಬೇಗಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಗ್ರಂಥಪಾಲಕಿ ಡಾ. ಎಚ್.ನಾಗವೇಣಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ “ÈÚßÕ׿ ಮತ್ತು ಸೃಜನ Pþæß’ ಕುರಿತು ವಿಶೇಷ ಭಾಷಣಕಾರರಾಗಿ ಅವರು ಮಾತನಾಡಿದರು.
ದೌರ್ಜನ್ಯ ಪ್ರತಿಭಟಿಸಲು ಹಿಂದೇಟೇಕೆ?: ಪ್ರಾರಂಭದಲ್ಲಿ ತಮ್ಮ ಕುಟುಂಬ ಸದಸ್ಯರು ಬರೆದ ಕಥಾ ವಸ್ತು, ಕಥೆಯಲ್ಲಿ ಬರುವ ವಿವಿಧ ಪ್ರಸಂಗಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೆ ತಾವು ಜಗ್ಗದೆ ಸಾಹಿತ್ಯ ಕೃಷಿಯನ್ನು ಮುಂದುವರೆಸಿಕೊಂಡು ಬಂದಿರುವುದಾಗಿ ಹೇಳಿದ ಅವರು, ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿದ್ದು ಕಾನೂನು ನೆರವಿನೊಂದಿಗೆ ಮಹಿಳೆಯರು ಅಂತಹ ಘಟನೆಗಳನ್ನು ಪ್ರತಿಭಟಿಸಲು ಹಿಂದೇಟು ಹಾಕಬಾರದೆಂದು ಸಲಹೆ ನೀಡಿದರು.
ಐಚ್ಛಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳು ರಚಿಸಿದ “A«Úß ಒಲಿದಂತೆ ÔÛsÚßÈæ’ ಕೃತಿಯನ್ನು ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್. ಕಂಬಳಿ ಬಿಡುಗಡೆಗೊಳಿಸಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ನಾಗಣ್ಣ ಕಿಲಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಪ್ರಹ್ಲಾದರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಮಿಕ ಮುಖಂಡ ವೆಂಕನಗೌಡ ಗದ್ರಟಗಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಖಾದರಬಾಷ ಸ್ವಾಗತಿಸಿದರು. ರಾಮಣ್ಣ ಹಿರೇಬೇರಿಗಿ ನಿರೂಪಿಸಿದರು. ಹುಸೇನಪ್ಪ ಅಮರಾಪುರ ವಂದಿಸಿದರು. ವಿದ್ಯಾರ್ಥಿಗಳು ಮತ್ತು ಮುಖ್ಯಭಾಷಣಕಾರರ ನಡುವೆ ಸುದೀರ್ಘ ಸಂಭಾಷಣೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

