ಇಂದು 'ತಾಳಿಯ ತಕರಾರು' ನಾಟಕ ಉಚಿತ ಪ್ರದರ್ಶನ
ರಾಯಚೂರು: ಇಂದಿನ ದಿನಮಾನದಲ್ಲಿ ದ್ವಂದಾರ್ಥದ ಸಂಭಾಷಣೆ, ಅಶ್ಲೀಲ ನೃತ್ಯಗಳಿಂದ ಕೂಡಿದ ನಾಟಕಗಳ ಪ್ರದರ್ಶನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ಆದರೆ ಇದೆಲ್ಲದರ ಹೊರತಾದ ಕುಟುಂಬದವರೆಲ್ಲರೂ ಕುಳಿತು ವೀಕ್ಷಿಸುವಂಥ ನಾಟಕಗಳ ಪ್ರದರ್ಶನಕ್ಕೆ ತಮ್ಮ ತಂಡ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ನಾಟಕಕಾರ ಅಲ್ತಾಫ್ ರಂಗಮಿತ್ರ ತಿಳಿಸಿದರು.
ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 4ರಂದು ಸಂಜೆ 6.30ಕ್ಕೆ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ 60ರ ದಶಕದಲ್ಲಿ ಹೆಸರು ಮಾಡಿದ್ದ 'ತಾಳಿಯ ತಕರಾರು' ನಾಟಕದ ಉಚಿತ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ನಾಟಕ ಪ್ರದರ್ಶನದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ವಹಿಸಲಿದ್ದಾರೆ. ಮಾಜಿ ಶಾಸಕ ಎ. ಪಾಪಾರೆಡ್ಡಿ ಅಧ್ಯಕ್ಷತೆ ವಹಿಸುವರು. ಆರ್ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜಶೇಖರ ನಾಯಕ, ಎಪಿಎಂಸಿ ಅಧ್ಯಕ್ಷ ನರಸನಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಹಾಗೂ ಪುಂಡ್ಲ ನರಸರೆಡ್ಡಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಅಶ್ಲೀಲ ನೃತ್ಯ ಹಾಗೂ ದ್ವಂದಾರ್ಥದ ಸಂಭಾಷಣೆಗಳಿರುವ ನಾಟಕ ಪ್ರದರ್ಶನಗಳೇ ಹೆಚ್ಚಾಗಿರುವುದರಿಂದ ಮಹಿಳೆಯರು ಹಾಗೂ ಸುಸಂಸ್ಕೃತರು ನಾಟಕಗಳಿಂದ ದೂರವಾಗುತ್ತಿದ್ದಾರೆ. ಈ ಹಿನ್ನೆಲೆ ಕೌಟುಂಬಿಕ ಹಾಗೂ ಉತ್ತಮ ಕಥೆಯುಳ್ಳ ನಾಟಕಗಳ ಪ್ರದರ್ಶನಕ್ಕೆ ತಂಡ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಅಲ್ತಾಫ್ ರಂಗಮಿತ್ರ ಹೇಳಿದರು.
ಕಲಾವಿದರಾದ ಮಿಮಿಕ್ರಿ ಬಸವರಾಜ, ಮುತ್ತಣ್ಣ, ರಮೇಶ ಜಾಲಿಬೆಂಚಿ, ವೀರೇಶ, ಅಣವೀರಯ್ಯ ಸ್ವಾಮಿ ಇದ್ದರು.
ರುದ್ರ ಸ್ವಾಮೀಜಿ ಗದ್ದುಗೆ ಉತ್ಸವ
ಮುದಗಲ್: ಸಮೀಪದ ಯರದೊಡ್ಡಿ ಗ್ರಾಮದ ಆರಹಾಳ ಶ್ರೀ ಗುರು ರುದ್ರಸ್ವಾಮಿಗಳ ಗದ್ದುಗೆಯ ಪೂಜಾ ಕಾರ್ಯಕ್ರಮ ಬಸವ ಜಯಂತಿಯ ದಿನವಾದ ಶುಕ್ರವಾರ ಶ್ರದ್ಧೆ, ಭಕ್ತಿಯಿಂದ ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಆರಹಾಳ ಗ್ರಾಮದ ಮರಿ ಸ್ವಾಮೀಜಿ, ಜಿ.ಪಂ. ಸದಸ್ಯ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್, ಗ್ರಾ.ಪಂ. ಮಾಜಿ ಸದಸ್ಯ ಯಮನೂರ, ಮುಖಂಡರಾದ ವೀರೇಶ, ದುರುಗಪ್ಪ, ಬಸವರಾಜ ಅಮಾದಗೌಡರ್ ಇದ್ದರು.
ಮಠದಲ್ಲಿ ಇಂದು ಸಭೆ
ಸಿಂಧನೂರು: ನಗರದ ಕುಷ್ಟಗಿ ರಸ್ತೆಯಲ್ಲಿರುವ ಬಾಳೆ ಹೊನ್ನೂರು ರಂಭಾಪುರಿ ಖಾಸಾಶಾಖಾ ಮಠದಲ್ಲಿ ಮೇ 4ರಂದು ಸಂಜೆ 5ಕ್ಕೆ ರೇಣುಕಾಚಾರ್ಯರ ಯುಗಮಾನೋತ್ಸವದ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಶಾಖಾಮಠದ ಸೋಮನಾಥ ಶಿವಾಚಾರ್ಯರು ಸಭೆಯ ಸಾನ್ನಿಧ್ಯ ವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

