ರಾಯಚೂರು

ಪರಿಹಾರಕ್ಕೆ ಆಗ್ರಹಿಸಿ ಕರವೇ ಮನವಿ

Published On :

ರಾಯಚೂರು: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಮಾರಾಟಕ್ಕೆ ತರುವ ಕೃಷಿ ಉತ್ಪನ್ನಗಳಿಗೆ ಮಳೆ ನೀರಿನಿಂದ ಸೂಕ್ತ ರಕ್ಷಣೆ ಒದಗಿಸುವ ಕಾರ್ಯ ಮಾಡಲು ಒತ್ತಾಯಿಸಿ ಸೋಮವಾರ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ ಕರವೇ ಜಿಲ್ಲಾಧ್ಯಕ್ಷ ವಿನೋದರೆಡ್ಡಿ ಮತ್ತಿತರರು, ಈಚೆಗೆ ನಗರದಲ್ಲಿ ಸುರಿದ ಮಳೆಯಿಂದಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಮಾರಾಟಕ್ಕೆ ತಂದಿರಿಸಿದ್ದ ಬತ್ತ ಮತ್ತಿತರೆ ಬೆಳೆಯು ನೀರಿನಿಂದ ತೊಯ್ದು ರೈತರು ಆತಂಕಕ್ಕೆ ಸಿಲುಕಿದ್ದಾರೆಂದು ದೂರಿದರು.
ಎಪಿಎಂಸಿಯಿಂದ ರು. 22 ಕೋಟಿ  ವೆಚ್ಚದಲ್ಲಿ ಈಗಾಗಲೇ ಮಳೆ ನೀರಿನಿಂದ ರೈತರ ಕೃಷಿ ಉತ್ಪನ್ನ ಸಂರಕ್ಷಣೆಗೆ ನಿರ್ಮಿಸಿದ ಶೆಡ್ ಪ್ರಯೋಜನಕ್ಕೆ ಬಾರದಂತೆ ನಿರ್ಮಿಸಲಾಗಿದೆ. ಶೆಡ್‌ಗಳಿದ್ದರೂ ನೀರು ಬೆಳೆ ಸಂಗ್ರಹಿಸಿದ ಸ್ಥಳಕ್ಕೆ ನುಗ್ಗುತ್ತಿರುವುದು ಕಾಮಗಾರಿಯ ವೈಫಲ್ಯ ಪ್ರದರ್ಶಿಸಿದೆ ಎಂದು ಟೀಕಿಸಿದರು.
ಈಚೆಗೆ ಸುರಿದ ಮಳೆಗೆ ಎಪಿಎಂಸಿಯಲ್ಲಿರಿಸಿದ್ದ ವಿವಿಧ ಬೆಳೆಗಳು ನೀರಿನಿಂದ ಒದ್ದೆಯಾಗಿ ರೈತರು ನಷ್ಟಕ್ಕೆ ಸಿಲುಕಿದ್ದಾರೆ. ಈ ಹಾನಿಗೆ ಎಪಿಎಂಸಿ ಆಡಳಿತವೇ ನೇರ ಹೊಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ರೈತರಿಗೆ ಆಗಿರುವ ಹಾನಿಗೆ ಪರಿಹಾರ ಒದಗಿಸಬೇಕು. ವೈಜ್ಞಾನಿಕ ರೀತಿಯಲ್ಲಿ ಶೆಡ್‌ಗಳನ್ನು ನಿರ್ಮಿಸುವಂತೆ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದರು. ಸಂಘಟನೆಯ ಪ್ರಮುಖರಾದ  ಅಮರಯ್ಯಸ್ವಾಮಿ, ಎಂ.ಭೀಮಣ್ಣ, ಬಾಬಾ, ನರಸಪ್ಪ ಏಗನೂರು, ನರಸಿಂಹ, ವೀರೇಶ್, ನಿಜಾಮುದ್ದೀನ್, ದೇವರೆಡ್ಡಿ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.