ಧರ್ಮಸ್ಥಳ ಗ್ರಾಮಾಭಿವೃದ್ಧಿಗೆ ವರ್ಷ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಮೇ 14
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಜಿಲ್ಲೆಯಲ್ಲಿ ಕಾರ್ಯಾರಂಭಿಸಿ ವರ್ಷ ಪೂರೈಸಿದ್ದು, ಸಣ್ಣ ರೈತರ ಸಂಘಟನೆ, ಗ್ರಾಮೀಣ ಮಹಿಳೆಯರ ಸಬಲೀಕರಣ ಕಾರ್ಯದಲ್ಲಿ ಸಂಸ್ಥೆಯು ಪ್ರಗತಿ ಸಾಧಿಸಿದೆ ಎಂದು ಯೋಜನೆಯ ಹೈ.ಕ. ಪ್ರಾದೇಶಿಕ ವಿಭಾಗದ ನಿರ್ದೇಶಕ ಕೆ. ಬೂದಪ್ಪಗೌಡ ತಿಳಿಸಿದರು.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆಯು ಭವಿಷ್ಯದಲ್ಲಿ ಯುವಕರನ್ನು ದೃಷ್ಟಿಯಲ್ಲಿರಿಸಿಕೊಂಡು ಉಳಿತಾಯ ಖಾತೆ ಹಾಗೂ ಯುವಕರನ್ನು ಕೃಷಿಯಲ್ಲಿ ತೊಡಗಿಸುವಂಥ ಯೋಜನೆ ಜಾರಿಗೆ ತರಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 5 ಕಡೆ ಸಂಸ್ಥೆಯ ಯೋಜನಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಕಚೇರಿಗಳಲ್ಲಿ ಐವರು ಕಚೇರಿ ಪ್ರಬಂಧಕರು, ಕಿರು ಆರ್ಥಿಕ ವ್ಯವಹಾರ ಪ್ರಬಂಧಕರು, 35 ಜನ ಮೇಲ್ವಿಚಾರಕರು, 6 ಜನ ಕೃಷಿ ಮತ್ತು ಹೈನುಗಾರಿಕೆ ಮೇಲ್ವಿಚಾರಕರು, ಐವರು ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳು ಸೇರಿ ಒಟ್ಟು 136 ಜನ ಕಾಯಂ ಸಿಬ್ಬಂದಿ ಹಾಗೂ 245 ಜನ ಸೇವಾ ಪ್ರತಿನಿಧಿಗಳಿದ್ದಾರೆಂದು ತಿಳಿಸಿದರು.
ಕಾರ್ಯ ನಿರ್ವಹಣೆ: ಮಹಿಳಾ ಸ್ವಸಹಾಯ ಸಂಘಗಳ ರಚನೆ, ಕಿರು ಆರ್ಥಿಕ ವ್ಯವಹಾರ, ಸ್ವ ಉದ್ಯೋಗ ಚಟುವಟಿಕೆ, ಆರೋಗ್ಯ ವಿಮಾ ಕಾರ್ಯ ಕ್ರಮ, ಕೃಷಿ ಸಂವರ್ಧನೆ, ಸಾಮಾಜಿಕ ಅರಣ್ಯೀಕರಣ, ಪರ್ಯಾಯ ಇಂಧನ ವ್ಯವಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಯೋಜನೆಯ ಪಾಲುದಾರ ಕುಟುಂಬಗಳಿಗೆ ಆರ್ಥಿಕ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಐಡಿಬಿಐ ಬ್ಯಾಂಕ್ ಮೂಲಕ 10.66 ಕೋಟಿ ಪ್ರಗತಿ ನಿಧಿ ಸಾಲ ನೀಡಲಾಗಿದೆ. ಜಿಲ್ಲೆಯಲ್ಲಿ 5167 ಮಹಿಳಾ ಸ್ವಸಹಾಯ ಸಂಘ ಸ್ಥಾಪಿಸಲಾಗಿದೆ. 54,567 ಸದಸ್ಯರನ್ನು ಸೇರಿಸಲಾಗಿದೆ ಎಂದು ಹೇಳಿದರು.
ವಿತರಣೆ: ಸಂಘಗಳ ಬಲವರ್ಧನೆಗೆ 6439 ಜನರಿಗೆ ಸಂಘ ನಿರ್ವಹಣಾ ತರಬೇತಿ ನೀಡಲಾಗಿದೆ. 5167 ಸಂಘಗಳಿಗೆ ದಾಖಲೆ ಪುಸ್ತಕಗಳನ್ನು ಉಚಿತವಾಗಿ ನೀಡಲಾಗಿದೆ. ಗ್ರಾಮ ನೈರ್ಮಲ್ಯ ಹಾಗೂ ನಾಗರಿಕ ಪ್ರಜ್ಞೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ 8650 ಪ್ರಗತಿಬಂಧು ಸ್ವಸಹಾಯ ಸಂಘ, 43 ಕೋಟಿ ಪ್ರಗತಿ ನಿಧಿ ಸಾಲ ನೀಡಿಕೆ, 1350 ಶೌಚಾಲಯ ನಿರ್ಮಾಣ, 105 ಗೋಬರ್ ಗ್ಯಾಸ್ ಘಟಕ ಸ್ಥಾಪಿಸಲಾಗುವುದು. 365 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಯೋಜನೆಯ ಜಿಲ್ಲಾ ನಿರ್ದೇಶಕ ಬಿ. ಶೇಖರಗೌಡ, ಯೋಜನಾಧಿಕಾರಿ ಪುರುಷೋತ್ತಮ, ರಾಘವೇಂದ್ರ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

