ರಾಯಚೂರು

ಉಪನಯನದಿಂದ ವ್ಯಕ್ತಿತ್ವಕ್ಕೆ ಸಂಸ್ಕಾರ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಮೇ 19
ನೂರಾರು ವರ್ಷಗಳ ಇತಿಹಾಸವಿರುವ ವೈದಿಕ ಸಂಪ್ರದಾಯದಲ್ಲಿ ಉಪನಯನಕ್ಕೆ ಮಹತ್ವದ ಸ್ಥಾನ ನೀಡಲಾಗಿದ್ದು ಇದರಿಂದ ವ್ಯಕ್ತಿಯ ವ್ಯಕ್ತಿತ್ವಕ್ಕೆ ಸಂಸ್ಕಾರ ದೊರೆಯುತ್ತದೆ ಎಂದು ಉಡುಪಿಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಪಾದಂಗಳವರು ನುಡಿದರು.
ನಗರದ ಬ್ರಾಹ್ಮಣ ಬೀದಿಯಲ್ಲಿರುವ ವೇದವ್ಯಾಸ ವೇದಿಕೆಯಲ್ಲಿ ಸೋಮವಾರ ಅನಂತ ಪದ್ಮನಾಭ ಜ್ಞಾನ ಪ್ರಸಾರ ಸಮಿತಿ ಆಯೋಜಿಸಿದ್ದ ಸಾಮೂಹಿಕ ಧರ್ಮೋಪನಯನ ಹಾಗೂ ಭಾಗವತ ಮಂಗಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಭಾಗವತ ಎಲ್ಲರಿಗೂ ಪ್ರಿಯವಾಗಿದ್ದು ಕೃಷ್ಣನನ್ನು ಸ್ಮರಿಸುವುದರಿಂದ ಕಷ್ಟಗಳು ದೂರವಾಗುತ್ತವೆ. ಕಾರಣ ಮಾನವ ಕುಲವೆಲ್ಲ ಕೃಷ್ಣನಾಮ ಜಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
11 ಬಡ ವಟುಗಳಿಗೆ ಸಂಸ್ಕಾರ: ಜ್ಞಾನ ಪ್ರಸಾರ ಸಮಿತಿ ಕಾರ್ಯಾಧ್ಯಕ್ಷ ಅಲಬನೂರು ರಾಘವೇಂದ್ರರಾವ್ ಕುಲ್ಕರ್ಣಿ ಮಾತನಾಡಿ, ಅನಂತ ಪದ್ಮನಾಭ ಜ್ಞಾನ ಪ್ರಸಾರ ಸಮಿತಿಯು ನಿರಂತರವಾಗಿ ತಿಂಗಳಿಗೆ ಎರಡು ಬಾರಿ ಜ್ಞಾನ ಸತ್ರ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಪ್ರತಿ ಬಾರಿ ವಿವಿಧ ವಿದ್ವಾಂಸರನ್ನು ಕರೆಸಿ ಉಪನ್ಯಾಸಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಮೂಹಿಕ ಧರ್ಮೋಪನಯನ ನಡೆಸಿ 11 ಬಡ ವಟುಗಳಿಗೆ ಉಪನಯನ ಸಂಸ್ಕಾರ ನೀಡಲಾಗಿದೆ ಎಂದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲ್ಕರ್ಣಿ ಮಾತನಾಡಿದರು. ಜ್ಞಾನ ಪ್ರಸಾರ ಸಮಿತಿಯ ಉಪಾಧ್ಯಕ್ಷ ರಾಮಕೃಷ್ಣಾಚಾರ್ ಗೋನವಾರ, ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ ಗುಡಿ, ಗೀತಾಬಾಯಿ ಚನ್ನಳ್ಳಿ, ಬಾಬುರಾವ್ ಮತ್ತಿತರರು ಮಾತನಾಡಿದರು.
ಕೃತಿ ಬಿಡುಗಡೆ: ಇದೇ ವೇಳೆ ಗಂಗಾವತಿಯ ನರ್ಮದಾಬಾಯಿ ಅವರು ಬರೆದ ಗುರುಗಳ ಹರಕೆ ಎಂಬ ಕೃತಿಯನ್ನು ಪಲಿಮಾರು ಮಠದ ಶ್ರೀಗಳು ಬಿಡುಗಡೆ ಮಾಡಿದರು. ನಂತರ ಶ್ರೀಗಳಿಂದ ಆಶೀರ್ವಚನ ನಡೆಯಿತು.
ಪಲಿಮಾರು ಮಠದ ದಿವಾನ ಗಿರೀಶಾಚಾರ್, ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ನರಸಿಂಗರಾವ್ ಚನ್ನಳ್ಳಿ ನಗರಸಭೆ ಸದಸ್ಯ ವೆಂಕಟೇಶ ಬಂಡಿ ವಕೀಲ, ರಾಮು ಕಲ್ಲೂರು ಮತ್ತಿತರರು ಭಾಗವಹಿಸಿದ್ದರು. ಉಪನಯನದ ಕಾರ್ಯಕ್ರಮವು ಹೊಸಪೇಟೆಯ ಪಾರ್ಥಸಾರಥಿ ಜೋಶಿ ನೇತೃತ್ವದಲ್ಲಿ ನಡೆಯಿತು.
ಸನ್ಮಾನ: ಕಳೆದ 40 ವರ್ಷಗಳಿಂದ ಫೋಟೊ ಫ್ರೇಮ್ ವರ್ಕರ್ ಆಗಿ ಕೆಲಸ ಮಾಡುತ್ತಿರುವ ಕೇಶವರಾವ್ ದಂಪತಿ ಹಾಗೂ 50 ವರ್ಷಗಳಿಂದ ವೈದಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಬಾದರ್ಲಿ ವೆಂಕಪ್ಪಾಚಾರ್, ಶಿಕ್ಷಕ ವಾಸುದೇವಾಚಾರ ಉಪ್ಪಳ, ಕೀಶನ್‌ರಾವ್ ಕುಲ್ಕರ್ಣಿ, ಅನಂತಾಚಾರ್ ಸಾಲಗುಂದಾ ಮತ್ತಿತರರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.