ಕುಪ್ಪಳಿಯಲ್ಲಿ ರಂಗ ತರಬೇತಿ ಶಿಬಿರ
ಕ.ಪ್ರ. ವಾರ್ತೆ, ಶಿವಮೊಗ್ಗ, ಏ.3
ಸಾಗರದ ಸ್ಪಂದನ ಸಂಸ್ಥೆ ಹಾಗೂ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಆಶ್ರಯದಲ್ಲಿ ತೀರ್ಥಹಳ್ಳಿಯ ಕುಪ್ಪಳಿಯಲ್ಲಿ ಮೇ 10 ರಿಂದ 19ರ ವರೆಗೆ 10 ದಿನಗಳ ಕಾಲ 10 ರಿಂದ 14 ವರ್ಷದ ಮಕ್ಕಳಿಗಾಗಿ ರಾಜ್ಯ ಮಟ್ಟದ ರಂಗ ತರಬೇತಿ ಶಿಬಿರ ಹಮ್ಮಿಕೊಂಡಿದೆ.
ರಾಷ್ಟ್ರಕವಿ ಕುವೆಂಪು ಅವರ ಕೃತಿಗಳನ್ನಾಧರಿಸಿ ಶಿಬಿರ ಹಮ್ಮಿಕೊಂಡಿದ್ದು, ಭಾಷೆ, ನಡವಳಿಕೆ, ಸಾಮಾಜಿಕ ಜವಾಬ್ದಾರಿ, ವ್ಯಕ್ತಿತ್ವ ವಿಕಸನ, ಆರೋಗ್ಯ, ಕಾನೂನು ಮಾಹಿತಿ, ಸಂಗೀತ, ಸಾಹಿತ್ಯ, ನೃತ್ಯ, ಆಟ, ರಂಗ ತರಬೇತಿ, ಓದು, ಸಿನಿಮಾ ಪ್ರದರ್ಶನ ಮತ್ತು ನಾಟಕದಲ್ಲಿನ ಅಭಿನಯ ಕುರಿತಂತೆ ತರಬೇತಿ ನೀಡಲಾಗವುದು ಎಂದು ಬುಧವಾರದ ಸುದ್ದಿಗೋಷ್ಠಿಯಲ್ಲಿ ಸ್ಪಂದನ ತಂಡದ ಕಾರ್ಯದರ್ಶಿ, ರಂಗ ನಿರ್ದೇಶಕಿ ಪ್ರತಿಭಾ ರಾಘವೇಂದ್ರ ತಿಳಿಸಿದರು.
ತರಬೇತುದಾರರಾಗಿ...: ಶಿಬಿರದಲ್ಲಿ 50 ಜನ ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ಕೂಡಲೇ ಹೆಸರು ನೋಂದಾಯಿಸಿಕೊಳ್ಳಬೇಕು ಎಂದ ಅವರು, ಬೆಂಗಳೂರಿನ ನೃತ್ಯ ಕಲಾವಿದೆ ದಿವ್ಯ ನೃತ್ಯ ರೂಪಕ, ಸಾಹಿತಿ ನಾ. ಡಿಸೋಜಾ ಅವರು ಸಾಹಿತ್ಯ ಹಾಗೂ ರೈತ ಹೋರಾಟಗಾರ ಕಡಿದಾಳು ಶಾಮಣ್ಣ ಅವರು ಗೌರವ ಮಾರ್ಗದರ್ಶಕರಾಗಿ ಮಕ್ಕಳಿಗೆ ತರಬೇತಿ ನೀಡಲಿದ್ದಾರೆ ಎಂದರು.
ಪ್ರತಿ ವರ್ಷ ಸ್ಪಂದನ ಸಂಸ್ಥೆ ಸಾಗರದಲ್ಲಿ ಮಕ್ಕಳ ಶಿಬಿರಗಳನ್ನು ಆಯೋಜಿಸುತ್ತ ಬಂದಿದ್ದು, ಈ ಬಾರಿ ಕುಪ್ಪಳಿಯಲ್ಲಿ ಶಿಬಿರ ಏರ್ಪಡಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ 50 ಮಕ್ಕಳು ಭಾಗವಹಿಸಲಿದ್ದಾರೆ. ಮಕ್ಕಳಿಗೆ ತರಬೇತಿ ಪಡೆಯಲು ಯಾವುದೇ ಶುಲ್ಕವನ್ನು ಸಂಸ್ಥೆ ಪಡೆಯುವುದಿಲ್ಲ. ಆದರೆ, ವಸತಿ, ಊಟದ ವ್ಯವಸ್ಥೆಗೆ ನಿಗದಿತ ಹಣ ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ನೇಗಿಲಯೋಗಿ ವಿಷಯ ಕುರಿತಂತೆ ನಾಟಕ ಪ್ರದರ್ಶನವಿದ್ದು, ತರಬೇತಿಯ ಕೊನೆಯ ದಿನದಂದು ಮಕ್ಕಳಿಂದ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಆಸಕ್ತರು 9945178792, 9448531058 ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ರೈತ ಹೋರಾಟಗಾರ ಕಡಿದಾಳು ಶಾಮಣ್ಣ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೃಂಗೇಶ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

