ಶಿವಮೊಗ್ಗ

ನಷ್ಟ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

Published On :

ಶಿಕಾರಿಪುರ: ಕಂಬಳಿ ಹುಳುವಿನ ಭಾದೆ ತಪ್ಪಿಸಲು ಎಕರೆ ಮೆಣಸಿನ ಗಿಡಕ್ಕೆ ಖಾಸಗಿ ಅಂಗಡಿಯಲ್ಲಿ ಖರೀದಿಸಿದ ಕಳಪೆ ಔಷಧ ಹಾಗೂ ಗೊಬ್ಬರದ ಪ್ರಭಾವದಿಂದಾಗಿ ಸಂಪೂರ್ಣ ಗಿಡ ನಾಶವಾಗಿದ್ದು, ಅಂಗಡಿಯ ವಿರುದ್ಧ ಕಾನೂನು ಕ್ರಮದ ಜತೆಗೆ ಪರಿಹಾರ ದೊರಕಿಸುವಂತೆ ತಾಲೂಕಿನ ಹೊಸೂರು ಹೋಬಳಿಯ ಬೇಗೂರು ದೊಡ್ಡ ತಾಂಡಾದ ಕೃಷ್ಣನಾಯ್ಕನ ಪರವಾಗಿ ಕರವೇ ಕೃಷಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಯಿತು.
 ತಾ.ಕರವೇ ಅಧ್ಯಕ್ಷ ಎಲ್ಲಪ್ಪ ಮಾತನಾಡಿ, ಕಂಬಳಿ ಹುಳುವಿನ ನಿಯಂತ್ರಣಕ್ಕೆ ಪಟ್ಟಣದ ಮೆ.ನಟರಾಜ್ ಟ್ರೇಡರ್ಸ್‌ನಿಂದ ಮ್ಯಾಟಾಡೋರ್ ಔಷಧಿಯ ಜತೆಗೆ ಮಂಗಳ ಎನ್‌ಕೆಪಿ 19-19-19 ಗೊಬ್ಬರ ಹಾಗೂ ಮ್ಯಾಂಕೋಜೆಟ್ 75, ಪಿಟ್ಯುಬಲ್ ಪೌಡರ್ ಹೈಜೆಬ್ ಎಮ್ 45 ಖರೀದಿಸಿ ಫಸಲಿಗೆ ಸಿಂಪಡಿಸಿದ್ದಾರೆ. ಸಿಂಪಡಿಸಿದ ಕೇವಲ 2-3 ದಿನದಲ್ಲಿ ಸಂಪೂರ್ಣವಾಗಿ 1.2 ಎಕರೆ ಮೆಣಸಿನ ಗಿಡಗಳು ಸುಟ್ಟು ನಾಶವಾಗಿದೆ ಎಂದು ಹೇಳಿದರು. ಜಂಟಿ ಕೃಷಿ ನಿರ್ದೇಶಕ ಶಿವಮೂರ್ತಿರವರಿಗೆ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಬದಲ್ಲಿ ವೇದಿಕೆಯ ನಗರಾಧ್ಯಕ್ಷ ಭಂಡಾರಿ ರವಿ, ಶಿವರಾಜ್, ನಾಗಾನಾಯ್ಕ, ಬದ್ಯಾನಾಯ್ಕ, ಪರಮೇಶ್ ನಾಯ್ಕ, ರಾಮಾನಾಯ್ಕ, ರಮೇಶ್ ನಾಯ್ಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.