ಶಿವಮೊಗ್ಗ

ಗಾಂಧಿನಗರದಲ್ಲಿ ಮದ್ಯದಂಗಡಿ ತೆರೆದರೆ ಹುಷಾರ್: ಎಚ್ಚರಿಕೆ

Published On :

ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.4
ಇಲ್ಲಿನ ಗಾಂಧಿನಗರ ಬಡಾವಣೆಯಲ್ಲಿ ನಾಗರಿಕರ ವಿರೋಧದ ನಡುವೆಯೂ ಮದ್ಯದಂಗಡಿ ತೆರೆಯುವ ಯತ್ನ ನಡೆಯುತ್ತಿದೆ. ಹಾಗೊಂದು ವೇಳೆ ಮದ್ಯದಂಗಡಿ ಆರಂಭಿಸಿದ್ದೇ ಆದರೆ ತೀವ್ರ ಹೋರಾಟ ನಡೆಸುತ್ತೇವೆ ಎಂದು ಗಾಂಧಿನಗರ ನಿವಾಸಿಗಳ ಸಂಘ ಜಿಲ್ಲಾಡಳಿತವನ್ನು ಎಚ್ಚರಿಸಿದೆ.
ಇಲ್ಲಿನ ಗಾಂಧಿನಗರ ಬಡಾವಣೆಯಲ್ಲಿ ಮದ್ಯದಂಗಡಿ ಸ್ಥಾಪನೆಗೆ ಕೆಲವರು ಯತ್ನಿಸುತ್ತಿದ್ದಾರೆ. ಯಾವುದೇ  ಕಾರಣಕ್ಕೂ ಮದ್ಯದಂಗಡಿ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಗುರುವಾರ ಗಾಂಧಿನಗರ ನಿವಾಸಿಗಳ ಸಂಘದ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈಗಾಗಲೇ ಬೇರೆಡೆ ಕಾರ್ಯನಿರ್ವಹಿಸುತ್ತಿರುವ ಮದ್ಯದಂಗಡಿಯನ್ನು ಗಾಂಧಿನಗರ 1ನೇ ತಿರುವಿನಲ್ಲಿ ತೆರೆಯಲು ಅಬಕಾರಿ ಇಲಾಖೆ ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿವೆ. ಮದ್ಯದಂಗಡಿ ತೆರೆಯಲು  ಗುರುತಿಸಿರುವ ಸ್ಥಳದ ಸುತ್ತಮುತ್ತ ಆಸ್ಪತ್ರೆ, ಕಂಪ್ಯೂಟರ್ತ್‌ರಬೇತಿ ಕೇಂದ್ರ, ಮಹಿಳೆಯರ ಹಾಸ್ಟೆಲ್ ಸೇರಿದಂತೆ  ನಾಗರಿಕ ಉಪಯೋಗಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರಮುಖವಾಗಿ ನಾಗರಿಕ ವಸತಿ ಪ್ರದೇಶವಾಗಿದೆ. ಇಲ್ಲಿ ಮದ್ಯದಂಗಡಿ ಸ್ಥಾಪನೆ ಮಾಡುವುದು ಕಾನೂನುಬಾಹಿರ ಎಂದು ಸಂಘ ಮನವಿಯಲ್ಲಿ ವಿವರಿಸಿದೆ.  
ಓಡಾಡದ ಸ್ಥಿತಿ: ಮದ್ಯದಂಗಡಿ ಸ್ಥಾಪನೆಯಿಂದ ಬಡಾವಣೆಯ ಶಾಂತಿ, ನೆಮ್ಮದಿಗೆ ಧಕ್ಕೆ ಬರಲಿದೆ. ಮಹಿಳೆಯರು, ಮಕ್ಕಳು ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಲಿದೆ. ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಬಹುದೆಂಬ ಆತಂಕವನ್ನು ಸಂಘ ವ್ಯಕ್ತಪಡಿಸಿದೆ.  
ಈ ಕೂಡಲೇ ಜಿಲ್ಲಾಡಳಿತ ಗಾಂಧಿನಗರ ಬಡಾವಣೆ 1ನೇ ತಿರುವಿನಲ್ಲಿ ಹಾಗೂ ಸುತ್ತಮುತ್ತ ಯಾವುದೇ  ಕಾರಣಕ್ಕೂ ಮದ್ಯದಂಗಡಿ ಸ್ಥಾಪನೆಗೆ ಅನುಮತಿ ನೀಡಬಾರದು. ಈ ಕುರಿತಂತೆ ಅಬಕಾರಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು. ಒಂದು ವೇಳೆ ಮದ್ಯದಂಗಡಿ ಸ್ಥಾಪನೆಗೆ ಅನುಮತಿ ನೀಡಿದರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ನಿವಾಸಿಗಳು ಎಚ್ಚರಿಸಿದ್ದಾರೆ.  
ಮನವಿ ಸಲ್ಲಿಸುವ ವೇಳೆ ನಗರಸಭೆ ಸದಸ್ಯ ಎಸ್.ಎಸ್. ಸತೀಶ್, ಬೆಲಗೂರು ಮಂಜುನಾಥ್, ಸಂಘದ  ಅಧ್ಯಕ್ಷ ಎಚ್.ಎಂ. ಕೊಟ್ರಯ್ಯ, ಕಾರ್ಯದರ್ಶಿ ಎಸ್.ಎಸ್. ಶಿವಪ್ರಕಾಶ್, ತೀರ್ಥಲಿಂಗಪ್ಪ, ಕುಮಾರ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.