ಶಿವಮೊಗ್ಗ

ಬಸವಜ್ಯೋತಿಗೆ ಅದ್ಧೂರಿ ಸ್ವಾಗತ

Published On :

ಕ.ಪ್ರ.ವಾರ್ತೆ, ಸೊರಬ,  ಏ.4
ಪಟ್ಟಣಕ್ಕೆ ಆಗಮಿಸಿದ ಬಸವಜ್ಯೋತಿಯನ್ನು ವೀರಶೈವ ಸಮಾಜ, ಕಸಾಪ ಬಳಗ ಹಾಗೂ ವಿವಿಧ ಸಂಘ ಸಂಸ್ಥೆಯವರು ಸಂಭ್ರಮ, ಸಡಗರದಿಂದ ಬರಮಾಡಿಕೊಂಡರು.
ಶರಣ ಸಂಸ್ಕೃತಿ ಮಹಾ ಯಾತ್ರೆಯ ನೇತೃತ್ವ ವಹಿಸಿದ್ದ ಅರವಿಂದ ಜತ್ತಿ ಮಾತನಾಡಿ, ಕಾವಿಧಾರಿಗಳು, ಶರಣರು, ಗುರುಗಳನ್ನು ನಾವು ಹೊಂದಿದ್ದಾಗಿಯೂ ಅನುಭಾವದ ಕೊರತೆಯಿಂದಾಗಿ ಬಸವಸಾರ ತತ್ವ ಅಳವಡಿಸಿಕೊಳ್ಳಲಾಗಿಲ್ಲ, ಸಾರದತತ್ವ ಪ್ರಚಾರವೂ ಹಿಂದುಳಿದಿದೆ. ಈ ನಿಟ್ಟಿನಲ್ಲಿ ಈ ರಥಯಾತ್ರೆ ಬಸವತತ್ವವನ್ನು ಜಾಗೃತಿಗೊಳಿಸಬಲ್ಲದೆಂಬ ಮಹತ್ವಾಕಾಂಕ್ಷೆ ನಮ್ಮದು ಎಂದರು.
ಇಲ್ಲಿನ ತೋಟಗಾರಿಕೆ ಇಲಾಖೆ ಬಳಿ ಶಿರಾಳಕೊಪ್ಪದ ಕಡೆಯಿಂದ ಆಗಮಿಸಿದ ಮಹಾರಥವನ್ನು ಜಡೆ ಸಂಸ್ಥಾನ ಮಠದ ಡಾ. ಮಹಾಂತಶ್ರೀಗಳು ಬರಮಾಡಿಕೊಂಡರು. ನಂತರ ರಥ ಜಡೆ, ಬನವಾಸಿ, ಸಿರ್ಸಿ ಮುಖೇನಾ ಉತ್ತರ ಕನ್ನಡ ಜಿಲ್ಲೆಗೆ ತೆರಳಿತು. ಕಸಾಪ ಅಧ್ಯಕ್ಷ ಕೃಷ್ಣಾನಂದ್, ಸಮಾಜದ ತಾಲೂಕು ಅಧ್ಯಕ್ಷ ಇಂದೂಧರ ಒಡೆಯರ್, ವರ್ತಕರ ಸಂಘದ ಅಧ್ಯಕ್ಷ ಗುತ್ತಿ ಚೆನ್ನಬಸಪ್ಪ, ಬಿಜೆಪಿ ಮುಖಂಡ ಎಂ. ನಾಗಪ್ಪ ವಕೀಲ್, ಚಿಕ್ಕಾವಲಿ ನಾಗರಾಜಗೌಡ, ಜಿಪಂ ಸದಸ್ಯ ಗುರುಕುಮಾರ್ ಪಾಟೀಲ್, ಪಪಂ ಸದಸ್ಯ ಮಹೇಶ್ ಗೌಳಿ, ಅಕ್ಕನ ಬಳಗದ ರೇಣುಕಮ್ಮ ಗೌಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲೋಲಾಕ್ಷಮ್ಮ, ಶಾರದ ಜತ್ತಿ, ರಾಜುಗೌಡ, ಶಿವಾನಂದಪ್ಪ, ಕುಸುಮಾ ಪಾಟೀಲ್, ಎಂ.ಆರ್.ಪಾಟೀಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.