15 ರಿಂದ ತಿಂಗಳ ಕಾಲ ವಸಂತ ವೇದ ಶಿಬಿರ
ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾವು ಏ.15ರಿಂದ ಮೇ 15ರವರೆಗೆ ವಸಂತ ವೇದ ಶಿಬಿರವನ್ನು ಹಮ್ಮಿಕೊಂಡಿದೆ. ಬಿ.ಎಚ್.ರಸ್ತೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಶಿಬಿರ ನಡೆಯಲಿದೆ.
ತ್ರಿಮತಸ್ಥ ಬ್ರಾಹ್ಮಣ ಯುವಕರು ಪಾಲ್ಗೊಳ್ಳಬಹುದಾಗಿದೆ. ಸೂರ್ಯ ನಮಸ್ಕಾರ, ಸರಳ ಸಂಸ್ಕೃತ, ಸಂಧ್ಯಾವಂದನೆ, ದೇವತಾರ್ಚನೆ, ಸೂಕ್ತಾದಿಗಳು, ಪುರಾಣ ಪ್ರವಚನ, ವೇದಾಧ್ಯಯನವನ್ನು ಪ್ರತಿದಿನ ಬೆಳಿಗ್ಗೆ 5.30ರಿಂದ ಸಂಜೆ 5.30ರವರೆಗೆ ನಡೆಸಲಾಗುತ್ತದೆ. ವಸತಿ ಮತ್ತು ಊಟೋಪಚಾರ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಮಹಾಸಭಾ ತಿಳಿಸಿದೆ.
ಏ.13 ಅರ್ಜಿ ಸಲ್ಲಿಸಲು ಕಡೆಯ ದಿನ.
ಮಾಹಿತಿಗೆ ಅರ್ಚಕ ಅ.ಪ. ರಾಮಭಟ್ಟ (08182 276021), ಸಂದೇಶ ಉಪಾಧ್ಯ (99645 97654) ಅವರನ್ನು ಸಂಪರ್ಕಿಸಬಹುದೆಂದು ಮಹಾಸಭಾದ ಕಾರ್ಯದರ್ಶಿ ನಟರಾಜ್ ಭಾಗವತ್ ಅವರು ಈ ಸಂದರ್ಭದಲ್ಲಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

