ಶಿವಮೊಗ್ಗ

ಮೆಗ್ಗಾನ್ ಆಸ್ಪತ್ರೆಯಲ್ಲಿ ಅನಾಮಧೇಯ ಶವ ಪತ್ತೆ

Published On :

ಶಿವಮೊಗ್ಗ: ಏ. 11ರಂದು ಬೆಳಿಗ್ಗೆ 9.30ಕ್ಕೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಅನಾಮಧೇಯ ಗಂಡಸಿನ ಶವವು ಪತ್ತೆಯಾಗಿದ್ದು, ಸುಮಾರು 55 ವರ್ಷ ವಯಸ್ಸಿನ, 5.6 ಅಡಿ ಎತ್ತರದ, ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿಬಣ್ಣ ಹೊಂದಿರುವ, ತುಂಬು ತೋಳಿನ ಕ್ರೀಮ್ ಬಣ್ಣದ ಶರ್ಟ್‌ನ್ನು ಧರಿಸಿದ್ದಾರೆ.
ಈ ಅನಾಮಧೇಯ ಶವದ ವಾರಸುದಾರರು ಮಾಹಿತಿಗಾಗಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್, ತುಂಗಾ ಪೊಲೀಸ್ ಠಾಣೆ, ಶಿವಮೊಗ್ಗ ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೋಷಕರ ಪತ್ತೆಗಾಗಿ
ಶಿವಮೊಗ್ಗ: ಶಿವಮೊಗ್ಗ ಸರ್ಕಾರಿ ಬಾಲಕರ ಬಾಲಮಂದಿರ ಸಂಸ್ಥೆಯ ಸ್ವಾಗತ ಕೇಂದ್ರಕ್ಕೆ ಸುಮಾರು 17ರಿಂದ 18ವರ್ಷ ವಯಸ್ಸಿನ, 5.10ಅಡಿ ಎತ್ತರ, ಕೈ ಮತ್ತು ಕಾಲುಗಳ ಮೇಲೆ ಸುಟ್ಟ ಗಾಯದ ಕಲೆ ಹೊಂದಿರುವ, ಗೋಪಿ ಎಂಬ ಹೆಸರಿನ ಬಾಲಕ ದಾಖಲಾಗಿರುತ್ತಾನೆ. ಈ ಬಾಲಕನ ಪಾಲಕರು, ಪೋಷಕರು ಸರ್ಕಾರಿ ಬಾಲಕರ ಬಾಲಮಂದಿರ, ಆಲ್ಕೊಳ, ಶಿವಮೊಗ್ಗ ಕಚೇರಿಯನ್ನು ಸಂಪರ್ಕಿಸುವಂತೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ವಿವರಗಳಿಗಾಗಿ- 08182-251511.
ಕಾಣೆಯಾಗಿದ್ದಾರೆ
ಶಿವಮೊಗ್ಗ: ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಕಸಬಾ (ಹೋ) ಸಿರಿಯೂರು ಅಂಚೆ ಇಲ್ಲಿನ ವಾಸಿಗಳಾದ ಗಿರಿಜಾಬಾಯಿ ಕೋಂ ಸೂರ್ಯನಾಯ್ಕ ಅವರ ಮಗಳು ಶೃತಿ (19) ಕಾಣಿಯಾಗಿದ್ದಾರೆ.
ಕಳೆದ 3 ವರ್ಷಗಳಿಂದ ಅನುಪಿನಕಟ್ಟಯಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದು, ಏ. 7ರಂದು ಬೆಳಿಗ್ಗೆ 10ಗಂಟೆಗೆ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿ ಮನೆ ಬಿಟ್ಟವರು ಇಲ್ಲಿಯವರೆಗೂ ಹಿಂದಿರುಗಿರುವುದಿಲ್ಲ.
ಇವರು 5 ಅಡಿ, 4 ಇಂಚು ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಹೊಂದಿರುವ ಇವರು ಕನ್ನಡ, ಲಂಬಾಣಿ ಭಾಷೆಯನ್ನು ಮಾತನಾಡಬಲ್ಲವರಾಗಿದ್ದಾರೆ.
ಬಿಳಿ ಬಣ್ಣದ ಚೂಡಿದಾರ್, ಬಿಳಿ ಬಣ್ಣದ ವೇಲ್‌ನ್ನು ಧರಿಸಿದ್ದರು. ಮಾಹಿತಿ ದೊರೆತರೆ ನಗರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು. ವಿವರಗಳಿಗಾಗಿ- .08182-261423.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.