ದೇವರನ್ನು ನಂಬಿದವರಿಗೆ ಪರಾಜಯ ಇಲ್ಲ
ಕ.ಪ್ರ. ವಾರ್ತೆ ಶಿವಮೊಗ್ಗ ಏ.14
ಮನುಷ್ಯನಿಗೆ ಅಧರ್ಮ ಮಾರ್ಗದಲ್ಲಿ ತೃಪ್ತಿ ದೊರಕಿದ್ದರೂ ಅದು ಕ್ಷಣಿಕ ಸುಖ ಮಾತ್ರ. ದೇವರನ್ನು ನಂಬಿದವರಿಗೆ ಎಂದಿಗೂ ಪರಾಜಯ ಎಂಬುದಿಲ್ಲ. ಮಾನವ ತನ್ನ ದೋಷಗಳನ್ನು ನಿರ್ನಾಮಗೊಳಿಸಿ ಸಚ್ಛಾರಿತ್ರ್ಯಗಳನ್ನು ಬೆಳೆಸಿ ಮುನ್ನಡೆಯಬೇಕಾಗಿದೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ತಿಳಿಸಿದರು.
ನಗರದ ಸತ್ಯಪ್ರಮೋದ ಕಲ್ಯಾಣ ಮಂದಿರದಲ್ಲಿ ವಿಶ್ವ ಮಧ್ವ ಮಹಾಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ತನ್ನ ಜೀವನದಲ್ಲಿ ಅಪೇಕ್ಷೆ ಎಂಬ ಬೀಜವನ್ನು ಬಿತ್ತಿದಾಗ ಮಾತ್ರವೇ ಅದು ಮರವಾಗಿ ಬೆಳೆದು ಸಾಧನೆಯ ಗಿಡಕ್ಕೆ ಸ್ಫೂರ್ತಿಯಾಗಿ ಹೊರಹೊಮ್ಮುತ್ತದೆ. ಇತರರನ್ನು ಟೀಕಿಸಿ, ಹಂಗಿಸಿ ಮುಂಬರುವ ಗುಣ ಎಂದಿಗೂ ಸಲ್ಲದು ಎಂದು ಅಭಿಪ್ರಾಯಪಟ್ಟರು.
ಸಂಸ್ಕಾರ ದುರ್ಬಲ: ಸಮಾಜಮುಖಿ ಕಾರ್ಯಗಳನ್ನು ಹೆಚ್ಚು-ಹೆಚ್ಚು ಮಾಡಿದಾಗ ದೊರಕುವ ಆನಂದ ಮೋಕ್ಷಕ್ಕಿಂತ ಮೀರಿದ್ದು ಎಂದ ಅವರು, ವೇದಗಳಲ್ಲಿ ವಿಹಿತವಾದದ್ದು ಹಾಗೂ ಭಗವಂತನಿಗೆ ಪ್ರಿಯವಾದ ನಿಜವಾದದ್ದು ಧರ್ಮ. ಈ ನಿಟ್ಟಿನಲ್ಲಿ ವೇದಾಧ್ಯಯನ ಅನಿವಾರ್ಯ. ಅದೇ ರೀತಿ ವಿಪ್ರತ್ವ ಎಂಬುದು ಭಾರತೀಯ ಸಂಸ್ಕಾರವನ್ನು ಕಾಪಾಡಿಕೊಂಡು ಬರುತ್ತಿರುವ ಜೀವಂತ ಶಕ್ತಿ. ಆದರೆ ಇಂದು ವಿಪ್ರತ್ವದ ಸಂಸ್ಕಾರಗಳು ದುರ್ಬಲವಾಗುತ್ತಿದೆ ಎಂದು ಹೇಳಿದರು.
ಇಂದು ಸರ್ವರೂ ಸಮದರ್ಶಿಗಳಾಗಬೇಕು. ಹೆಚ್ಚುಗಾರಿಕೆ ಎಂಬುದು ಮನುಷ್ಯನ ಅಧಃಪತನಕ್ಕೆ ಮೂಲಾಧಾರವಾಗುತ್ತದೆ. ಇಂದು ಧಾರ್ಮಿಕ ಪಠ್ಯಕ್ರಮಗಳನ್ನು ಹಾಗೂ ವೇದಾಧ್ಯಯನವನ್ನು ಕಲಿಯುವವರ ಸಂಖ್ಯೆ ಅಧಿಕಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಂಡಿತರಾದ ಬಾಳಗಾರು ಜಯತೀರ್ಥಾಚಾರ್, ಕುಷ್ಟಗಿ ಹನುಮಂತಾಚಾರ್, ಕುಷ್ಟಗಿ ವಾಸುದೇವಮೂರ್ತಿ, ಕೂಡ್ಲಿ ಮಠದ ದಿವಾನ ಶ್ರೀಧರಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

