ಶಿವಮೊಗ್ಗ

ಸಾಮಾಜಿಕ ನ್ಯಾಯಕ್ಕೆ ಸಮಗ್ರ ಅವಲೋಕನ

Published On :

ಕ.ಪ್ರ.ವಾರ್ತೆ, ಸೊರಬ, ಏ.15
 ವಿಧಾನಸಭಾ ಕ್ಷೇತ್ರ ಸೊರಬದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೋಮವಾರ ನಾಮಪತ್ರ ಸಲ್ಲಿಸಿದರು.
 ಸಾವಿರಾರು ಅಭಿಮಾನಿ, ಕಾರ್ಯಕರ್ತ, ಮುಖಂಡರೊಂದಿಗೆ ಇಲ್ಲಿನ ರಂಗನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿದ ಅವರು ಚುನಾವಣಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಅನುಮೋದಕರಾಗಿ ಕಾಂಗ್ರೆಸ್ ಮುಖಂಡ ಶಿವಾನಂದ ಭಟ್, ತಾಲೂಕು ಬ್ಲಾಕ್ ಅಧ್ಯಕ್ಷ ಕೆ. ಮಂಜುನಾಥ್ ಮತ್ತು ಮಲ್ಲಿಕಾರ್ಜುನ್ ಗುತ್ತೇರಾ, ನಜೀರ್ ಅಹ್ಮದ್ ಪಾಲ್ಗೊಂಡಿದ್ದರು.
 ನಾಮಪತ್ರ ಸಲ್ಲಿಸಿದ ಬಳಿಕ ಅವರು ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.
ಕೊಡಬೇಕಾದದ್ದೇನು?: ಕನ್ನಜ್ಜ, ಬೊಮ್ಮಜ್ಜರಂತಹ ಸಾಮಾನ್ಯರರಿಂದ ಆರಂಭಗೊಂಡ ಸೊರಬ ರಾಜಕಾರಣದಲ್ಲಿ ಆದದ್ದೇನು ಎನ್ನುವುದಕ್ಕಿಂತ ಕೊಡಬೇಕಾದ್ದೇನು ಎಂಬುದು ಮುಖ್ಯವಾಗಿದೆ. ಯಾವುದೇ ಸಮುದಾಯವನ್ನು ನೋಯಿಸದೇ ಸಾಮಾಜಿಕ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಅವರ ಅಗತ್ಯಗಳೇನು ಎಂಬುದರ ಸಮಗ್ರ ಅವಲೋಕನ ಆಗಬೇಕಿದೆ ಎಂದರು.
   ಮತದಾರರ ಓಲೈಕೆ ನಡೆಸುವ ಕುತಂತ್ರ ರಾಜಕಾರಣದ ಕುರಿತು ಎಚ್ಚರವಹಿಸಿ, ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಪವಿತ್ರ ಮತ ಚಲಾಯಿಸುವ ಮೂಲಕ ನನ್ನನ್ನು ಆಯ್ಕೆಗೊಳಿಸಿ ಎಂದು ಮತ ಯಾಚಿಸಿದರು.
 ಯಲ್ಲಾಪುರ ಕ್ಷೇತ್ರದ ಅಭ್ಯರ್ಥಿ ಶಿವರಾಂ ಹೆಬ್ಬಾರ್ ಮಾತನಾಡಿ, ಇಸ್ಪೀಟ್ ಆಟದಲ್ಲಿನ ಜೋಕರ್ ನಂತೆ ಕೆಲಸ ನಿರ್ವಹಿಸುವ ಜೆಡಿಎಸ್‌ಗೆ ಭವಿಷ್ಯವಿಲ್ಲ.  ಬೋಗಸ್ ಕಂಪೆನಿಯಂತಿರುವ ಈ ಪಕ್ಷದ ಕುರಿತು ಎಚ್ಚರವಹಿಸಿ, ಕಾಂಗ್ರೆಸ್ ಬೆಂಬಲಿಸಿ ಬೆಂಬಲಿಸಿ ಎಂದರು.
 ಕಾಂಗ್ರೆಸ್ ಹಿರಿಯ ಮುಖಂಡ ಜೆ.ಡಿ. ನಾರಾಯಣಪ್ಪ, ತಬಲಿ ಬಂಗಾರಪ್ಪ, ಎಚ್.ಸಿ. ಯೋಗೇಶ್, ಬ್ಲಾಕ್ ಅಧ್ಯಕ್ಷರುಗಳಾದ ಕೆ. ಮಂಜುನಾಥ್, ಮಲ್ಲಿಕಾರ್ಜುನ್ ಗುತ್ತೇರಾ, ಕೆ. ಅಜ್ಜಪ್ಪ, ಸುಜಾಯತ್, ಕೆ. ಡಾಕಪ್ಪ, ಅಬ್ದುಲ್ ವಾಹಿದ್ ಮೊದಲಾದವರು ಈ ಸಂದರ್ಭದಲ್ಲಿ ಸಭೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.