ಶಿವಮೊಗ್ಗ

ಬಿಎಸ್‌ವೈ ಆಸ್ತಿ ಮೌಲ್ಯ ರು. 5.83 ಕೋಟಿ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಏ. 15
ಕಳೆದ ಚುನಾವಣೆಗಿಂತಲೂ ಈ ಬಾರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಸ್ತಿ ಪ್ರಮಾಣ ಗಣನೀಯ ಹೆಚ್ಚಳವಾಗಿದೆ.
 ಇವರ ಚರಾಸ್ತಿಯ ಒಟ್ಟು ಮೌಲ್ಯ 1,64,25,834 ರು.ಗಳಾಗಿದ್ದು, ಈ ನಡುವೆ ಇವರ ವಿವಿಧ ಬ್ಯಾಂಕ್ ಖಾತೆಗಳಲ್ಲಿ 11,25,996 ರು. ಉಳಿತಾಯ ಮಾಡಿದ್ದಾರೆ.
 ನಾಮಪತ್ರದೊಂದಿಗೆ ಇರುವ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಇವರು ನೀಡಿರುವ ವಿವರದಂತೆ ಯಡಿಯೂರಪ್ಪ ಅವರ ಬಳಿ ಇರುವುದು ಟಯೋಟ ಫಾರ್ಚೂನರ್ ವಾಹನ ಮಾತ್ರ. ಇದಕ್ಕಾಗಿ ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದು, 10.89 ಲಕ್ಷ ರು. ಬಾಕಿ ಇದೆ. ಜತೆಗೆ ಇವರು ಮಕ್ಕಳಿಂದ ಹಾಗೂ ಆತ್ಮೀಯರಿಂದ ಸಾಲ ಪಡೆದಿದ್ದು, ಈ ಮೊತ್ತ 40 ಲಕ್ಷ ರು. ಇವರ ಬಳಿ ಇರುವ ಬೆಳ್ಳಿ ಹಾಗೂ ಬಂಗಾರದ ವಸ್ತುಗಳ ಮೌಲ್ಯ 16 ಲಕ್ಷ ರು.
ಸ್ಥಿರಾಸ್ತಿ:  ವಿವಿಧೆಡೆ ಇರುವ ಜಮೀನು, ಕಟ್ಟಡಗಳ ವಿವರವನ್ನೂ ನೀಡಿದ್ದು, ಸ್ಥಿರಾಸ್ತಿ ಮೌಲ್ಯ 4,19,35,020 ರು. ಆಗಿದೆ. ಇವುಗಳ ಖರೀದಿ ಬೆಲೆ 50,59,895 ರು., ಅಭಿವೃದ್ಧಿಗಾಗಿ 1,12,61,614 ರು. ವೆಚ್ಚ ಮಾಡಿದ್ದಾರೆ.
ಶಿಕಾರಿಪುರ ತಾಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ಕೃಷಿ ಜಮೀನು ಇದೆ. ಶಿರಾಳಕೊಪ್ಪ, ತಿಮ್ಲಾಪುರ ಹಾಗೂ ಬೆಂಗಳೂರಿನ ಆರ್‌ಎಂವಿ 2ನೇ ಹಂತದಲ್ಲಿ ಕೃಷಿಯೇತರ ಭೂಮಿ ಇದೆ. 1993ರಲ್ಲೇ ಖರೀದಿಸಿದ ವಾಣಿಜ್ಯ ಉದ್ದೇಶದ ಕಟ್ಟಡ ಶಿಕಾರಿಪುರದಲ್ಲಿದೆ. ಬೆಂಗಳೂರು ಹಾಗೂ ಶಿಕಾರಿಪುರದ ಮಾಳೇರಕೇರಿಯಲ್ಲಿ ತಲಾ ಒಂದು ಮನೆ ಇದೆ.
ಪ್ರಕರಣಗಳು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎದುರಿಸುತ್ತಿರುವ ಪ್ರಕರಣಗಳ ಸಂಖ್ಯೆ 17. ಈ ಎಲ್ಲಾ ಪ್ರಕರಣಗಳೂ ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದವೇ ಆಗಿವೆ.
 ಆದರೆ ಇವೆಲ್ಲವೂ ವಿಚಾರಣೆ ಹಂತದಲ್ಲಿವೆ. ಮೂರು ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ.
 ಈ ಪ್ರಕರಣಗಳು ಬೆಂಗಳೂರು ಹಾಗೂ ಶಿವಮೊಗ್ಗ ನ್ಯಾಯಾಲಯದಲ್ಲಿ ವಿವಿಧ ಹಂತದಲ್ಲಿವೆ. 8 ಪ್ರಕರಣಗಳ ಲೋಕಾಯುಕ್ತ ತನಿಖೆ ನಡೆಯುತ್ತಿದ್ದು, ಒಂದು ಪ್ರಕರಣವನ್ನು ತನಿಖೆಯನ್ನು ಸಿಬಿಐ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.