ಹಾಲಪ್ಪ, ಕುಮಾರ, ಮಧು ಆಸ್ತಿ ವಿವರ ಘೋಷಣೆ
ಕ.ಪ್ರ.ವಾರ್ತೆ, ಸೊರಬ, ಏ.16 ಸೊರಬ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ:
ಮಾಜಿ ಸಚಿವ ಹಾಲಪ್ಪ ಪ್ರಸಕ್ತ ನಾಮಪತ್ರ ಸಲ್ಲಿಸಿರುವ ವೇಳೆ ಅವರ ಬಳಿ ರು. 1 ಲಕ್ಷ, ಪತ್ನಿ ಬಳಿ ರು. 3 ಲಕ್ಷ, ವಿವಿಧ ಬ್ಯಾಂಕ್ ಖಾತೆಗಳಲ್ಲಿ ರು. 2 ಲಕ್ಷ ಉಳಿಸಿಕೊಂಡಿರುವ ಅವರು ರು. 2 ಲಕ್ಷ ಮೌಲ್ಯದ ವಿಮಾ ಪಾಲಿಸಿ ಹೊಂದಿದ್ದಾರೆ. ಅವರ ಪತ್ನಿ ವಿವಿಧ ವಹಿವಾಟಿನಲ್ಲಿ ರು. 1.50 ಲಕ್ಷ ತೊಡಗಿಸಿಕೊಂಡಿರುವುದಾಗಿ ಘೋಷಿಸಲಾಗಿದೆ.
ಹಾಲಪ್ಪ ಬಳಿ 6 ಲಕ್ಷ ಬಂಗಾರದ ಆಭರಣ, ಪತ್ನಿ ಬಳಿ 33 ಲಕ್ಷದ ಬಂಗಾರ, 2.50 ಲಕ್ಷದ ಬೆಳ್ಳಿ ಆಭರಣ ಹಾಲಪ್ಪ ಬಳಿ 36,42,266 ಮೌಲ್ಯದ ಆಸ್ತಿ ಇದ್ದರೆ ಅವರ ಪತ್ನಿ ಹೆಸರಿನಲ್ಲಿ ರು. 56.59, 533 ಸಾಲವಿದೆ. ಹಾಲಪ್ಪ ಹೆಸರಲ್ಲಿ ಒಟ್ಟು ರು. 5 ಕೋಟಿ ಮೌಲ್ಯದ, ಅವರ ಪತ್ನಿ ಹೆಸರಿನಲ್ಲಿ ರು. 13 ಕೋಟಿ ಮೌಲ್ಯದ ಕೃಷಿ, ಕೃಷಿಯೇತರ ಜಮೀನಿದೆ.
ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ: ತಮ್ಮ ಹೆಸರಿನಲ್ಲಿ ರು. 1.50 ಕೋಟಿ, ಪತ್ನಿ ಅನಿತಾ ಹೆಸರಿನಲ್ಲಿ 10 ಲಕ್ಷ ರೂ. ನಗದು ಇದೆ ಎಂದು ಘೋಷಿಸಿದ್ದಾರೆ.
ಬೆಂಗಳೂರಿನ ವೈಶ್ಯ ಬ್ಯಾಂಕಿನಲ್ಲಿ ಇವರ ಖಾತೆಗೆ ರು. 43.82 ಲಕ್ಷ ಇದೇ ಬ್ಯಾಂಕ್ನಲ್ಲಿನ ಪತ್ನಿ ಖಾತೆಯಲ್ಲಿ ರು. 68 ಲಕ್ಷ ಪುತ್ರ ಸೂರ್ಯನ ಹೆಸರಿನಲ್ಲಿ ರು. 50,000 ಠೇವಣಿ ಇದೆ. ಸೊರಬ ಕೆನರಾ ಬ್ಯಾಂಕ್ ಖಾತೆಯಲ್ಲಿ ರು. 10 ಸಾವಿರ ಹೊಂದಿದ್ದಾರೆ.
ಆಕಾಶ್ ಆಡಿಯೋ ಹಾಗೂ ವೀರಶೈವ ಸಹಕಾರ ಬ್ಯಾಂಕಿನಲ್ಲಿ ರು. 2.76 ಲಕ್ಷ ಹೂಡಿಕೆ, ಅವರ ಹೆಸರಿನಲ್ಲಿ ರು. 14,08,20,000 ಚರಾಸ್ತಿ, ಪತ್ನಿ ಹೆಸರಿನಲ್ಲಿ ರು. 3,18,50,000 ಮೌಲ್ಯದ ಆಸ್ತಿ ಹೊಂದಿದ್ದಾರೆ. ಪುತ್ರ ಸೂರ್ಯನ ಹೆಸರಿನಲ್ಲಿ ರು. 50,000 ಮೌಲ್ಯದ ಆಸ್ತಿ ಇದೆ.
ಜಮೀನು ಮೌಲ್ಯ: ಅವರ ಹೆಸರಿಗೆ ಕೃಷಿ, ಕೃಷಿಯೇತರ ಜಮೀನಿನ ಮಾರುಕಟ್ಟೆ ಬೆಲೆ 13,60,05,000, ಪುತ್ರನ ಹೆಸರಿನಲ್ಲಿ ಭೂಮಿಯ ಮೌಲ್ಯ ರು. 2,36,00,000 ಎಂದು ತಿಳಿಸಿದ್ದಾರೆ. ಸ್ವಯಾರ್ಜಿತ ಆಸ್ತಿ ಮೌಲ್ಯ ರು. 1,07,80,000, ಮತ್ತು ಬ್ಯಾಂಕ್ ಮತ್ತು ಇತರೆ ಮೂಲಗಳಿಂದ ಪಡೆದ ಸಾಲದ ಮೊತ್ತ ರು. 15,21,83,381 ಅವರ ಬಳಿ ರು. 14.08,20,000 ರೂ.ಮೌಲ್ಯದ 2,750 ಕೆಜಿ ಬಂಗಾರ, ಪತ್ನಿ ಬಳಿ 1 ಕೆಜಿ ಬಂಗಾರ, 25 ಕೆಜಿ ಬೆಳ್ಳಿ ಇದೆ. ಇದರ ಮೌಲ್ಯ 3.18.50,000, ಮಧು ಬಂಗಾರಪ್ಪ ಬಳಿ 40 ಲಕ್ಷ ರೂ.ಮೌಲ್ಯದ ಇನ್ನೋವಾ ಮತ್ತು ಫಾರ್ಚೂನ್ ಕಾರು ಇದೆ.
ಮಾಜಿ ಸಚಿವ ಕುಮಾರ್ ಬಗಾರಪ್ಪ: ರು. 21,30,500, ಪತ್ನಿ ವಿದ್ಯುಲ್ಲತಾ ಬಳಿ 4 ಲಕ್ಷ ನಗದು ಇದೆ ಎಂದು ಘೋಷಿಸಿದ್ದಾರೆ. ಪುತ್ರ ಅರ್ಜುನ್ ಹೆಸರಿನಲ್ಲಿ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ರು. 2,672 , ಪುತ್ರಿ ಲಾವಣ್ಯ ಹೆಸರಿನ ಖಾತೆಯಲ್ಲಿ ರು. 14,342 ಇದೆ. ಕುಮಾರ್ ಬಂಗಾರಪ್ಪ ಹೂಡಿಕೆ ರು. 1.66.828, ಪತ್ನಿ ಹೆಸರಲ್ಲಿ ರು. 43,015 ಹೂಡಿಕೆ ಆಗಿದೆ. ಅವರ ಬಳಿ ಇರುವ ಶವರೆಲೆಟ್ ಕ್ಯಾಪ್ಟೀವಾ ಕಾರಿನ ಮೌಲ್ಯ ರು. 24,53,921. ಬಂಗಾರದ ಆಭರಣ, ಬೆಳ್ಳಿ 3.5 ಕೆಜಿ, ಪತ್ನಿ, ಪುತ್ರ, ಪುತ್ರಿ ಹೆಸರಿನಲ್ಲಿ ಯಾವುದೇ ಕೃಷಿ ಆಸ್ತಿ ಇಲ್ಲ. ರು. 14,28,899 ಮೌಲ್ಯದ ಕೃಷಿ ಭೂಮಿ, ರು. 10 ಕೋಟಿ ಮೌಲ್ಯದ ಕೃಷಿಯೇತರ ಭೂಮಿ, ಆನವಟ್ಟಿ ಡಿಸಿಸಿ ಬ್ಯಾಂಕಿನಲ್ಲಿ ರು. 10 ಲಕ್ಷ ಸಾಲವಿರುವುದಾಗಿ ಪ್ರಮಾಣಿಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

