ಯಡಿಯೂರಪ್ಪ ಮಾರ್ಗದರ್ಶದಲ್ಲಿ ನಡೆ
ಶಿವಮೊಗ್ಗ: ಆಪತ್ಕಾಲದಲ್ಲಿ ಕಾಯ್ದವರೇ ದೇವರು. ಆದ್ದರಿಂದ ಯಡಿಯೂರಪ್ಪ ಅವರ ಮಾರ್ಗದರ್ಶನದಂತೆ ತಾವು ಮುನ್ನಡೆಯುವುದು ಖಚಿತ ಎಂದು ಭದ್ರಾವತಿ ಕ್ಷೇತ್ರದ ಕೆಜೆಪಿ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ ಹೇಳಿದ್ದಾರೆ.
ನಗರದ ಕೆಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು, ಭದ್ರಾವತಿಯಲ್ಲಿ ಜನರು ಕಾಂಗ್ರೆಸ್ ಹಾಗೂ ಜೆಡಿಎಸ್ನವರ ದುರ್ವರ್ತನೆಯಿಂದ ಬೇಸತ್ತಿದ್ದಾರೆ. ಇಂತಹ ರಾವಣರನ್ನು ಸಂಹಾರ ಮಾಡಿ ರಾಮರಾಜ್ಯ ಸ್ಥಾಪಿಸಬೇಕು. ರಾವಣರಾಜ್ಯ ತೊಲಗಬೇಕು. ಅದಕ್ಕಾಗಿ ಕೆಜೆಪಿ ಬೆಂಬಲ ಪಡೆಯುತ್ತಿದ್ದೇನೆ ಎಂದರು.
ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಬೇಕಿತ್ತು. ಹಾಗಾಗಿ ನಿರ್ಧಾರ ತಡವಾಯಿತು. ಈಗ ತಮ್ಮ ಬೆಂಬಲಿಗರು ಕೆಜೆಪಿ ಬೆಂಬಲದೊಂದಿಗೆ ಪಕ್ಷೇತರನಾಗಿ ಸ್ಪರ್ಧಿಸಲು ಒಪ್ಪಿದ್ದಾರೆ ಎಂದರು.
ಭದ್ರಾವತಿ ಕಾಂಗ್ರೆಸ್ನಲ್ಲಿದ್ದ ಶೇ.75ರಷ್ಟು ಮುಖಂಡರು ಹಾಗೂ ಕಾರ್ಯಕರ್ತರು ತಮ್ಮೊಂದಿಗಿದ್ದಾರೆ. ಈ ಬಾರಿ ತಮ್ಮ ಗೆಲವು ಖಚಿತ ಎಂದರು.
ಕೆಜೆಪಿ ನಾಮಪತ್ರ ವಾಪಸ್ ಪಡೆದಿರುವ ಅಭ್ಯರ್ಥಿ ಕದಿರೇಶ್, ಭದ್ರಾವತಿಯಲ್ಲಿ ಶಾಂತಿ ಕಾಪಾಡಿಕೊಳ್ಳುವುದಕ್ಕಾಗಿ ವರಿಷ್ಠರ ಸೂಚನೆ ಮೇರೆಗೆ ನಾಮಪತ್ರ ವಾಪಸ್ ಪಡೆಯುತ್ತಿದ್ದೇನೆ. ಪಕ್ಷದ ಎಲ್ಲಾ ಮುಖಂಡರು ಸಂಗಮೇಶ್ ಅವರನ್ನು ಬೆಂಬಲಿಸಲಿದ್ದಾರೆ. ಅವರು 15-20 ಸಾವಿರ ಮತಗಳ ಅಂತರದಿಂದ ಜಯ ಗಳಿಸಲಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

