ಶಿವಮೊಗ್ಗ

ಧನಂಜಯ್ ಹತಾಶೆ ಹೇಳಿಕೆ: ಜೋಶಿ

Published On :

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಏ.22
ಬೇಜವಾಬ್ದಾರಿಯುತವಾಗಿ ಮಾತನಾಡಲಿಕ್ಕೆ ಧನಂಜಯಕುಮಾರ್ ಎತ್ತಿದ ಕೈ. ಆಡ್ವಾಣಿಯವರ ಬಗ್ಗೆ ಮಾತನಾಡಲು ವಿರೋಧ ಪಕ್ಷದವರು ಮನಸ್ಸು ಮಾಡುವುದಿಲ್ಲ, ಆಡ್ವಾಣಿಯವರು ಶುದ್ಧ ಹಸ್ತ, ರಾಷ್ಟ್ರದ ಬಗ್ಗೆ ಬದ್ಧತೆ ಇರುವವರು. ಈ ಸಂದರ್ಭದಲ್ಲಿ ನೈತಿಕ ನಿಲುವು ತೆಗೆದುಕೊಂಡಿದ್ದಕ್ಕಾಗಿ ಹತಾಶ ಭಾವನೆಯಿಂದಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಧನಂಜಯ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ಟೀಕಾ ಪ್ರಹಾರ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಳಿಕೆ ನೀಡಿರುವ ವ್ಯಕ್ತಿಯ ಘನತೆ ಎಷ್ಟೆಂಬುದನ್ನು ಜನತೆ ನಿರ್ಧರಿಸುತ್ತಾರೆ. ಅಡ್ವಾಣಿಯಂತಹವರ ಬಗ್ಗೆ ಕೆಜೆಪಿಯ ವಕ್ತಾರರು ಹೇಳಿಕೆ ನೀಡಿರುವಾಗ, ಬಿಎಸ್ವೈ ಅವರಿಗೆ ಉತ್ತರ ಕೊಡಿ ಎಂದು ಕೇಳುತ್ತೇನೆ ಎಂದು ಸವಾಲೆಸೆದರು. ಅವರು (ಧನಂಜಯ ಕುಮಾರ್) ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನೀವೇ (ಬಿಎಸ್ವೈ) ಅವರ ಬಗ್ಗೆ ಮಾತನಾಡಿ ಕ್ಷಮೆ ಕೇಳಿದ್ದಿರಿ ಎಂದು ಯಡಿಯೂರಪ್ಪರನ್ನು ತಿವಿದರು.
ಆಕಾಶಕ್ಕೆ ಉಗಿದಿದ್ದಾರೆ: ಎಲ್.ಕೆ. ಆಡ್ವಾಣಿಯವರು ಒಬ್ಬ ರಾಜಕೀಯ ಸಂತ. ಅವರ ಬದ್ಧತೆ, ಪ್ರಾಮಾಣಿಕತೆಗೆ ಎಲ್ಲರೂ ತಲೆ ಬಾಗುತ್ತಾರೆ. ಇಂತಹ ಆಡ್ವಾಣಿಯವರ ಮೇಲೆ ಆರೋಪ ಹೊರಿಸಿರುವ ಕೆಜೆಪಿ ವಕ್ತಾರ ಧನಂಜಯ ಕುಮಾರ್, ಆಕಾಶಕ್ಕೆ ಉಗುಳಿದ್ದಾರೆ. ಅದು ತಮ್ಮ ಮುಖದ ಮೇಲೆಯೇ ಬೀಳುತ್ತದೆ ಎಂಬುದನ್ನು ಅವರು ಅರಿಯಲಿ ಎಂದರು.
ಆಡ್ವಾಣಿಯವರು ಯಡಿಯೂರಪ್ಪನವರಿಂದ ಹಣ ತೆಗೆದುಕೊಂಡಿದ್ದಾರೆ ಎಂಬ ಕುರಿತು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದ ಅವರು, ಈ ರೀತಿ ಆರೋಪಗಳಿಗೆ ಯಾವ ವ್ಯಕ್ತಿ ಆರೋಪ ಮಾಡಿದ್ದಾರೆಂದು ನೋಡಿ ಉತ್ತರ ಕೊಡಬೇಕಾಗುತ್ತದೆ ಎಂದು ಲೇವಡಿ ಮಾಡಿದರು.
ಯಾವ ವ್ಯಕ್ತಿಯನ್ನು ಯಾವ ಕಾರಣಕ್ಕಾಗಿ ಅಟಲ್ ಜೀಯವರು ಕ್ಯಾಬಿನೆಟ್ನಿಂದ ಹೊರಗಿಟ್ಟರೋ, ಸಂಸದೀಯ ಮಾನ್ಯತೆ ಕಳೆದುಕೊಂಡರೋ ಎಲ್ಲರಿಗೂ ಗೊತ್ತಿದೆ. ಅವರ(ಧನಂಜಯ್) ಬಗ್ಗೆ ಏನು ಹೇಳುವುದಿದೆ. ಆಡ್ವಾಣಿಯವರ ವ್ಯಕ್ತಿತ್ವಕ್ಕೆ ಮಸಿ ಬಳಿಯಬಹುದೇನೋ ಎಂದು ಕೊಂಡು ಹೇಳಿಕೆ ನೀಡಿದ್ದರೆ ಅದು ಅವರ ಘನತೆ ಎಷ್ಟೆಂಬುದನ್ನು ತೋರಿಸುತ್ತದೆ ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.