ಕೆಜೆಪಿ ಬೆಂಬಲಿಸಿ : ಮಹಾಲಿಂಗಪ್ಪ
ಶಿರಾಳಕೊಪ್ಪ :ದಲಿತರಿಗೆ, ಶೋಷಿತರಿಗೆ ಹಾಗೂ ಹಿಂದುಳಿದವರಿಗೆ ನ್ಯಾಯ ದೊರಕಿಸಿಕೊಡಬೇಕಿಂದಿದ್ದರೆ ಅದು ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರಿಂದ ಮಾತ್ರ ಸಾಧ್ಯ ಎಂದು ಕೆಜೆಪಿ ನಾಯಕ ಮಹಾಲಿಂಗಪ್ಪ ಹೇಳಿದರು.
ಶಿರಾಳಕೊಪ್ಪ ಹತ್ತಿರದ ಹಿರೇಜಂಬೂರ ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿ, ನಾನು ಯಡಿಯೂರಪ್ಪನವರ ಕಾರ್ಯವೈಖರಿಯನ್ನು ನೋಡಿ ಅವರೊಂದಿಗೆ ಸೇರಿ ಉತ್ತಮ ಕಾರ್ಯನಿರ್ವಹಿಸಬೇಕೆಂದು ಕೆಜೆಪಿ ಸೇರಿರುವದಾಗಿ ತಿಳಿಸಿದ ಅವರು, ನಿಮ್ಮೆಲ್ಲರ ಸಹಕಾರವಿದ್ದರೆ ಈ ಬಾರಿ ಕೆಜೆಪಿ ಗೆಲ್ಲಲಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಗಡಿ ಅಶೋಕ ಮಾತನಾಡಿ, ಹಿಂದೆಂದಿಗಿಂತಲೂ ಹೆಚ್ಚಾಗಿ ಗ್ರಾಮಗಳಲ್ಲಿ ಆಗಿರುವಂತಹ ಕೆಲಸ ಕಾರ್ಯಗಳು ಸಹಕಾರಿ ಬ್ಯಾಂಕ್ಗಳಲ್ಲಿ ಶೇ.1ರಂತೆ ಹಾಗೂ ಬಡ್ಡಿ ರಹಿತ ಸಾಲ, ಎರಡು ಬಾರಿ ರೈತರ ಸಾಲ ಮನ್ನಾದಂತಹ ಉತ್ತಮಕಾರ್ಯ ಮಾಡಿರುವ ಯಡಿಯೂರಪ್ಪನವರ ಕೈ ಬಲಪಡಿಸಿ ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಅಂತರದಿಂದ ಗೆದಿಸಬೇಕು ಎಂದು ಹೇಳಿದರು.
ಹಿರೇಜಂಬೂರ ಗ್ರಾಮದಲ್ಲಿ ಕಾಂಗ್ರೆಸ್ನಲ್ಲಿದ್ದ ಪಕ್ಷೇತರ ಗ್ರಾಪಂ ಸದಸ್ಯರಾದ ಶಶಧರ ಹಾಗೂ ಬಸವರಾಜಪ್ಪ ಕಾಂಗ್ರೆಸ್ ಹಿರೇಜಂಬೂರ ಗ್ರಾಮದಲ್ಲಿ ಕಾಂಗ್ರೆಸ್ನಲ್ಲಿದ್ದ ಪಕ್ಷೇತರ ಗ್ರಾಪಂ ಸದಸ್ಯರಾದ ಶಶಧರ ಹಾಗೂ ಬಸವರಾಜಪ್ಪ ಕಾಂಗ್ರೆಸ್ ತೊರೆದು ಕೆಜೆಪಿ ಸೇರಿದರು. ಮಾಜಿ ಶಾಸಕ ಮಹಲಿಂಗಪ್ಪ ಅವರು ಪಕ್ಷಕ್ಕೆ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ನಾಯಕರಾದ ಜಿಪಂ ಸದಸ್ಯ ಬಂಗಾರನಾಯ್ಕ್,ಬಸವನಗೌಡ, ಕೋಡಿಕೊಪ್ಪದ ಮಂಜಣ್ಣ ಹಾಗೂ ಇತರ ಹಲವಾರು ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

