ಪಕ್ಷಕ್ಕೆ ಯಡಿಯೂರಪ್ಪನವರೇ ಟ್ರಂಪ್ ಕಾರ್ಡ್
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.29
ಕೆಲವು ಪಕ್ಷದವರು ಜಿಲ್ಲೆಗೆ ರಾಷ್ಟ್ರೀಯ ಅಂತಾರಾಷ್ಟ್ರೀಯ ನಾಯಕರನ್ನು ಕರೆತರುತ್ತಿದ್ದಾರೆ, ಆದರೆ ನಮ್ಮ ಪಕ್ಷಕ್ಕೆ ಯಡಿಯೂರಪ್ಪನವರೆ ಟ್ರಂಪ್ ಕಾರ್ಡ್. ಬಿಎಸ್ವೈ ಮುಂದೆ ಯಾರೂ ಬಂದರೂ ಪ್ರಯೋಜನವಾಗಲ್ಲ, ಕೆಜೆಪಿಯೇ ಗೆಲ್ಲಲಿದೆ ಎಂದು ಕೆಜೆಪಿ ರಾಜ್ಯ ಕಾರ್ಯದರ್ಶಿ ಅನಂತರಾಮಯ್ಯ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಚಾರದಲ್ಲಿ ಪಕ್ಷ ಮುಂಚೂಣಿಯಲ್ಲಿದ್ದು, ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲುವ ವಾತಾವರಣವಿದೆ ಎಂದು ಹೇಳಿದರು. ಭದ್ರಾವತಿಯಲ್ಲಿ ಗೆಲುವಿನ ಹುರಿಯಾಳು ಇದ್ದು ಅಲ್ಲೂ ಪಕ್ಷ ಪ್ರಬಲವಾಗಿದೆ ಎಂದು ತಿಳಿಸಿದರು.
ಬಿರುಸಿನ ಪ್ರಚಾರ: ಶಿವಮೊಗ್ಗದ ಕೆಜೆಪಿ ಅಭ್ಯರ್ಥಿ ರುದ್ರೇಗೌಡರು ಇಲ್ಲಿನ ಜನರಿಗೆ ಪರಿಚಯ ಅಷ್ಟಾಗಿ ಇಲ್ಲ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ಈ ಮಾತು ಸತ್ಯಕ್ಕೆ ದೂರ ಎಂಬಂತೆ ರುದ್ರೇಗೌಡರು ಕಳೆದ ನಾಲ್ಕು ತಿಂಗಳಿಂದ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಮೊಹಲ್ಲಾ, ಗಲ್ಲಿಗಲ್ಲಿಗೆ ಸುತ್ತಿ ಮತ ಯಾಚಿಸುತ್ತಿದ್ದಾರೆ. ಜನರೂ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.
ಕೆಜೆಪಿ ಪ್ರಚಾರ: ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಮಂಜುಳಾ ಹಾಗೂ ರಾಜ್ಯ ಉಪಾಧ್ಯಕ್ಷೆ ಶೃತಿಯವರು ಜಿಲ್ಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಇವರೊಂದಿಗೆ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಕೆ.ಪಿ. ಪುರುಷೋತ್ತಮ, ಬಿಳಿಕಿ ಕೃಷ್ಣಮೂರ್ತಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ನಗರಸಭಾ ಸದಸ್ಯರಾದ ಐಡಿಯಲ್ ಗೋಪಿ, ಮಂಜುನಾಥ, ಮಾಲತೇಶ್, ಎಸ್.ಎಸ್. ಸತೀಶ್, ಅರ್ಚನಾ ಬಳ್ಳೆಕೆರೆ, ಶಾಹಿಸ್ತಾ ಬಾನು, ಗೌರಿ ಶ್ರೀನಾಥ ಮತ್ತು ಜಿಲ್ಲಾ ಹಾಗೂ ನಗರ ಕೆಜೆಪಿ ಪದಾಧಿಕಾರಿಗಳೂ ಸಹ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದರು.
ಏಪ್ರಿಲ್ 30ರಂದು ಬೆಳಿಗ್ಗೆ 9 ಗಂಟೆಗೆ ಶಾಂತಿನಗರ ಸರ್ಕಲ್, ಬೆಳಿಗ್ಗೆ 10 ಗಂಟೆಗೆ ವಿದ್ಯಾನಗರ, 11 ಗಂಟೆಗೆ ಟಿಪ್ಪುನಗರ, 12 ಗಂಟೆಗೆ ಹೊಸಮನೆಯಲ್ಲಿ ಪ್ರಚಾರ ಕಾರ್ಯ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಕೋಣಂದೂರು, 4 ಗಂಟೆಗೆ ಬೆಜ್ಜವಳ್ಳಿ ಹಾಗೂ 5 ಗಂಟೆಗೆ ಗಾಜನೂರಿನಲ್ಲಿ ಪ್ರಚಾರ ಸಭೆಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.
ಬಿಎಸ್ವೈ ಪ್ರಚಾರ: ಮೇ 2 ಮತ್ತು 3ರಂದು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಜಿಲ್ಲೆಯಲ್ಲಿ ಪ್ರಚಾರದಲ್ಲಿ ತೊಡಗಲಿದ್ದಾರೆ. ಪ್ರಚಾರ ಸಭೆ, ಸಮಾವೇಶ, ರೋಡ್ ಶೋ ನಡೆಸಿ ಅಭ್ಯರ್ಥಿಗಳ ಮತ ಯಾಚಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಳ್ಳೆಕೆರೆ ಸಂತೋಷ್, ಐಡಿಯಲ್ ಗೋಪಿ, ಜ್ಯೋತಿಪ್ರಕಾಶ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

