ಮುಂದುವರೆದ ಮಳೆ; ಹೆಚ್ಚುತ್ತಿರುವ ನಷ್ಟ
ಸೊರಬ: ಪುಷ್ಯ ಮಳೆ ಆರಂಭವಾದಂದಿನಿಂದ ಮುಗಿಯುವ ತನಕವು ಜನತೆಯನ್ನು ಕಂಗೆಡಿಸಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ ತುಸು ಬಿಡುವು ನೀಡಿದೆ. ಮಲೆನಾಡು ಪ್ರದೇಶದ ಜನಜೀವನ ಅಸ್ತವ್ಯಸ್ತವಾಗಿದೆ. ಗುರುವಾರ ಬೆಳಿಗ್ಗೆ ಸುರಿದ ಭಾರೀ ಮಳೆಗೆ ಪ್ರವಾಹ ಏರುಮುಖ ಕಂಡಿದೆ.
ಮಳೆಗಾಲದ ಮೊದಲ ಬಲಿಯಾಗಿ ಚಂದ್ರಗುತ್ತಿ ಹೋಬಳಿ ಕಮರೂರು ಗ್ರಾಮದ ಮನ್ನಪ್ಪ(50) ನೀರಿನಲ್ಲಿ ಬಿದ್ದು ಮೃತರಾಗಿದ್ದಾರೆ. ಹೆಚ್ಚೆ ಗ್ರಾಮದಲ್ಲಿ ಜಯಪ್ಪ ಕರಡಿ ಅವರ ಮನೆ ಗೋಡೆ ಕುಸಿದು ಮನೆಯ ವಸ್ತುಗಳು ಹಾಳಾಗಿ, ಜಯಪ್ಪ ಪತ್ನಿ ಶಾಂತಮ್ಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತಾಲೂಕಿನ ತಾಳಗುಪ್ಪೆ ಗ್ರಾಮದ ಈರಪ್ಪಗೌಡರ ಹಳೆಮನೆ ಗೋಡೆ ಕುಸಿದಿದ್ದು, ಪಕ್ಕದಲ್ಲಿಯೇ ಇರುವ ಹೊಸಮನೆಗೆ ಸಾಕಷ್ಟು ಹಾನಿಯಾಗಿದೆ. ಪಟ್ಟಣದ ಕಾನಕೇರಿಯ ಅನೇಕ ಬಗರ್ ಹುಕುಂ ಮನೆಗಳು ಕುಸಿದಿವೆ. ಪಟ್ಟಣದ ಅಂಬೇಡ್ಕರ್ ಬಡಾವಣೆಯ ಸುಣ್ಣದ ಭಟ್ಟಿಯೊಂದರ ಮೇಲೆ ಮರ ಬಿದ್ದು ನಷ್ಟ ಸಂಭವಿಸಿದೆ. ಹುಲೆಮರಡಿ ಗ್ರಾಮದಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಹಾನಿಗೊಳಗಾಗಿದೆ.
ಅವಲಗೋಡು ಕೆರೆ ಶಿಥಿಲಗೊಂಡಿರುವುದು ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮ ಸಂಪರ್ಕ ರಸ್ತೆ ಹಾಳಾಗಿದೆ. ಸೊರಬ ಸಾಗರ ರಸ್ತೆ ಕಪ್ಪಗಳಲೆ ಬಳಿ ರಸ್ತೆಗೆ ಮರವುರಳಿ ಕೆಲಕಾಲ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಸೊರಬ ಜಂಗಿನಕೊಪ್ಪ ಓಟೂರು ಮಾರ್ಗದ ಹಳ್ಳ ಉಕ್ಕಿದ ಕಾರಣ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಸೊರಬ ಸಿದ್ಧಾಪುರ ರಸ್ತೆಯ ಕೋಣನಮನೆ ಹಳ್ಳ, ಕಡಸೂರು, ಹೊಳೆ, ಜೋಳದಗುಡ್ಡೆ, ಬಂಕಸಾಣ, ಕೆರೆಹಳ್ಳಿ, ಗೋಂದಿ ಬಳಿಯ ವರದಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿವೆ. ಕೆಲವು ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿದ್ದು, ದುರಸ್ತಿ ಕಾರ್ಯಕ್ಕೆ ಮಳೆ ಹಾಗೂ ಸಿಬ್ಬಂದಿ ಕೊರತೆ ಅಡ್ಡಿಯಾಗಿದೆ.
ಗುರುವಾರ ಅತಿಯಾದ ಮಳೆ ಬಿದ್ದ ಕಾರಣ ಕ್ಷೀರಭಾಗ್ಯ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಧ್ಯಾಹ್ನದ ಬಿಸಊಿಟ ನೀಡಿದ ಬಳಿಕ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

