ಶಿವಮೊಗ್ಗ

ಗಾಳಿಮಳೆ: 1.50 ಕೋಟಿಗೂ ಅಧಿಕ ಹಾನಿ

Published On :

ಸಾಗರ: ಭಾರೀ ಗಾಳಿಮಳೆಯಿಂದಾಗಿ ಆನಂದಪುರಂ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 1.50 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಆ ಭಾಗದ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೋಡು ತಿಳಿಸಿದ್ದಾರೆ.
ಶುಕ್ರವಾರ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಹೋಬಳಿ ವ್ಯಾಪ್ತಿಯ ಆನಂದಪುರಂ ಗ್ರಾಮ ಪಂಚಾಯ್ತಿಯಲ್ಲಿ 40 ಲಕ್ಷ, ಯಡೇಹಳ್ಳಿಯಲ್ಲಿ 25 ಲಕ್ಷ, ಆಚಾಪುರದಲ್ಲಿ 40 ಲಕ್ಷ, ಹೊಸೂರಿನಲ್ಲಿ 30 ಲಕ್ಷ ಹಾಗೂ ಗೌತಮಪುರದಲ್ಲಿ 50 ಲಕ್ಷಕ್ಕೂ ಹೆಚ್ಚಿನ ನಷ್ಟ ಸಂಭವಿಸಿದೆ ಎಂದರು. ಬಿತ್ತನೆ ಮಾಡಿದ ಸಸಿಗಳೆಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದೆ. ರೈತರು ಸಂಕಷ್ಟದಲ್ಲಿದ್ದು ಅವರಿಗೆ ತುರ್ತು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೋಬಳಿ ವ್ಯಾಪ್ತಿಯ ಇರುವಕ್ಕಿ, ತ್ಯಾವರೆಹಳ್ಳಿ, ಗೌತಮಪುರ, ಚೆನ್ನಶೆಟ್ಟಿಕೊಪ್ಪ, ಕೆರೆಕೊಪ್ಪ ಇನ್ನಿತರ ಭಾಗಗಳಲ್ಲಿ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ತಕ್ಷಣ ವಿದ್ಯುತ್ ಮಾರ್ಗ ಸರಿಪಡಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಾಬುಲಾಲ್ ಸಾಬ್ ಬುಡೇಹಳ್ಳಿ, ಕಲಿಮುಲ್ಲಾ, ಬಸವರಾಜ್ ಆಚಾಪುರ, ವಿಷ್ಣು ಇನ್ನಿತರರು ಹಾಜರಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.