ಶಿವಮೊಗ್ಗ

ಪ್ರಗತಿ ಬ್ಯಾಂಕ್ನಿಂದ ಸಾಲ ವಿತರಣೆ

Published On :


ಕ.ಪ್ರ.ವಾರ್ತೆ ಟಿ ಶಿಕಾರಿಪುರ ಟಿ  ಆ.2
ಪ್ರಗತಿ ಗ್ರಾಮೀಣ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಸರಿಸಮಾನವಾಗಿ ಹೆಚ್ಚಿನ ಸಾಲವನ್ನು ತ್ವರಿತಗತಿಯಲ್ಲಿ ಗ್ರಾಹಕರಿಗೆ ನೀಡುವ ಮೂಲಕ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಳ್ಳಾರಿ ಪ್ರಧಾನ ಕಚೇರಿಯ ಮಹಾಪ್ರಭಂದಕ ಕುಂಸಿ ಬಾಬು ತಿಳಿಸಿದರು.
ಮಂಗಳವಾರ ಪಟ್ಟಣದ ರೇಣುಕಾಂಬ ಆರ್ಕೇಡ್ನಲ್ಲಿನ ಸ್ಥಳೀಯ ಪ್ರಗತಿ ಗ್ರಾಮೀಣ ಬ್ಯಾಂಕ್ ಶಾಖೆಯ ವತಿಯಿಂದ ನಡೆದ ಗ್ರಾಹಕರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬ್ಯಾಂಕಿಂಗ್ ಕ್ಷೇತ್ರ ಇತ್ತೀಚಿನ ವರ್ಷದಲ್ಲಿ ವಿಸ್ತಾರವಾಗಿದ್ದು, ಗ್ರಾಹಕರ ಅವಶ್ಯಕತೆಗೆ ಅನುಗಣವಾಗಿ ಸೇವೆ ಸಲ್ಲಿಸುವ ಆತುರದಲ್ಲಿ ಬ್ಯಾಂಕ್ಗಳಿವೆ ಎಂದ ಅವರು ಈ ದಿಸೆಯಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್
ತನ್ನ ವಿವಿಧ ಬಗೆಯ ಗ್ರಾಹಕರ ಅನುಕೂಲಕ್ಕಾಗಿ ಕಾರು, ದ್ವಿಚಕ್ರ ವಾಹನ, ಮನೆ, ವಾಣಿಜ್ಯ ಮಳಿಗೆ ನಿರ್ಮಾಣ, ಗೋದಾಮು ನಿರ್ಮಾಣ ಮತ್ತಿತರ ಬಹು ದೊಡ್ಡ ಯೋಜನೆಗಳಿಗೆ ಕೋಟ್ಯಂತರ ರು. ಸಾಲ ವಿತರಿಸುತ್ತಿದೆ ಎಂದರು.
ಸಮರ್ಪಕ ಸೇವೆ: ಇದರೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ಗಳ ರೀತಿಯಲ್ಲಿ ಇಂಟರ್ನೆಟ್ ಬ್ಯಾಂಕಿಂಗ್, ಕೋರ್ ಬ್ಯಾಂಕಿಂಗ್,ನೆಫ್ಟ್, ಆರ್ಟಿಜಿ ಜಿಎಸ್, ಮೊಬೇಸ್ ಬ್ಯಾಂಕಿಂಗ್, ಎಸ್ಎಮ್ಎಸ್ ಅಲರ್ಟ್ ಮತ್ತಿತರ ಸೇವೆಯನ್ನು ಗ್ರಾಹಕರಿಗೆ ಒದಗಿಸುತ್ತಿದ್ದು, ಬ್ಯಾಂಕಿನ ಎಲ್ಲಾ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಹಕರು ಬ್ಯಾಂಕ್ ಬೆಳವಣಿಗೆಗೆ ಕಾರಣಕರ್ತರಾಗುವಂತೆ ಮನವಿ ಮಾಡಿದರು.
ತ್ವರಿತಗತಿಯ ಸೇವೆಯನ್ನು ಗುರಿಯಾಗಿಸಿಕೊಂಡಿರುವ ಬ್ಯಾಂಕ್ ನಿತ್ಯ ಸುಲಭ ರೀತಿಯಲ್ಲಿ ಬಂಗಾರದ ಸಾಲವನ್ನು ಗ್ರಾಹಕರಿಗೆ ನೀಡುತ್ತಿದೆ ಎಂದರು.
ಕ್ಷೇತ್ರೀಯ ಪ್ರಬಂಧಕ ಪ್ರಹ್ಲಾದ ದೇಸಾಯಿ ಮಾತನಾಡಿ, ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಜಾರಿಗೊಳಿಸುವ ಹಲವು ಬಗೆಯ ಸೇವೆಯ ಸದ್ಬಳಕೆಗೆ ಗ್ರಾಹಕರು ಮಹತ್ವ ನೀಡುವಂತೆ ತಿಳಿಸಿ, ಸಕಾಲದಲ್ಲಿ ಸಾಲ ಮರುಪಾವತೊಗಳಿಸಿ ಎಲ್ಲಾ ವರ್ಗದ ಗ್ರಾಹಕರಿಗೂ ಬ್ಯಾಂಕಿನ ಸೇವೆಯ ಸದುಪಯೋಗಕ್ಕೆ ಹೆಚ್ಚಿನ ಗಮನ ನೀಡುವಂತೆ ತಿಳಿಸಿದರು.
ಸಾಲ ವಿತರಣೆ: ಗ್ರಾಹಕ ನಾಗನಗೌಡ ಪಾಟೀಲ್, ಕೃಷ್ಣೋಜಿರಾವ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಬ್ಯಾಂಕಿನ ವತಿಯಿಂದ 30 ಗ್ರಾಹಕರಿಗೆ ಸಾಲ ಮಂಜೂರಾತಿ ಪತ್ರ ಹಾಗೂ 8 ಗ್ರಾಹಕರಿಗೆ ಎಟಿಎಂ ಕಾರ್ಡ್ಗಳನ್ನು ವಿತರಿಸಲಾಯಿತು.
ಈ ಸಂದಭಂದಲ್ಲಿ ಗ್ರಾಹಕ ಪ್ರಮುಖರಾದ ಶಿವಾನಂದಸಾನು, ಸದಾನಂದ ಸ್ವಾಮಿ, ವೀರೇಶಯ್ಯ, ಚನ್ನಪ್ಪ, ಸಿಬ್ಬಂದಿ ಗೌತಮ್, ಶಿವರಾಂ ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯ ಶಾಖೆ ಪ್ರಬಂಧಕ ರಮಾನಾಥ ಆಚಾರ್ಯ ಸ್ವಾಗತಿಸಿದರು. ಮಲ್ಲಿಕಾರ್ಜುನಯ್ಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.