ಶಿವಮೊಗ್ಗ

'ಅಜ್ಞಾನ ಬಿಟ್ಟು ಅಸಾಮಾನ್ಯ ಗುರಿ ತಲುಪಿ'

Published On :

ಕ.ಪ್ರ.ವಾರ್ತೆ  ಭದ್ರಾವತಿ  ಆ.3
ನಾವೆಲ್ಲರೂ ಸಾಮಾನ್ಯರೆಂಬ ಭಾವನೆಯ ಅಜ್ಞಾದಿಂದ ಹೊರಬಂದು ಅಸಾಮಾನ್ಯವಾದುದನ್ನು ಸಾಧಿಸುವ ಗುರಿ ಹೊಂದಬೇಕು ಎಂದು ಶಿವಮೊಗ್ಗದ ರಾಮಕೃಷ್ಣ ವಿವೇಕಾನಂದಾಶ್ರಮದ ವಿನಯಾನಂದ ಸರಸ್ವತಿ ಶ್ರೀ ಹೇಳಿದರು.
ಅವರು ಇತ್ತೀಚೆಗೆ ಸತ್ಯಸಾಯಿ ಸೇವಾಕ್ಷೇತ್ರದಲ್ಲಿ ಸ್ವಾಮಿ ವಿವೇಕಾನಂದರ 150 ಜನ್ಮದಿನೋತ್ಸವದ ಅಂಗವಾಗಿ ಸೆ.24ರಂದು ಭದ್ರಾವತಿಗೆ ಆಗಮಿಸುತ್ತಿರುವ ವಿವೇಕಾನಂದರ ರಥಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಮಾಜದಲ್ಲಿ ವಿವಿಧ ವರ್ಗದ ಜನರಿದ್ದರಾದರೂ, ನಾವು ಮಾಡುವ ಕಾರ್ಯದ ಮೂಲಕ  ಶ್ರೇಷ್ಠರಾಗಬೇಕು ಎಂದರು.
ಖರ್ಚುವೆಚ್ಚ: ಸಮಿತಿ ಸಂಚಾಲಕ ಪ್ರಭಾಕರ ಬೀರಯ್ಯ ರಥಯಾತ್ರೆಯ ಮುಖ್ಯ ಸಂಘಟನಾ ಸಮಿತಿ ಮತ್ತಿತರ ಉಪಸಮಿತಿಗಳ ವಿವರಗಳನ್ನು ಪೂರ್ವಭಾವಿ ಸಭೆಯಲ್ಲಿ ನೀಡಿ ರಥಯಾತ್ರೆಯ ಸ್ವಾಗತದ ಸಂಪೂರ್ಣ ಖರ್ಚುವೆಚ್ಚಗಳ ವಿವರಗಳನ್ನೂ ಸಭೆಗೆ ತಿಳಿಸಿದರು.
ಶಾಸಕ ಎಂ.ಜೆ. ಅಪ್ಪಾಜಿಯವರ ಗೌರವಾಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಂಘಟನಾ ಸಮಿತಿಯಲ್ಲಿ ಪಟ್ಟಣದ ಅನೇಕ ಗಣ್ಯ ವ್ಯಕ್ತಿಗಳು ಇದ್ದಾರೆ. ಪೂರ್ವಭಾವಿ ಸಭೆಯ ವೇದಿಕೆಯಲ್ಲಿ ಟಿ. ಚಂದ್ರೇಗೌಡ, ಹಾ. ರಾಮಪ್ಪ, ಸುಧಾಕರಶೆಟ್ಟಿ  ಮೊದಲಾದವರು ಇದ್ದರು. ಜಿ.ಪಿ. ಪರಮೇಶ್ವರಪ್ಪ ಸ್ವಾಗತಿಸಿದರು. ಧರ್ಮಪ್ರಸಾದ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.