ನಾಟಕಾಭಿನಯಕ್ಕೆ ಮಕ್ಕಳಿಗೆ ಆಹ್ವಾನ
ಶಿವಮೊಗ್ಗ: ಶಿವಮೊಗ್ಗದ ಕಲಾಕಿರಣ ತಂಡವು ಮಕ್ಕಳ ನಾಟಕ ಪ್ರಯೋಗಿಸುವ ತನ್ನ ಪರಂಪರೆಯನ್ನು ಮುಂದುವರೆಸಲು ತೀರ್ಮಾನಿಸಿದ್ದು, ಆಗಸ್ಟ್ 31ರಂದು ಪಿನೋಕಿಯೋ ಎಂಬ ನಾಟಕವನ್ನು ಪ್ರದರ್ಶಿಸಲಿದೆ. ಅದಕ್ಕೆ ತಯಾರಿಗಳು ಆರಂಭಗೊಂಡಿವೆ. ನಾಟಕದಲ್ಲಿ ಅಭಿನಯಿಸಲು 30-40 ಮಕ್ಕಳು ಬೇಕಾಗಿದ್ದಾರೆ. ತನ್ನ ಸಂಪ್ರದಾಯದಂತೆ ನಾಟಕದಲ್ಲಿ ಅಭಿನಯಿಸಲು ಆಸಕ್ತಿಯುಳ್ಳ ಮಕ್ಕಳಿಗೆ ಮುಕ್ತ ಅವಕಾಶ ಕಲ್ಪಿಸಿಕೊಡುವುದು ಕಲಾಕಿರಣದ ಉದ್ದೇಶವಾಗಿದ್ದು, ಅದಕ್ಕಾಗಿ ಈ ಮೂಲಕ ಆಹ್ವಾನ ನೀಡಲಾಗಿದೆ. ಆಸಕ್ತ ಮಕ್ಕಳು ತಮ್ಮ ಪೋಷಕರೊಡನೆ ಆ.7ರ ಸಂಜೆ 6 ಗಂಟೆಗೆ ಕೋಟೆ ಬಯಲು ರಂಗಮಂದಿರ (ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕ) ಕ್ಕೆ ಬರತಕ್ಕದ್ದು. ಭಾಗವಹಿಸುವ ಮಕ್ಕಳಿಗೆ ಉತ್ತಮವಾದೊಂದು ಸಂಘ ಜೀವನವನ್ನು ಪರಿಚಯಿಸುವ ಗ್ಯಾರಂಟಿಯನ್ನು ಕಲಾಕಿರಣ ಕೊಡುತ್ತದೆ. ಪೋಷಕರು ಹೆಚ್ಚಿನ ಮಾಹಿತಿಗಾಗಿ ಮೊ- 98459 07703 (ರೇಣುಕಪ್ಪ) ಇವರನ್ನು ಸಂಪರ್ಕಿಸಬಹುದು.
ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಶಿವಮೊಗ್ಗ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಅಂಗವಿಕಲರ ಕಲ್ಯಾಣಕ್ಕಾಗಿ ವಿಶೇಷ ಸೇವೆ ಸಲ್ಲಿಸಿದವರನ್ನು ಗುರುತಿಸಿ, ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಕೇರಾಫ್ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಹಳೆ ತಾಲೂಕು ಕಚೇರಿ ರಸ್ತೆ, ಶಿವಮೊಗ್ಗ ಇವರಿಂದ ಅಥವಾ ಅಂತರ್ಜಾಲ ತಾಣ-ಡಿಡಿಠಣಣಣಡ್ಟ್ಛ್ಝಛಟಞ್ಡಡಡ್ಝ್ಛಿಜ.ಟ್ಝ್ಛಿ.್ಝಟಿ ನಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 12ರೊಳಗಾಗಿ ಜಿಲ್ಲಾ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಭದ್ರೆಗೆ ಬಾಗಿನ
ಭದ್ರಾವತಿ: ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ಶನಿವಾರ ಭದ್ರಾ ಜಲಾಶಯದಲ್ಲಿ ಭದ್ರಾ ನದಿಗೆ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಅವರ ಪುತ್ರ ಬಸವ, ಸಂಗಮೇಶ್ವರ್ ಅವರ ಸೊಸೆ, ನಗರಸಭೆ ಚುನಾಯಿತ ಸದಸ್ಯರು, ವಿವಿಧ ಸಂಘಸಂಸ್ಥೆ ಚುನಾಯಿತ ಪ್ರತಿನಿಧಿಗಳು, ರೈತರು, ಯುವಕರು, ಕಾರ್ಮಿಕ ಸಂಘಗಳ ಮುಖಂಡರುಗಳು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಆಗಮಿಸಿದ್ದರು.
ಗೊಗ್ಗಮ್ಮ ದೇವಿ ಕೆರೆಗೆ ಬಾಗಿನ ಅರ್ಪಣೆ...
ಶಿಕಾರಿಪುರ: ಸತತ ಮಳೆಯಿಂದಾಗಿ ತಾಲೂಕಿನ ಗೊಗ್ಗ ಗ್ರಾಮದ ಗೊಗ್ಗಮ್ಮ ದೇವಿ ಕೆರೆ ಭರ್ತಿಯಾಗಿದ್ದು ಸೋಮವಾರ ಗ್ರಾಮಸ್ಥರು ಗಂಗಾಪೂಜೆ ನೆರವೇರಿಸಿ ಬಾಗಿನ ಸಲ್ಲಿಸಿದರು. ಹಲವು ವರ್ಷಗಳ ನಂತರದಲ್ಲಿ ಕೆರೆ ಭರ್ತಿಯಾಗಿದ್ದು ಇದರಿಂದಾಗಿ ಗ್ರಾಮಸ್ಥರು ಸಂತಸಗೊಂಡಿದ್ದಾರೆ.ಕಳೆದ ಬೇಸಿಗೆಯಲ್ಲಿ ನೀರಿನ ಭೀಕರ ಕ್ಷಾಮದಿಂದಾಗಿ ಜನಜಾನುವಾರುಗಳು ತೀವ್ರ ರೀತಿಯಲ್ಲಿ ಪರಿತಪಿಸುವಂತಾಗಿ ರೈತಾಪಿ ವರ್ಗ ಚಿಂತಾಕ್ರಾಂತವಾಗಿದ್ದರು. ಇದೀಗ ಕೆರೆ ಭರ್ತಿಯಾಗಿ ಗ್ರಾಮಸ್ಥರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು ಕೆರೆಯ ನೀರು ಕೋಡಿ ಮೇಲೆ ಹರಿಯುತ್ತಿರುವುದರಿಂದ ಗ್ರಾಮಸ್ಥರು ಗಂಗಾಪೂಜೆ ನೆರವೇರಿಸಿ ಬಾಗಿನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅದ್ಯಕ್ಷೆ ಸವಿತಾ ವಿರೂಪಾಕ್ಷಪ್ಪ, ವೀರಭದ್ರೇಶ್ವರ ಸೇವಾ ಸಂಸ್ಥೆಯ ಅಧ್ಯಕ್ಷ ನಂದೀಶ್, ಸುರೇಶ್, ರಾಜು,ನಂದೀಶ್, ಮಂಜು, ಪುಣ್ಯಕುಮಾರ್, ಕರಿಬಸವಾಚಾರ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

