ಶಿವಮೊಗ್ಗ

ಜನಪದ ಕಲೆ ಗ್ರಾಮೀಣ ಭಾರತದ ತಾಯಿಬೇರು

Published On :

ಸಾಗರ: ಜನಪದ ಕಲೆ ಹಾಗೂ ಕಲಾವಿದರು ಗ್ರಾಮೀಣ ಭಾರತದ ತಾಯಿಬೇರು ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಹೇಳಿದರು.
 ತಾಲೂಕಿನ ಆನಂದಪುರದ ಮುರುಘಾಮಠದಲ್ಲಿ ಕಣ್ಣೇಶ್ವರ ಜನಪದ ಕಲಾ ಸಂಘ, ಮುರುಘ ರಾಜೇಂದ್ರ ಮಹಾಸಂಸ್ಥಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಜನಪದ ಕಲಾ ಉತ್ಸವ ಉದ್ಘಾಟಿಸಿ, ಗ್ರಾಮೀಣ ಭಾರತದ ನೆನಪು ಉಳಿಯಬೇಕಾದರೆ ಜನಪದ ಕಲಾಪ್ರಕಾರಗಳನ್ನು ಪ್ರೋತ್ಸಾಹಿಸಬೇಕು ಎಂದರು.
 ಆಧುನಿಕತೆ ಜನಪದ ಕಲೆ ಹಾಗೂ ಕಲಾವಿದರಿಗೆ ಶಾಪವಾಗಿ ಪರಿಣಮಿಸಿದೆ. ನಾವು ವಿದೇಶಿ ಕಲೆಗಳಿಗೆ ನೀಡುವಷ್ಟು ಮಾನ್ಯತೆಯನ್ನು ನಮ್ಮ ನೆಲಮೂಲ ಕಲೆಗೆ ನೀಡುತ್ತಿಲ್ಲ. ವಿದೇಶಿ ಕಲಾವಿದರನ್ನು ವೈಭವೀಕರಿಸುವ ನಾವು ಆರ್ಥಿಕ ಸಂಕಷ್ಟದಲ್ಲಿರುವ ಸ್ಥಳೀಯ ಕಲಾವಿದರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸರ್ಕಾರ ಈ ತಾರತಮ್ಯ ನೀತಿಯನ್ನು ಹೋಗಲಾಡಿಸಬೇಕು ಎಂದರು.
ಅಕ್ಷರಾಭ್ಯಾಸ ಮಾಡಿಲ್ಲ: ಜನಪದ ತಜ್ಞ ಸಿರಿಗಂಧ ಶ್ರೀನಿವಾಸಮೂರ್ತಿ, ಜನಪದ ಕಲಾಪ್ರಕಾರಗಳು ಯಾವುದೇ ತರಬೇತಿ ಇಲ್ಲದೆ ಬಾಯಿಂದ ಬಾಯಿಗೆ  ವಿಸ್ತರಿಸಿಕೊಂಡು ಬಂದಿದೆ. ನಮ್ಮ ಜನಪದ ಕಲಾವಿದರು ಅಕ್ಷರಾಭ್ಯಾಸ ಮಾಡಿದವರಲ್ಲ. ದೊಡ್ಡ ದೊಡ್ಡ ಪದವಿ ಪಡೆದವರಲ್ಲ. ಆದರೆ ಅವರಲ್ಲಿನ ಕಲಾವಂತಿಕೆ, ನೆನಪಿನಶಕ್ತಿ ಗಮನಾರ್ಹ ಎಂದರು.
ಸಾನ್ನಿಧ್ಯ ವಹಿಸಿದ್ದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀ ಮಾತನಾಡಿ, ಕಲೆಗೆ ಸಮ್ಮೋಹನಶಕ್ತಿ ಇದೆ. ನಮ್ಮ ನೆಲಮೂಲ ಸಂಸ್ಕೃತಿ ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ಜನಪದ ಕಲಾವಿದರನ್ನು ಗುರುತಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಾಗೋಡು ರಂಗಮಂಚದ ಅಧ್ಯಕ್ಷ ಕಾಗೋಡು ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ರತ್ನಾಕರ ಹೊನಗೋಡು, ಕಣ್ಣೂರು ಕಣ್ಣೇಶ್ವರ ಜನಪದ ಕಲಾಸಂಘದ ಪ್ರಧಾನ ಕಾರ್ಯದರ್ಶಿ ಎನ್. ಟೀಕಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.