ಶಿವಮೊಗ್ಗ

ರೈತರ ನೆರವಿಗೆ ಆಗಮಿಸಲು ಆಗ್ರಹ

Published On :

ಕ.ಪ್ರ.ವಾರ್ತೆ ತೀರ್ಥಹಳ್ಳಿ ಆ.11
ತಾಲೂಕಿನ ರೈತರಿಗೆ ಪ್ರತಿ ಎಕರೆಗೆ 5 ಸಾವಿರ ಪರಿಹಾರ ನೀಡಬೇಕು, ಮಳೆಯಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದು ಶೇ.50 ರಿಯಾಯಿತಿ ದರದಲ್ಲಿ ಮೈಲುತುತ್ತ, ಸುಣ್ಣ ನೀಡಬೇಕು, ಬೆಳಗಾರರ ಈ ಸಾಲಿನ ಕಂದಾಯ ಮನ್ನಾ ಮಾಡಬೇಕು ಎಂದು  ಕೆಜೆಪಿ ಮುಖಂಡ ಆರ್.ಎಂ. ಮಂಜುನಾಥ ಗೌಡ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದಾಗಿ ರೈತರ ಬದುಕು ತೊಂದರೆಗೀಡಾಗಿದೆ. ಅಡಕೆ ತೋಟಗಳಲ್ಲಿ ವ್ಯಾಪಕವಾಗಿ ಕೊಳೆರೋಗ ಬಂದಿದೆ. ರೈತರ ಬದುಕನ್ನೇ ಕಸಿಯುತ್ತಿದೆ. ಅಡಕೆ ಫಸಲು ಇಲ್ಲ. ಕೊಳೆರೋಗದಿಂದ ಅಡಕೆ ಕಾಯಿಗಳು ಉದುರಿಹೋಗಿವೆ. ಕೊಳೆರೋಗದಿಂದ ಅಡಕೆ ಮರಗಳೇ ಜ್ವರದಿಂದ ಬಳಲುತ್ತಿದ್ದು, ಮುಂದಿನ ದಿನಗಳಲ್ಲಿ  ಮರಗಳು ರೋಗಪೀಡಿತವಾಗಿ ತೋಟಕ್ಕೇ ಕುತ್ತು ಬರಲಿದೆ ಎಂದು ಹೇಳಿದರು. ಈ ಮರಗಳನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಮೈಲುತುತ್ತ, ಸುಣ್ಣ ಮಿಶ್ರಣದ ಔಷಧಿ ಸಿಂಪಡಣೆ ಮಾಡಲೇಬೇಕು. ಸರ್ಕಾರ ಶೇ.50ರ ರಿಯಾಯಿತಿ ದರದಲ್ಲಿ ಮೈಲುತುತ್ತ ವಿತರಿಸಬೇಕು ಎಂದು ಹೇಳಿದರು.
ಗೋರಖ್ ಸಿಂಗ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಇದರಿಂದಾಗಿ ಅಡಕೆ ಬೆಳೆಗಾರರಿಗೆ ಪ್ರಯೋಜನವಾಗಲಿದೆ. ವೈಯಕ್ತಿಕ ಹಿತಸಾಧನೆಗೆ ಕೆಲವರು ಇಲ್ಲೂ ರಾಜಕಾರಣ ನೆಡೆಸಲು ಮುಂದಾಗಿದ್ದಾರೆ. ರೈತ ಹೋರಾಟವನ್ನು ಹೋಳು ಮಾಡಲು ಯತ್ನಿಸುತ್ತಿದ್ದಾರೆ. ರೈತರ ವಿಚಾರದಲ್ಲಿ ರಾಜಕಾರಣವನ್ನು ಮಾಡಬಾರದು ಎಂದು ಹೇಳಿದರು.
ಕೃಷಿ ಸಂಶೋಧನೆ ಕ್ಷೇತ್ರ ಈ ನಿಟ್ಟಿನಲ್ಲಿ ಯಾವುದೇ ಪರಿಹಾರ ಕಂಡುಹಿಡಿಯುವಲ್ಲಿ ವಿಫಲವಾಗಿದೆ. ತೀರ್ಥಹಳ್ಳಿಯಲ್ಲೂ ಒಂದು ಕೇಂದ್ರವಿದೆ. ಲಕ್ಷಾಂತರ ಬೆಲೆಬಾಳುವ ಉಪಕರಣಗಳಿವೆ. ಸಿಬ್ಬಂದಿಯೇ ಇಲ್ಲ. ಮಲೆನಾಡಿನ ರೈತರಿಗೆ ಅನುಕೂಲಕ್ಕೆ ಒದಗಿಬರುತ್ತಿಲ್ಲ ಎಂದು ವಿಷಾದಿಸಿದರು.
13ರಂದು ತೀರ್ಥಹಳ್ಳಿಯಲ್ಲಿ ಕೆಜೆಪಿ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಕೆಜೆಪಿ ರಾಜ್ಯಾಧ್ಯಕ್ಷರ ನಡೆ ಏನೇ ಇದ್ದರೂ, ತೀರ್ಥಹಳ್ಳಿ ಘಟಕದಲ್ಲಿ ಸಂಘಟನೆಯನ್ನು ತಮ್ಮದೇ ಆದ ರೀತಿಯಲ್ಲಿ ಬಲಪಡಿಸುವುದಾಗಿ  ಹೇಳಿದರು. ಕೆಜೆಪಿ ತಾಲೂಕು ಅಧ್ಯಕ್ಷ ಸಚ್ಚೀಂದ್ರ ಹೆಗ್ಡೆ, ಬಿ.ಟಿ. ಬಸವರಾಜ್, ಡಾಕಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.