ಬೈಕ್ ಕಳ್ಳನ ಬಂಧನ
ಶಿವಮೊಗ್ಗ: ನಗರದಲ್ಲಿ ಹಲವು ದಿನಗಳಿಂದ ಬೈಕ್ ಕಳವು ಮಾಡುತ್ತಿದ್ದ ಆರೋಪಿಯನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಗಿಗುಡ್ಡದ ಇಮ್ರಾನ್ ಪಠಾಣ್ (27) ಬಂಧಿತ ಆರೋಪಿ. ಹರ್ಷ ಕಾಂಪ್ಲೆಕ್ಸ್ ಬಳಿ ಬೈಕ್ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕಂಡು ಈತ ತನ್ನ ಬೈಕ್ನ್ನು ಅಲ್ಲಿಯೇ ಬಿಟ್ಟು ಓಡಲು ಯತ್ನಿಸಿದ್ದಾನೆ. ಹಿಂಬಾಲಿಸಿದ ಪೊಲೀಸರು ಇಮ್ರಾನ್ನ್ನು ಹಿಡಿದು ವಿಚಾರಿಸಿದಾಗ ತಾನು ಓಡಿಸುತ್ತಿದ್ದ ಬೈಕ್ ದಾವಣಗೆರೆಯ ರೇಣುಕಾ ಕಲ್ಯಾಣ ಮಂಟಪದ ಸಮೀಪದಿಂದ ಕದ್ದಿರುವುದಾಗಿ ತಿಳಿಸಿದ್ದಾನೆ.
ಈತನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ನಗರದಲ್ಲಿ ಈ ಹಿಂದೆ ನಗರದಲ್ಲಿ ಎರಡು ಬೈಕ್ಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದು, ಸಹ್ಯಾದ್ರಿ ಕಾಲೇಜು ಬಳಿ ಒಂದು ಟಿವಿಎಸ್ ವಿಕ್ಟರ್ ಹಾಗೂ ಶೇಷಾದ್ರಿಪುರಂ ಬಳಿ ಹಿರೋಹೊಂಡಾ ಫ್ಯಾಷನ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. 3 ಬೈಕ್ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕೋಟೆ ಠಾಣೆಯ ಪಿಎಸ್ಐ ಚಿನ್ನಪ್ಪ, ವಾಚ್ಯಾನಾಯ್ಕ್, ಯಶವಂತ, ಸಂತೋಷ್, ತಿಮ್ಮಾಭೋವಿ ಮತ್ತಿತರರು ಇದ್ದರು.
ರಸ್ತೆ ಅಡ್ಡವಾಗಿ ಮುಗುಚಿದ ಲಾರಿ
ಹೊಸನಗರ: ತಾಲೂಕಿನ ನಗರದಿಂದ ಹುಲಿಕಲ್ ಮಾರ್ಗದ ಸುಮಾರು 20 ಕಿ.ಮೀ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ತುಂಬಿ ಹೋಗಿದ್ದು, ವಾಹನ ಸಂಚಾರಕ್ಕೆ ಭಯ ಹುಟ್ಟಿಸುವಂತಿದೆ.
ಹುಲಿಕಲ್ ಮಾರ್ಗವಾಗಿ ಕುಂದಾಪುರ ಕಡೆ ಹೋಗುತ್ತಿದ್ದ ಗುಜರಿ ವಸ್ತುಗಳನ್ನು ತುಂಬಿದ್ದ ಲಾರಿಯೊಂದು ಹದಗೆಟ್ಟ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ ಮಗುಚಿದೆ. ಆದರೆ ಚಾಲಕ ಮತ್ತು ಕ್ಲೀನರ್ ಮಾತ್ರ ಅಪಾಯದಿಂದ ಬಚಾವಾಗಿದ್ದಾರೆ. ಇದರಿಂದಾಗಿ ಸುಮಾರು 3 ಗಂಟೆ ಸಂಚಾರ ಸ್ಥಗಿತಗೊಂಡಿತ್ತು.
ಹೊಂಡಗುಂಡಿಗಳ ರಸ್ತೆಯನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು ಆತಂಕದಲ್ಲಿ ಓಡಾಡುವಂತಾಗಿದ್ದು ಸರ್ಕಾರ ಇತ್ತ ಗಮನ ಹರಿಸಿ ಕೂಡಲೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

