ಶಿವಮೊಗ್ಗ

ಭಾವಲಹರಿ ಭಾವ ಪರವಶ...

Published On :

ಶಿವಮೊಗ್ಗ: ಕನ್ನಡ ಸಂಗೀತವೆಂದೇ ಪ್ರಸಿದ್ಧಿ ಪಡೆದ ಸುಗಮ ಸಂಗೀತದ ಭಾವಲಹರಿ ಪ್ರೇಕ್ಷಕರ ಮನಸೂರೆಗೊಂಡಿತು.  
  ಶಂಕರ್ ಸೈಕಲೋತ್ಸವ ಮತ್ತು ಶ್ರೀ ಗುರುಗುಹ ಸಂಗೀತ ಸಮಗ್ರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಕಲಾವಿದ ವಿದೂಷಿ ಕೃಪಾ, ಋತ್ವಿಕ್ ಮುರಳೀಧರ್, ಅಮಿತ್ ಎಸ್. ಕುಮಾರ್, ಚಾರ್ವಿ ಮುರಳೀಧರ್ ನಾಡಿನ ಪ್ರಮುಖ ಕವಿಗಳ ಭಾವಗೀತೆಗಳನ್ನು ಕಿಕ್ಕಿರಿದ ಸಭಾಂಗಣದಲ್ಲಿ ಪ್ರಸ್ತುತಪಡಿಸಿದ ರು.
 ಇದು ಬರೀ ಗೀತೆಗಳ ಗಾಯನ ಕಾರ್ಯಕ್ರಮವಾಗಿರದೇ ಕನ್ನಡ ಉಪನ್ಯಾಸಕರಾದ ದಾಕ್ಷಾಯಿಣಿ ಹಾಗೂ ತುರುವನೂರು ಮಲ್ಲಿಕಾರ್ಜುನ ಅವರು ಆಯಾ ಗೀತೆಗಳ ವಿಶೇಷತೆ, ವ್ಯಕ್ತವಾಗುವ ಭಾವನೆಗಳ ಪುಟ್ಟ ವಿಮರ್ಶೆಯೂ ಇತ್ತು. ಹಾಗಾಗಿ ಇದು ಸಂಗೀತ-ಸಾಹಿತ್ಯ ಸಮ್ಮಿಲನ ಕಾರ್ಯಕ್ರಮವಾಗಿತ್ತು.
 ಎಲ್ಲಾ ಗೀತೆಗಳೂ ನಾಡಿನ ಸುಗಮ ಸಂಗೀತ ಕ್ಷೇತ್ರದ ದಿಗ್ಗಜರಾದ ಮೈಸೂರು ಅನಂತಸ್ವಾಮಿ ಹಾಗೂ ಸಿ. ಅಶ್ವತ್ಥ ಅವರ ರಾಗಸಂಯೋಜನೆಯ ಭಾವಗೀತೆಗಳಾಗಿದ್ದವು. ದ.ರಾ. ಬೇಂದ್ರೆ ಅವರ ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ... ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕುವೆಂಪು ಅವರ ಮುಚ್ಚುಮರೆ ಇಲ್ಲದೆಯೇ..., ದ.ರಾ. ಬೇಂದ್ರೆ  ಅವರ ಘಮಘಮ ಘಮಾಡಿಸ್ತಾವ ಮಲ್ಲಿಗೀ..., ನಿಸಾರ್ ಅಹಮದ್ರಕುರಿಗಳು ಸಾರ್ ಕುರಿಗಳು...,   ನರಸಿಂಹಸ್ವಾಮಿ ಅವರ ದೀಪವು ನಿನ್ನದೆ ಗಾಳಿಯು ನಿನ್ನದೇ... ಸೇರಿದಂತೆ ಹಲವು ಗೀತೆಗಳು ಮೂಡಿಬಂದವು. ದೀಪಕ್ ಜಯಶೀಲನ್ ಅವರ ಕೀಬೋರ್ಡ್, ಅರವಿಂದ ನಾಜರೆ ಹಾಗೂ ರಾಘವೇಂದ್ರ ಪ್ರಭು ಅವರ ತಬಲಾ, ರಾಘವೇಂದ್ರ ರಂಗದೋಳ್ ಅವರ ರಿದಂ ಪ್ಯಾಡ್ ಈ ಕಾರ್ಯಕ್ರಮಕ್ಕಿತ್ತು.ವಿದ್ವಾನ್ ಶೃಂಗೇರಿ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮವು ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. 'ಕನ್ನಡಪ್ರಭ' ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಹಾಗೂ 'ಸಖಿ' ಮಾಧ್ಯಮ ಸಹಕಾರವಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.