ಶಿವಮೊಗ್ಗ

ಅಪಘಾತ: ಗ್ರಾಪಂ ಕಂಪ್ಯೂಟರ್ ಅಪರೇಟರ್ ಸಾವು

Published On :

ಹೊಸನಗರ: ಬೈಕ್ ಅಪಘಾತ ಸಂಭವಿಸಿ ಗ್ರಾಪಂ ಕಂಪ್ಯೂಟರ್ ಆಪರೇಟರ್ ಸಾವನ್ನಪ್ಪಿದ ಘಟನೆ ತಾಲೂಕಿನ ಸಂಪೇಕಟ್ಟೆ ಸಮೀಪ ಬಾಗಿಮನೆಯಲ್ಲಿ ಸಂಭವಿಸಿದೆ.
ಸಂಪೇಕಟ್ಟೆ (ಹೊಸೂರು) ಗ್ರಾಪಂನಲ್ಲಿ ಕಂಪ್ಯೂಟರ್ ಆಪರೇಟರ್ ಸುಬ್ರಹ್ಮಣ್ಯ (32) ಮೃತ ವ್ಯಕ್ತಿ.
ಘಟನೆ ವಿವರ: ಸೋಮವಾರ ಸಂಜೆ ಕೆಲಸ ಮುಗಿಸಿ ಬೈಕ್ನಲ್ಲಿ ಮನೆಗೆ ತೆರಳುವಾಗ ನಿಯಂತ್ರಣ ತಪ್ಪಿ ಸುಮಾರು 15 ಅಡಿ ಕೆಳಗೆ ಬೈಕ್ ಸಮೇತ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಬಂದ್ ಆಚರಣೆ: ಯುವಕ ಸುಬ್ರಹ್ಮಣ್ಯ ಜನಾನುರಾಗಿಯಾಗಿದ್ದು ಇಡೀ ಊರಿನ ವಿಶ್ವಾಸ ಗಳಿಸಿದ್ದು ಊರಿನಲ್ಲಿ ಕೆಲವು ಸ್ಮಶಾನಮೌನ ಆವರಿಸಿತ್ತು. ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ ಸಂಪೇಕಟ್ಟೆಯಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಮೃತ ಸುಬ್ರಹ್ಮಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹೊಸೂರು ಗ್ರಾಪಂ ಅಧ್ಯಕ್ಷೆ ರಮಾವತಿ, ಉಪಾಧ್ಯಕ್ಷ ಮೋಹನಶೆಟ್ಟಿ, ಸದಸ್ಯರಾದ ಕಾಲಸಸಿ ಸುಬ್ರಹ್ಮಣ್ಯ, ಸ್ವಾಮಿ, ಮಹಾಬಲೇಶ್ವರಭಟ್, ರೇಣುಕಾ, ತ್ರಿಣಿವೆ, ಪ್ರಮುಖರಾದ ಪ್ರಮೋದ್, ನಾಗೇಶ್ ಶೇಟ್, ರಾಮಪ್ಪ, ವಿವೇಕ ಕಾಮತ್, ಮಂಜಪ್ಪ, ಶ್ರೀಧರ ಆಚಾರ್, ನಾಗಪ್ಪ ಮುಡಾಗ್ರೆ, ನೂಲಿಗ್ಗೇರಿ ಅಬ್ಬಾಸ್ ಸಂತಾಪ ಸೂಚಿಸಿದ್ದಾರೆ.
ಈಜಲು ಹೋಗಿ ಮೃತಪಟ್ಟವರ ಶವ ಪತ್ತೆ
ಶಿವಮೊಗ್ಗ: ಚೋರಡಿಯ ಬಳಿ ಕುಮದ್ವತಿ ನದಿಯಲ್ಲಿ ಈಜಲು ಹೋಗಿ ಸಾವನಪ್ಪಿದ್ದ ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ಗಳ ಶವ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿವೆ.
ಸತತ ಎರಡು ದಿನಗಳ ಕಾರ್ಯಾಚರಣೆ ನಡೆಸಿದ ಸ್ಥಳೀಯ ಪೊಲೀಸರು, ಮೀನುಗಾರರು ಮತ್ತು ಮಂಗಳೂರಿನ ನುರಿತ ಈಜುಗಾರರು ಶವ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ 5 ಜನರ ತಂಡ, ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಿಕೊಂಡು ಭಾನುವಾರ ಬೆಂಗಳೂರಿಗೆ ವಾಪಸ್ ಹೋಗುವಾಗ ಮಾರ್ಗಮಧ್ಯೆ ಚೋರಡಿಯ ಕುಮದ್ವತಿ ನದಿ ದಂಡೆಯಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ನಂತರ ನದಿಗೆ ಈಜಲು ಹೋದ ನಾರಾಯಣ್ ರೋಹಿತ್, ಶಂಕರ್ ಜೋಶಿ ನೀರು ಪಾಲಾಗಿದ್ದರು. ಘಟನೆ ನಡೆದ ದಿನ ನದಿಯಲ್ಲಿ ನೀರು ಹೆಚ್ಚು ರಭಸದಿಂದ ಹರಿಯುತ್ತಿದ್ದರಿಂದ ಶವಗಳನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಶವಗಳನ್ನು ಪತ್ತೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.