ಕ್ಷಯರೋಗ ನಿಯಂತ್ರಣ ಕುರಿತು ಕಾರ್ಯಾಗಾರ
ಕಡೂರು: ತಾಲೂಕಿನ ಕಾಮನಕೆರೆ ಮತ್ತು ಸೀಗೇಹಡ್ಲು ಗ್ರಾಮಗಳಲ್ಲಿ ಗ್ರಾಮೀಣ ಜನರಿಗಾಗಿ ಕ್ಷಯರೋಗದ ಕುರಿತು ಅರಿವು ಮೂಡಿಸುವ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಕಾಮನಕರೆ ಗ್ರಾಪಂ, ಸೀಗೇಹಡ್ಲು ಗ್ರಾಮದಲ್ಲಿ ಜಿ. ಯರದಕೆರೆ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಕ್ಯಾಥೋಲಿಕ್ ಅಸೋಷಿಯೇಷನ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕ್ಷಯರೋಗ ನಿಯಂತ್ರಣ ಕಾರ್ಯಾಗಾರದಲ್ಲಿ ಜಿ. ಯರದಕೆರೆ ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷ ಎಚ್. ಓಂಕಾರಪ್ಪ ಮಾತನಾಡಿ, ಗ್ರಾಮೀಣ ಜನರು ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸುವ ಮೂಲಕ ಕ್ಷಯರೋಗ ಮತ್ತು ಮಲೇರಿಯಾದಂತಹ ಕಾಯಿಲೆಗಳು ಕಾಣಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಾಯಿಲೆ ನಿಯಂತ್ರಣಕ್ಕೆ ಮಾರ್ಗದರ್ಶನ ಮತ್ತು ಪರಿಸರದ ಸ್ವಚ್ಛತೆ ಇಲ್ಲದಿರುವುದರಿಂದಲೂ ಕಾಯಿಲೆಗೆ ತುತ್ತಾಗುತ್ತಾನೆ ಎಂದರು.
ಕ್ಯಾಥೋಲಿಕ್ ಅಸೋಷಿಯೇಷನ್ ಆಫ್ ಇಂಡಿಯಾದ ಸಂಯೋಜಕ ಸುಭಾಷ್ ಜೈನ್ ಮಾತನಾಡಿ, ಆಧುನಿಕ ಯುಗದತ್ತ ನಾವು ಸಾಗುತ್ತಿದ್ದರೂ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸದ ಕಾರಣ ವಿವಿಧ ರೋಗಗಳಿಗೆ ತುತ್ತಾಗುತ್ತಾರೆ. ಇಂತಹ ಕಾರ್ಯಗಾರಗಳಲ್ಲಿ ನೀಡುವ ಮಾರ್ಗದರ್ಶನದಿಂದ ಆರೋಗ್ಯ ಕಾಪಾಡಿಕೊಂಡು ರೋಗದಿಂದ ದೂರ ಉಳಿಯಬಹುದು ಎಂದು ಸಲಹೆ ನೀಡಿದರು. ಆರೋಗ್ಯ ನಿರೀಕ್ಷಕ ಜಿ.ಜಿ. ಶಿವಕುಮಾರ್ ಕ್ಷಯರೋಗಕ್ಕೆ ಕಾರಣಗಳು ಹಾಗೂ ನಿಯಂತ್ರಣದ ಕುರಿತು ಮಾಹಿತಿ ನೀಡಿದರು. ಕ್ಷಯರೋಗದ ಕುರಿತು ಗ್ರಾಮದಲ್ಲಿ ಜಾಗೃತಿ ಮೆರವಣಿಗೆ ನಡೆಸಲಾಯಿತು. ಬಸವರಾಜು, ಮಲ್ಲಿಕಾರ್ಜುನಪ್ಪ, ಮಲ್ಲಪ್ಪ, ಜಿ.ಕೆ. ರೇವಣ್ಣ, ಜಯಣ್ಣ, ಗ್ರಾಮಸ್ಥರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

