ಶಿವಮೊಗ್ಗ

ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಆ.28
ಜಿಲ್ಲಾ ಒಲಿಂಪಿಕ್ ಸಂಸ್ಥೆ, ಜಿಲ್ಲಾಡಳಿತ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಬಾಡ್ಮಿಂಟನ್ ಸಂಸ್ಥೆ, ಜಿಲ್ಲಾ ಬಾಡ್ಮಿಂಟನ್ ಸಂಸ್ಥೆ ಸಹಯೋಗದಲ್ಲಿ ಸೆ.12ರಿಂದ 19ರ ವರೆಗೆ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಲಿ. ನಿಂಗ್ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸ್ಪರ್ಧೆ ಏರ್ಪಡಿಸಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಂದ್ಯಾವಳಿಯ ಸಂಚಾಲಕ ಡಿ.ಎಸ್. ಅರುಣ್, 13ರಿಂದ 19 ವರ್ಷ ವಯೋವುತಿಯ ಬಾಲಕ, ಬಾಲಕಿಯರು, 19-40 ವರ್ಷ ಮೇಲ್ಪಟ್ಟ ಪುರುಷ-ಮಹಿಳೆಯರು, 45 ವರ್ಷ ಮೇಲ್ಪಟ್ಟ ಹಿರಿಯರ ವಿಭಾಗಗಳಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಶ್ರೇಣಿಯಲ್ಲಿ ಪಂದ್ಯಾವಳಿ ನಡೆಸಲಾಗುವುದು ಎಂದರು.
ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ಸಹ ಈ ಪಂದ್ಯಾವಳಿಯಲ್ಲಿ ನಡೆಯುವುದರಿಂದ ರಾಜ್ಯದ ಎಲ್ಲಾ ಜಿಲ್ಲೆಯ ಬ್ಯಾಡ್ಮಿಂಟನ್‌ನ ಸುಮಾರು 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕ್ರೀಡಾಪಟುಗಳು ಹಾಗೂ ಕ್ರೀಡಾಧಿಕಾರಿಗಳ ಹಿತದೃಷ್ಟಿಯಿಂದ ಆಹಾರ ಸಮಿತಿ, ವಸತಿ ಸಮಿತಿಗಳನ್ನು ಮಾಡಲಾಗಿದ್ದು, ಕ್ರೀಡಾ ಪಟುಗಳಿಗೆ ಮಧ್ಯಾಹ್ನ ಉಟದ ವ್ಯವಸ್ಥೆ, ಕ್ರೀಡಾಧಿಕಾರಿಗಳಿಗೆ ವಸತಿ, ಊಟದ ವ್ಯವಸ್ಥೆ, ನೆನಪಿನ ಕಾಣಿಕೆ ಹಾಗೂ ಪಂದ್ಯಾವಳಿ ಆಯೋಜಿಸುವ ವ್ಯವಸ್ಥೆಯನ್ನು ಸಂಘಟನಾ ಸಮಿತಿ ಮಾಡುತ್ತಿದೆ ಎಂದು ತಿಳಿಸಿದರು.
4 ಲಕ್ಷ ವೆಚ್ಚ: ನಗದು ಬಹುಮಾನ, ಷಟಲ್ ವ್ಯವಸ್ಥೆ, ತೀರ್ಪುಗಾರರ ಭತ್ಯೆ, ಟ್ರೋಫಿಗಳನ್ನು ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಲಿ. ನಿಂಗ್ ಕಂಪನಿ ಸಹಯೋಗದಲ್ಲಿ ನೀಡಲಾಗುವುದು ಎಂದರಲ್ಲದೇ, ಜಿಲ್ಲಾ ಸಂಘಟನಾ ಸಮಿತಿಗೆ ಪಂದ್ಯಾವಳಿ ನಡೆಸಲು ಸುಮಾರು 4 ಲಕ್ಷ ವೆಚ್ಚವಾಗುವ ಸಾಧ್ಯತೆ ಇದೆ.
ಕ್ರೀಡಾ ಇಲಾಖೆಗೂ ಸಹ ಪಂದ್ಯಾವಳಿಗೆ ಹಣ ನೀಡುವಂತೆ ಕೋರಲಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ನೀಡುವುದಾಗಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ ಎಂದರು.
2 ಲಕ್ಷದ ಬಹುಮಾನ: ಸ್ಥಳೀಯ ರಾಜ್ಯ ಮಟ್ಟದ ಹಿರಿಯ, ಕಿರಿಯ ಆಟಗಾರರನ್ನು ಪ್ರೋತ್ಸಾಹಿಸಲು ಪಂದ್ಯಾವಳಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಅಂತಹ ಆಟಗಾರರನ್ನು ಅಸೋಸಿಯೇಷನ್ ಗುರುತಿಸುವ ಕಾರ್ಯದಲ್ಲಿ ನಿರಂತವಾಗಿದೆ ಎಂದ ಅವರು, ಪಂದ್ಯಾವಳಿಯಲ್ಲಿ ಒಟ್ಟು 2ಲಕ್ಷ ಮೊತ್ತದ ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಆಸಕ್ತ ಕ್ರೀಡಾಪಟುಗಳು ಸೆ.1ರೊಳಗೆ ತಮ್ಮ ಹೆಸರನ್ನು ಕಾರ್ಯದರ್ಶಿ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್, ನಂ.04, ಜಸ್ಮಾ ಭವನ ರಸ್ತೆ, ಮಿಲ್ಲರ್ ಟ್ಯಾಂಕ್ ರಸ್ತೆ, ಬೆಂಗಳೂರು- 560052, ವಿವರಗಳಿಗಾಗಿ- 080-42788888, ಫ್ಯಾಕ್ಸ್-080-22254756, ಈ.ಮೇಲ್- ್ಝಟಿಜ್ಟಿಣ್ಞಛಿಛ.್ಟ್ಠ್ಜ.್ಝಟಿ, ವೆಬ್‌ಸೈಟ್. ಢಿಢಿಢಿ.್ಞಛಿಛ.್ಟ್ಠ್ಜ.್ಝಟಿ ಅಥವಾ ಎಂ.ವಿ. ನವೀನ್ ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಒಲಂಪಿಕ್ ಅಸೋಸಿಯೇಷನ್, ನೆಹರು ಕ್ರೀಡಾಂಗಣ, ಶಿವಮೊಗ್ಗ.
ವಿವರಗಳಿಗಾಗಿ- 9480128829 ಇಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಲಿಂಪಿಕ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಶಶಿ,  ನವೀನ್, ಆದಿತ್ಯ, ಕಿರಣ, ಎಂ.ಕೆ. ಸುರೇಶ್‌ಕುಮಾರ್, ರಮೇಶ್ ಶಾಸ್ತ್ರಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.