ರಿಡೋಮಿಲ್ ಸಿಂಪಡಣೆಯಿಂದ ಕೊಳೆರೋಗ ನಿಯಂತ್ರಣ
ಸಾಗರ: ಅಡಕೆ ಮರಗಳಿಗೆ ರಿಡೋಮಿಲ್ ಅಥವಾ ತಾಮ್ರದ ಆಕ್ಸೈಡ್ ಸಿಂಪಡಣೆಯಿಂದಾಗಿ ಕೊಳೆರೋಗ ಬರದಂತೆ ತಡೆಗಟ್ಟಬಹುದು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಅಡಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ನಾರಾಯಣಸ್ವಾಮಿ ಹೇಳಿದರು.
ಕೊಳೆರೋಗದಿಂದ ಅಡಕೆ ಮರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ಹಾಗೂ ತೋಟಗಾರಿಕೆ ಇಲಾಖೆ ತಾಲೂಕಿನ ಮಾವಿನಸರದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದ ಪರಿಣಾಮ ಅಡಕೆ ಬೆಳೆ ಮೇಲೆ ದುಷ್ಪರಿಣಾಮ ಉಂಟಾಗಿದೆ. ಮೋಡ ಕವಿದ ವಾತಾವರಣ, ತೋಟದಲ್ಲಿ ನೀರು ನಿಂತಿರುವುದು, ಹೆಚ್ಚಾದ ಮಣ್ಣಿನ ತೇವಾಂಶ, ಪೋಷಕಾಂಶ ಕೊಚ್ಚಿಕೊಂಡು ಹೋಗಿರುವುದು, ಸೂರ್ಯನ ಬೆಳಕಿನ ಕೊರತೆ ಇತ್ಯಾದಿ ಕಾರಣಗಳು ಕೊಳೆ ವ್ಯಾಪಕವಾಗಿ ಹಬ್ಬಲು ಕಾರಣವಾಗಿದೆ ಎಂದರು.
ಹಾನಿ ಹೆಚ್ಚಾಗುವ ಸಾಧ್ಯತೆ: ಕೊಳೆರೋಗದಿಂದ ಹಸಿರು ಎಳೆಕಾಯಿ ಭಾರೀ ಪ್ರಮಾಣದಲ್ಲಿ ಉದುರಿದೆ. ಜೊತೆಗೆ ಬೆಳೆದ ಕಾಯಿಗಳಲ್ಲಿ ನೀರ್ಗೊಳೆ ಕಂಡುಬಂದಿದೆ. ಕೊಳೆರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹಾನಿ ಹೆಚ್ಚಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸೂಕ್ತ ಪೋಷಕಾಂಶ ಒದಗಿಸುವ ಅಗತ್ಯವಿದೆ. ಮಲೆನಾಡಿನಲ್ಲಿ ಆಮ್ಲೀಯ ಮಣ್ಣು ಜಾಸ್ತಿ ಇರುವುದರಿಂದ ಪೋಷಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಸುಣ್ಣವನ್ನು ಬಳಕೆ ಮಾಡಬೇಕು. ಬೆಳೆಗಾರರು ತಕ್ಷಣ ಅಡಕೆ ಮರಗಳ ಬುಡಕ್ಕೆ ಬೇವಿನಹಿಂಡಿ ಹಾಗೂ ಸುಣ್ಣವನ್ನು ಹಾಕಿದರೆ ಕೊಳೆರೋಗ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ ಎಂದರು.
ಮತ್ತೋರ್ವ ವಿಜ್ಞಾನಿ ಡಾ.ಶಿವಣ್ಣ, ಕೊಳೆರೋದಿಂದ ಉದುರಿರುವ ಅಡಕೆ ಎಳೆಕಾಯನ್ನು ತಕ್ಷಣ ಸುಟ್ಟು ಹಾಕದಿದ್ದರೆ ಶಿಲೀಂದ್ರ ಮರಗಳಿಗೂ ವ್ಯಾಪಿಸುತ್ತದೆ. ಪೋಷಕಾಂಶ ಕಡಿಮೆ ಆದರೆ ಅಡಕೆ ಹೆಚ್ಚು ಉದುರುತ್ತದೆ. ತೋಟಗಳಲ್ಲಿ ಹೆಚ್ಚು ನೀರು ನಿಲ್ಲದಂತೆ ಬಸಿಗಾಲುವೆಗಳನ್ನು ಚೊಕ್ಕ ಮಾಡಿ ನೀರು ಹರಿದು ಹೋಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ಮಾಡಿದರು.
ಕೃಷಿಕ ಸಮಾಜದ ಅಧ್ಯಕ್ಷ ತಿಮ್ಮಪ್ಪ, ಅಡಕೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಭಟ್, ರಾಮಮೂರ್ತಿ, ದತ್ತಾತ್ರೇಯ, ಮೃತ್ಯುಂಜಯ, ಅರುಣ್, ಕೃಷ್ಣಮೂರ್ತಿ, ರಾಧಾಕೃಷ್ಣ, ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ತಿಮ್ಮಪ್ಪ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

