ಶಿವಮೊಗ್ಗ

ಬಿಸಿಯೂಟ ಖಾಸಗೀಕರಣಕ್ಕೆ ವಿರೋಧ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಆ.31
ಬಿಸಿಯೂಟ ಯೋಜನೆಯ ಖಾಸಗೀಕರಣವನ್ನು ಸರ್ಕಾರ ತಕ್ಷಣವೇ ನಿಲ್ಲಿಸಬೇಕು ಹಾಗೂ ಕನಿಷ್ಠ ಕೂಲಿ, ಕೆಲಸದ ಭದ್ರತೆ ನೀಡುವಂತೆ ಅಕ್ಷರ ದಾಸೋಹ ನೌಕರರು ಸರ್ಕಾರವನ್ನು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ನಗರದ ಸೆಂಟ್ ಥಾಮಸ್ ಸಮುದಾಯ ಭವನದಲ್ಲಿ ರಾಜ್ಯ ಅಕ್ಷರ ದಾಸೋಹ ನೌಕರರ ರಾಜ್ಯ ಸಮ್ಮೇಳನದಲ್ಲಿ ಈ ಕೂಗು ಕೇಳಿಬಂತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷ ವಿ.ಜೆ.ಕೆ. ನಾಯರ್, ದೇಶಾದ್ಯಂತ ಸುಮಾರು 9.5 ಲಕ್ಷ ಶಾಲೆಗಳು ಮತ್ತು ಎಜುಕೇಶನ್ ಗ್ಯಾರಂಟಿ ಸ್ಕೀಮ್ಗಳಲ್ಲಿ ಇರುವ 12 ಕೋಟಿಗೂ ಅಧಿಕ ಮಕ್ಕಳನ್ನು ಒಳಗೊಂಡ ಮಧ್ಯಾಹ್ನದ ಊಟ ಯೋಜನೆಯು 11 ವರ್ಷಗಳಿಂದ ಜಾರಿಯಲ್ಲಿದ್ದು, ಇದರಲ್ಲಿ ಭಾಗವಹಿಸುತ್ತಿರುವ ದಾಸೋಹ ನೌಕರರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಕ್ಕಳ ಆಹಾರ, ಆರೋಗ್ಯ, ಶಿಕ್ಷಣದ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಖಾಸಗೀಕರಣ ನಿಲ್ಲಬೇಕು ಆಗ್ರಹಿಸಿದರು.
ಖಾಸಗೀಕರಣಕ್ಕೆ ವಿರೋಧ: ಅಕ್ಷರ ದಾಸೋಹ ಉತ್ತಮ ಯೋಜನೆ. ರಾಜ್ಯದಲ್ಲಿ 61 ಲಕ್ಷ ಮಕ್ಕಳಿಗೆ 1.4 ಲಕ್ಷ ಮಹಿಳೆಯರು ಪ್ರತಿನಿತ್ಯ ಉಣಬಡಿಸುತ್ತಿದ್ದು, ಈಗ ಅವರ ಬದುಕು ಖಾಸಗೀಕರಣ ಕರಾಳ ಛಾಯೆಗೆ ಒಳಗಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ರು.
ದೇಶದಲ್ಲಿ ಖಾಸಗೀಕರಣ ನಿಲ್ಲಬೇಕು. ಹೊರದೇಶದಿಂದ ಆಮದನ್ನು ನಿಲ್ಲಿಸಬೇಕು. ಪ್ರತಿಯೊಬ್ಬ ಕಾರ್ಮಿಕನಿಗೂ ಕನಿಷ್ಠ ಕೂಲಿ 10 ಸಾವಿರವನ್ನು ನೀಡಬೇಕು. 1993ರಲ್ಲಿ ಸಿಐಟಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಬೇಡಿಕೆ ಇದಾಗಿದ್ದು, ಆದರೂ ಇದುವರೆಗೂ ಯಾವೊಂದು ಸರ್ಕಾರವೂ ಈಡೇರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾರಿ ಗಣಿಯನ್ನು ಖಾಸಗೀಕರಣಕ್ಕೆ ಬಿಟ್ಟು ದೇಶದ ಸಂಪತ್ತನ್ನು ಲೂಟಿ ಮಾಡಿದ್ದಾಯಿತು. ಇನ್ನೊಂದೆಡೆ ಕೋಲಾರದ ಚಿನ್ನದ ಗಣಿ ಸೇರಿದಂತೆ ರಾಜ್ಯದಲ್ಲಿ ಸ್ಥಗಿತಗೊಂಡಿರುವ ಉದ್ದಿಮೆಗಳನ್ನು ಸರ್ಕಾರ ಮಧ್ಯೆ ಪ್ರವೇಶಿಸಿ ಪುನರುಜ್ಜೀವನ ಮಾಡಬೇಕು ಎಂದು ಆಗ್ರಹಿಸಿದರು.
ಕನಿಷ್ಠ ಕೂಲಿ ನೀಡಿ: ಮುಖ್ಯ ಅಥಿತಿಯಾಗಿದ್ದ ಅಖಿಲ ಭಾರತ ಸಿಐಟಿಯು ಮುಖ್ಯಸ್ಥೆ ಸಿಂಧು ಮಾತನಾಡಿ, ಇಷ್ಟು ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಸೇರಿದ್ದ ಅವರ ಸಂಕಷ್ಟವನ್ನು ಸೂಚಿಸುತ್ತದೆ. ಸಂಘಟಿತರಾಗದೇ ಯಾವುದೇ ಬೇಡಿಕೆ ಈಡೇರುವುದಿಲ್ಲ.
ಕೂಡಲೇ ಸರ್ಕಾರ ಕಡು ಬಡವ ಕಾರ್ಮಿಕರಿಗೆ ಅಕ್ಷರ ದಾಸೋಹ ಕಾರ್ಮಿಕರಿಗೆ ಖಾಯಂ ನೌಕರರೆಂದು ಪರಿಗಣಿಸಿ ಕನಿಷ್ಠ ಕೂಲಿಯನ್ನು ನಿಗದಿಪಡಿಸಿ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಯಮುನಾ ಗಾಂವ್ಕರ್, ಜನವಾದಿ ಮಹಿಳಾ ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮೀ, ಸಿಐಟಿಯು ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತಾ, ಸಾಹಿತಿ ಸವಿತಾ ನಾಗಭೂಷಣ, ಜಿ.ಎಸ್.ನಾಗರಾಜ್ ಮೊದಲಾದವರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಸೈನ್ಸ್ ಮೈದಾನದಿಂದ ಸಂತ ಥಾಮಸ್ ಭವನದ ವರೆಗೆ ಬಿಸಿಯೂಟ ಕಾರ್ಯಕರ್ತೆಯರು ಮೆರವಣಿಗೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.