ಶಿವಮೊಗ್ಗ

ಯುವಜನ ಸಂಘದ ಯುವ ಶಾಖೆ ಉದ್ಘಾಟನೆ

Published On :

ಸೊರಬ: ತಾಲ್ಲೂಕಿನ ಆನವಟ್ಟಿ ಕನ್ಯಕಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ತಾಲ್ಲೂಕು ಯುವಜನ ಸಂಘದ ಯುವ ಶಾಖೆ ಉದ್ಘಾಟನಾ ಸಮಾರಂಭ ಜರುಗಿತು.
ಸಂಘದ ಸಂಸ್ಥಾಪಕ ಎಂ.ಎಸ್.ಕಾರ್ತೀಕ್ ಉದ್ಘಾಟಿಸಿದರು. ಪರಸ್ಪರರಲ್ಲಿನ ನಂಬಿಕೆ ವಿಶ್ವಾಸ ಬಲಪಡಿಸಿಕೊಳ್ಳುವ ಮೂಲಕ ಯುವ ಜನತೆ ಸಂಘಟಿತರಾಗಬೇಕು, ಸಂಘಟನೆಯ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿದರೆ ದೇಶದ ಆರ್ಥಿಕ, ಬೌದ್ಧಿಕ ಅಭಿವೃದ್ಧಿ ಸಾಧ್ಯ ಎಂದರು.
ಆರ್ಥಿಕ ನೆರವು: ಈಚೆಗೆ ಆನವಟ್ಟಿಯಲ್ಲಿ ವಿದ್ಯುತ್ ತಗುಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಧನ ಸಹಾಯ ಮಾಡುವುದಾಗಿ ಅವರು ಘೋಷಿಸಿದರು.
ಹೃದಯಕಾಯಿಲೆಯಿಂದ ಬಳಲುತ್ತಿರುವ ತಾಲ್ಲೂಕು ಹುರಳಿ ಗ್ರಾಮದ ರಾಮಪ್ಪ ಗಿಣಿವಾಲದ್ ಅವರ ಪತ್ನಿಗೆ ಇದೇ ವೇಳೆ 2500 ರು.ಸಹಾಯಧನ ನೀಡಲಾಯಿತು.    
ಸಂಘದ ಅಧ್ಯಕ್ಷ ಸಂಪತ್ ಕುಮಾರ್, ಯುವ ಶಾಖೆ ಅಧ್ಯಕ್ಷ ಪ್ರವೀಣ್, ಉಪಾಧ್ಯಕ್ಷ ಅಮರ್ ಪಾಟೀಲ್, ಗೌರವಾಧ್ಯಕ್ಷ ಸಿದ್ಧಲಿಂಗೇಶ್, ಪ್ರಧಾನ ಕಾರ್ಯದರ್ಶಿ ರಾಜು ಬಡಗಿ, ಕಾರ್ಯದರ್ಶಿ ಅದ್ದು, ಖಜಾಂಚಿ ಖಾದರ್, ಸಮೀರ್ ಪಾಷಾ, ಪಿ.ಎಂ.ಪ್ರಕಾಶ್, ನಾಗರಾಜ್ ಹಾಗೂ ಮುಖ್ಯ ಅತಿಥಿಗಳಾಗಿ ಗ್ರಾಮ ಗಣ್ಯರಾದ ಖಲಂದರ್ ಸಾಬ್, ಮೆಸ್ಕಾಂ ಸಹಾಯಕ ಅಭಿಯಂತರ ಲಕ್ಷ್ಮಣ್, ಶಾಖಾಧಿಕಾರಿ ಸಂದೀಪ್, ಸಂಘದ ಪುಟ್ನಳ್ಳಿ ಶಾಖೆ ಅಧ್ಯಕ್ಷ ಕೋಶಾನಂದ, ಉದರಚಂದ್ರ, ಅರುಣ, ಸಂತೋಷ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.