ಶಿವಮೊಗ್ಗ

ಮೆಗಾ ಲೋಕ ಅದಾಲತ್

Published On :

ಸೊರಬ: ಪಟ್ಟಣದ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ ಅದಾಲತ್‌ನ್ನು ನ್ಯಾಯಾಧೀಶೆ ಅನಿತಾ ಜಿ ಉದ್ಘಾಟಿಸಿದರು. ರಾಜೀ ಮೂಲಕ ಹಣ, ಸಮಯ ಎಲ್ಲವನ್ನೂ ಉಳಿಸಬಹುದು. ಹಾಗಾಗಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.   ನವೆಂಬರರ್ತಿಂಗಳ ಲೋಕ ಅದಾಲತ್‌ನಲ್ಲಿ ಒಟ್ಟು 202 ಪ್ರಕರಣಗಳು ಇತ್ಯರ್ಥಗೊಂಡವು.  ವಕೀಲರ ಸಂಘದ ಅಧ್ಯಕ್ಷ ಕೆ.ಹೆಚ್. ತಮ್ಮಣ್ಣಪ್ಪ,  ಕಾರ್ಯದರ್ಶಿ ರಂಗನಾಥ ಚಕ್ರಪಾಣಿ, ವಕೀಲ ವೈ.ಜಿ. ಪುಟ್ಟಸ್ವಾಮಿ, ಸುಧಾಕರ ಪಿ. ನಾಯ್ಕ, ಎಪಿಪಿ ಮಾಂಗ್ಲಿ,  ಸೈಯದ್ ಅಬ್ದುಲ್ ರೆಹಮಾನ್, ಗುರುಸ್ವಾಮಿ, ರಾಮಪ್ಪ ಮೊದಲಾದವರಿದ್ದರು.
ಯುವತಿ ಆತ್ಮಹತ್ಯೆ
ಶಿವಮೊಗ್ಗ: ನೆರೆ ಮನೆಯವರ ನಿಂದನೆಯಿಂದ ಮನನೊಂದ ಯುವತಿಯೊಬ್ಬಳು ಮೈಮೇಲೆ ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭದ್ರಾವತಿಯ ಸತ್ಯಸಾಯಿ ನಗರದಲ್ಲಿ ನಡೆದಿದೆ. ಪವಿತ್ರ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಪವಿತ್ರ ನೀರು ಹಿಡಿಯಲು ಹೋದ ವೇಳೆ ನೆರೆ ಮನೆಯ ಮಹಿಳೆಯೊಬ್ಬರು ಅವಾಚ್ಯವಾಗಿ ನಿಂದಿಸುತ್ತಿದ್ದು, ಇದರಿಂದ ಬೇಸತ್ತ ಪವಿತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ಏಳುಮಲೈ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ಹೊಸಮನೆ ಠಾಣೆಯಲ್ಲಿ ದಾಖಲಾಗಿದೆ.
ಪಾದಚಾರಿಗೆ ಗಾಯ
ಶಿವಮೊಗ್ಗ: ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಬಾಲಕಿಯೊಬ್ಬಳು ಗಾಯಗೊಂಡ ಘಟನೆ ಶಿವಮೊಗ್ಗ - ಭದ್ರಾವತಿ ನಡುವಿನ ಮಾಚೇನಹಳ್ಳಿ ಡೈರಿ ಬಸ್ ನಿಲ್ದಾಣದ ಬಳಿ ನಡೆದಿದೆ. ಸೋಗಾನೆ ಗ್ರಾಮದ ನಿವಾಸಿ ರೇಣುಕಾ (10) ಗಾಯಗೊಂಡ ಬಾಲಕಿ. ಈಕೆ ಅಂಗಡಿಯಿಂದ ಸಾಮಾನು ಖರೀದಿಸಿ ರಸ್ತೆ ದಾಟುವ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯ ನಂತರ ಸ್ಥಳದಲ್ಲಿಯೇ ಲಾರಿ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ಭದ್ರಾವತಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.