ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಿ
ತೀರ್ಥಹಳ್ಳಿಯಲ್ಲಿರುವ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆ ವ್ಯವಸ್ಥೆ ಅಯೋವುಯವಾಗಿದೆ. ಸ್ವಚ್ಛತೆ ಕೊರತೆಯಿಂದಾಗಿ ಇಲ್ಲಿಗೆ ಬರುವ ರೋಗಿಗಳಿಗೆ ಸೊಳ್ಳೆ ಕಾಟ ಸಾಮಾನ್ಯದ ಸಂಗತಿ. ಇದರಿಂದಾಗಿಯೇ ಸಾಕಷ್ಟು ರೋಗಗಳು ಹರಡುವ ಸಾಧ್ಯತೆ ಹೆಚ್ಚು. ಇದಲ್ಲದೇ, ತುಕ್ಕು ಹಿಡಿದ ಮಂಚ, ಹರಿದ ಬೆಡ್ಶೀಟ್ಗಳು ರೋಗಿಗಳನ್ನು ಸ್ವಾಗತಿಸಲು ಸದಾ ಸಿದ್ಧವಿರುತ್ತವೆ. ಈ ಆಸ್ಪತ್ರೆಗೆ ಬಡವರೇ ಹೆಚ್ಚಾಗಿ ಬರುತ್ತಾರೆ. ಆದರೆ, ಅವರಿಗೆ ಸೂಕ್ತವಾದ ಸೌಕರ್ಯಗಳು ಇಲ್ಲಿಲ್ಲ. ರೋಗಿಗಳ ಪರದಾಟ ನಿತ್ಯ ಹೇಳತೀರದು. ಹೀಗಾಗಿಯೇ ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಈ ರೀತಿ ಆಸ್ಪತ್ರೆ ಅವ್ಯವಸ್ಥೆಯನ್ನು ನೋಡಿದರೆ ಬೇಸರವೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಒಮ್ಮೆ ಇಲ್ಲಿನ ಸಮಸ್ಯೆಯನ್ನು ಖುದ್ದು ಗಮನಿಸಲಿ.
- ಮಂಜುನಾಥ, ತೀರ್ಥಹಳ್ಳಿ
ತುಮರಿ ಗ್ರಂಥಾಲಯ ಸಮಸ್ಯೆ
ಶರಾವತಿ ಸಂತ್ರಸ್ತವಾದ ಕರೂರಿನ ವ್ಯಾಪ್ತಿಯಲ್ಲಿ ಬರುವ ತುಮರಿಯ ಗ್ರಂಥಾಲಯ ಜಾಗದ ಸಮಸ್ಯೆ ತಲೆದೋರಿದೆ. ಇರುವ ಪುಟ್ಟ ಗ್ರಂಥಾಲಯದಲ್ಲಿ 3 ಮಂದಿ ಕೂರಲೂ ಜಾಗವಿಲ್ಲ. ಮಳೆಗಾಲದಲ್ಲಿ ಸೋರುವ ಗ್ರಂಥಾಲಯದ ಅವ್ಯವಸ್ಥೆ ಕಂಡು ಜನರೇ ಈ ಸೌಲಭ್ಯ ಪಡೆಯಲು ದೂರಾಗುವ ಪರಿಸ್ಥಿತಿ ಒದಗಿಬಂದಿದೆ. ಪುಸ್ತಕ ಹಾಗೂ ಇನ್ನಿತರ ಸಾಮಗ್ರಿ ಸಂಗ್ರಹಿಸಿಡಲು ಇಲ್ಲಿ ಜಾಗವಿಲ್ಲ. ಇಲ್ಲಿನ ಗ್ರಾಮ ಪಂಚಾಯ್ತಿಗೆ ಗ್ರಂಥಾಲಯದ ಪ್ರಾಮುಖ್ಯತೆ ತಿಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಜಿಲ್ಲಾಡಳಿತ ಕೂಡ ಇತ್ತ ಮನಸ್ಸು ಮಾಡಬೇಕು.
- ಗ್ರಾಮಸ್ಥರು ತಮರಿ
ಪೆಟ್ರೋಲ್ ಬಂಕ್ ಮೇಲೆ ನಿಗಾ ಇಡಿ
ಶಿವಮೊಗ್ಗ ನಗರದ ಪೆಟ್ರೋಲ್ ಬಂಕ್ಗಳಲ್ಲಿ ಸಾರ್ವಜನಿಕರು ನಿತ್ಯವೂ ಮೋಸ ಹೋಗುತ್ತಿದ್ದಾರೆ. ಕೆಲವು ಪೆಟ್ರೋಲ್ ಬಂಕ್ಗಳಲ್ಲಿನ ವಂಚನೆಯನ್ನು ಸಾರ್ವಜನಿಕರೇ ಬಯಲಿಗೆಳೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವ ಕ್ರಮಕೈಗೊಂಡಿದ್ದಾರೆಂದು ಅವರೇ ಸ್ಪಷ್ಟಪಡಿಸಬೇಕು. ಇಂಧನದ ಜೊತೆಗೆ ನೀರು ಸೇರಿಸಿ ವಿತರಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಯವರು ಖುದ್ದಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರಿಗಾಗುವ ಮೋಸ ತಡೆಯಬೇಕಾಗಿ ವಿನಂತಿ.
- ರಮೇಶ್
ವಿನೋಬ ನಗರ, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

