ಅಕ್ರಮ ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಒತ್ತಾಯ
ಶಿವಮೊಗ್ಗ: ಕಾನೂನು ಬಾಹಿರವಾಗಿ ಸಾಗಣೆ ಮಾಡುತ್ತಿರುವ ಜಲ್ಲಿಕಲ್ಲು ವಾಹನಗಳನ್ನು ಜಪ್ತಿ ಮಾಡುವಂತೆ ಒತ್ತಾಯಿಸಿ ಜಯಕರ್ನಾಟಕ ಸಂಘಟನೆ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಸುತ್ತಮುತ್ತಲಿನ ಕೆಲವು ಕಲ್ಲು ಕ್ವಾರೆಗಳಿಂದ ಸುಮಾರು ವರ್ಷಗಳಿಂದ ಕಲ್ಲು ಸರಬರಾಜು ಮಾಡಲಾಗುತ್ತಿದೆ. ಅಂಜನಾಪುರ ಡ್ಯಾಂ ಸೇರಿದಂತೆ ಹಲವು ಕಾಮಗಾರಿಗಳಿಗೆ ಇಲ್ಲಿಂದಲೇ ಜಲ್ಲಿಕಲ್ಲು ಸರಬರಾಜು ಮಾಡಲಾಗಿತ್ತು. ಆದರೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೇಂದ್ರ ಸರ್ಕಾರದ ಆದೇಶದ ನಡುವೆಯೂ ಅಕ್ರಮವಾಗಿ ಕಲ್ಲು ಸರಬರಾಜು ಮಾಡುತ್ತಿದ್ದಾರೆ. ಕಮೀಷನ್ಗಾಗಿ ಸ್ಥಳೀಯ ಕ್ವಾರೆಗಳನ್ನು ಗುತ್ತಿಗೆ ಪಡೆಯದೇ ಬೇರೆ ಜಿಲ್ಲೆಗಳಿಂದ ಜಲ್ಲಿಕಲ್ಲು ತರಿಸುತ್ತಿದ್ದು ಸರ್ಕಾರಕ್ಕೆ ಲಕ್ಷಾಂತರ ರು.ನಷ್ಟ ಹಾಗೂ ಇದನೇ ನಂಬಿ ಬದುಕುತ್ತಿರುವ ಸುಮಾರು 500 ಕುಟಂಬಗಳು ಬೀದಿ ಪಾಲಾಗುವಂತೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಸರ್ಕಾರ, ಜಿಲ್ಲಾಡಳಿತ ಅನಧಿಕೃತ, ಕಾಳಸಂತೆಯಲ್ಲಿ ಸಾಗಾಟ ಹಾಗೂ ಮಾರಾಟ ಮಾಡುತ್ತಿರುವ ಅಕ್ರಮ ಜಲ್ಲಿ ಉದ್ಯಮವನ್ನು ಜಪ್ತಿ ಮಾಡಬೇಕು. ಹಾರೋಗೊಪ್ಪ ಕ್ವಾರೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಅನುಮೋದನೆ ಮಾಡಬೇಕು. ಸ್ಥಳೀಯ ಕ್ವಾರೆಗಳಿಂದ ಕಾಮಗಾರಿ ಕೆಲಸಕ್ಕೆ ಆದೇಶ ನೀಡಬೇಕು. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದನ್ನು ತಪ್ಪಿಸಬೇಕು. ಸ್ಥಳೀಯ ಕೂಲಿ ಕಾರ್ಮಿಕರು ಗುಳ್ಳೆಹೋಗದಂತೆ ತಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿ. ಸಿದ್ದಪ್ಪ, ಜಯನಾಯ್ಕ್, ಸುಭಾಷ್, ರಾಜೇಶ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

