ಶಿವಮೊಗ್ಗ

ರಾಜ್ಯೋತ್ಸವ; ಸಂಗೀತ ಸಂಜೆ, ಸನ್ಮಾನ

Published On :

ಕ.ಪ್ರ. ವಾರ್ತೆ, ಜೋಗ್‌ಫಾಲ್ಸ್, ಡಿ.2
ಇತಿಹಾಸ, ಭವ್ಯ ಪರಂಪರೆ ಹೊಂದಿರುವ ಕನ್ನಡ ಬಳಸಿ- ಬೆಳೆಸುವುದರೊಂದಿಗೆ ಕನ್ನಡ ಭಾಷಾ ವ್ಯಾಮೋಹ ಹೆಚ್ಚಿಸಿಕೊಳ್ಳಬೇಕೆಂದು ಕಾರ್ಗಲ್ ನ ವರ್ತಕ, ಸಮಾಜ ಸೇವಕ ಶ್ರೀನಿವಾಸ್ ಎಂ. ಪೈ ತಿಳಿಸಿದರು.
ಇಲ್ಲಿನ ವೆಂಕಟೇಶ್ ಪುತ್ತ ಮತ್ತು ತಂಡದವರು ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂಗೀತ ಸಂಜೆ ಮತ್ತು ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತೃ ಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಕನ್ನಡ ಒಗ್ಗೂಡಿಸಲು ಶ್ರಮಿಸಿದ ಧೀಮಂತ ನಾಯಕರಿಗೆ ಭಕ್ತಿಪೂರ್ವಕ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಜೋಗ್- ಕಾರ್ಗಲ್ ಪಪಂ ಅಧ್ಯಕ್ಷ ಕೆ.ಸಿ. ಹರೀಶ್ ಗೌಡ ಮಾತನಾಡಿ, ಕನ್ನಡ ಬೆಳೆಸುವ ದೀಕ್ಷೆ ತೊಟ್ಟಾಗ ಮಾತ್ರ ಕನ್ನಡದ ಜೊತೆಯಲ್ಲಿ ನಾವು ಉನ್ನತಿಯತ್ತ ಸಾಗಬಹುದು ಎಂದು ತಿಳಿಸಿದರು.
ವೆಂಕಟೇಶ್ ಪುತ್ತ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜೋಗ ಜಲಪಾತದಲ್ಲಿ ನೀರು ಪಾಲಾದ ಪ್ರವಾಸಿಗರ ಶವಗಳನ್ನು ಮೇಲೆತ್ತಲು ಸಹಕರಿಸುತ್ತಿರುವ ಉಮೇಶ್ ಅವರನ್ನು ಸನ್ಮಾನಿಸಲಾಯಿತು ಮತ್ತು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕಾರ್ಗಲ್‌ನ ರಾಮಕೃಷ್ಣ ಅವರಿಗೆ ಸಹಾಯಧನವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ವೆಂಕಟೇಶ್ ಪುತ್ತ, ದಿನೇಶ್, ರಾಜೇಶ್, ಮಾಲತಿ, ರವಿ ಮತ್ತು ತಂಡದವರು ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಗಲ್ ಕನ್ನಡ ಸಂಘದ ಅಧ್ಯಕ್ಷೆ ಲಕ್ಷ್ಮೀರಾಜು, ಮಯೂರ ಹೋಟೆಲ್‌ನ ವ್ಯವಸ್ಥಾಪಕ ವಿ.ಎಸ್.ಶಾನಭಾಗ್, ಸಾಗರದ ನಾಟಿ ವೈದ್ಯ ಮರಿಗೆ ರಾಮಪ್ಪ, ಮುದ್ದನ ಹುಚ್ಚಪ್ಪ, ರಾಜಶೇಖರ್, ಸಿದ್ದಯ್ಯ ಗುರುಸಿದ್ದಯ್ಯ ಮತ್ತಿತರರು ಇದ್ದರು. ಅಣ್ಣಪ್ಪ ಸ್ವಾಗತಿಸಿದರು. ಪ್ರಭಾಕರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.