ಪಿಕ್ಸೆಲ್ ಸ್ಟುಡಿಯೋ ಲೋಕಾರ್ಪಣೆ
ಶಿವಮೊಗ್ಗ: ನಗರದ ಜೆಎನ್ ಎನ್ ಸಿಇ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ನೂತನವಾಗಿ ನಿರ್ಮಿಸಿರುವ ಪಿಕ್ಸೆಲ್ ಸ್ಟುಡಿಯೋ ಶನಿವಾರ ಲೋಕಾರ್ಪಣೆಗೊಂಡಿದೆ.
ಚಿತ್ರನಟಿ ಶ್ವೇತಾ ಶ್ರೀವಾತ್ಸವ್ ಸ್ಟುಡಿಯೋ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳ ಈ ಸಾಧನೆ ಶ್ಲಾಘನೀಯ. ಇಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದ ಅವರು, ಕನ್ನಡಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ. ವ್ಯಾವಾಹಾರಿಕವಾಗಿ ಕನ್ನಡವನ್ನು ಹೆಚ್ಚಾಗಿ ಬಳಸಿ ಎಂದು ಕರೆ ನೀಡಿದರು.
ಇತರರಿಗೆ ಮಾದರಿ: ಶಾಸಕ ಕೆ.ಬಿ. ಪ್ರಸನ್ನಕುಮಾರ್, ಎಲ್ಲರು ಸರ್ಕಾರದ ಕೆಲಸಕ್ಕಾಗಿ ಕಾಯುತ್ತಾರೆ. ಆದರೆ, ಈ ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿಭಿನ್ನ. ವ್ಯಾಸಂಗ ಮಾಡುತ್ತಿರುವ ವೇಳೆಯಲ್ಲೇ ಈ ರೀತಿ ಸ್ವಂತ ಉದ್ಯಮದಲ್ಲಿ ತೊಡಗಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ಛಾಯಾಗ್ರಾಹಕರು ಪ್ರತಿಯೊಬ್ಬರು
ಮಧುರವಾದ ಕ್ಷಣಗಳನ್ನು ಸೆರೆಹಿಡಿಯುವ ಮೂಲಕ ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತಾರೆ.
ಕೆಲಮೊಮ್ಮೆ ಪ್ರಾಣವನ್ನು ಪಣವಿಟ್ಟು ಚಿತ್ರ ತೆಗೆಯುತ್ತಾರೆ. ಸಮಾಜಮುಖಿ ಕಾರ್ಯಕ್ರಮಗಳಿಗೆ ಛಾಯಾಗ್ರಾಹಣ ಒಂದು ಸಾಧನ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಛಾಯಾಗ್ರಾಹಕ ಶಿವಮೊಗ್ಗ ನಂದನ್, ತನ್ನ ದುಃಖವನ್ನು ಮರೆತು ಸಮಾರಂಭಗಳಲ್ಲಿ ಎಲ್ಲರಿಗೂ ಸ್ಮೈಲ್ ನೀಡಿ ಎಂದು ಹೇಳುವ ಛಾಯಾಗ್ರಾಹಣ ವೃತ್ತಿ ಪರಿಪೂರ್ಣವಾಗಿದ್ದು, ಯುವ ಪಡೆ ಇಂದು ಛಾಯಾಗ್ರಾಹಣದತ್ತ ಆಕರ್ಷಿತರಾಗುತ್ತಿರುವುದು ಸಂತಸ ತಂದಿದೆ ಎಂದರು.
ಇದೇ ವೇಳೆ ಹವ್ಯಾಸಿ ಛಾಯಾಗ್ರಾಹಕ ಮಹೇಶ್ ಮತ್ತು ಶೇಖರ್ ಗೌಳೇರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಬಿ.ಆರ್. ಮಧುಸೂದನ್, ಪಿಕ್ಸೆಲ್ ಸಂಸ್ಥೆ ಪಾಲುದಾರ ರಘುನಾಡಿಗ್, ಸುಮಂತ್, ಆನಂದ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

