ಶಿವಮೊಗ್ಗ

ಸರ್ದಾರ್ ಪಟೇಲ್ ಪುಣ್ಯತಿಥಿ: ನಾಳೆ ಏಕತಾ ಓಟ, ನಡಿಗೆ

Published On :

ಕ.ಪ್ರ. ವಾರ್ತೆ  ಶಿವಮೊಗ್ಗ, ಡಿ.13
ಸರ್ದಾರ್ ವಲ್ಲಭಬಾಯ್ ಪಟೇಲ್ ಏಕತಾ ಪ್ರತಿಮೆ ನಿರ್ಮಾಣದ ಹಿನ್ನೆಲೆಯಲ್ಲಿ ಡಿ.15ರಂದು ಇಡೀ ದೇಶಾದ್ಯಂತ 550 ಜಿಲ್ಲಾ ಕೇಂದ್ರಗಳಲ್ಲಿ ಏಕತಾ ಓಟ ಮತ್ತು ಏಕತಾ ನಡಿಗೆ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲೂ ಸಹ ಅಂದು ಬೆಳಗ್ಗೆ ಏಕತಾ ಓಟ- ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾರ್ಯಕ್ರಮ ಸಂಚಾಲಕ ಎ.ಎಲ್. ಅರವಿಂದ, ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬೆಳಗ್ಗೆ 8 ಗಂಟೆಗೆ ನಗರದ ಸೈನ್ಸ್ ಮೈದಾನದಿಂದ ಓಟ ಹಾಗೂ ನಡಿಗೆ ಆರಂಭವಾಗಲಿದೆ. ಅಲ್ಲಿಂದ ಆರಂಭವಾಗಿ ಬಿಎಚ್ ರಸ್ತೆಯ ಕೃಷ್ಣ ಕೆಫೆಯಿಂದ ಶ್ಯಾಮಪ್ರಸಾದ ಮುಖರ್ಜಿ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತದ ಮುಖಾಂತರ ಪುನ- ಸೈನ್ಸ್ ಮೈದಾನ ತಲುಪಲಿದೆ ಎಂದು ವಿವರಿಸಿದರು. ಈ ಓಟ ಗಿನ್ನೆಸ್ ದಾಖಲೆಯಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಅದಕ್ಕಾಗಿ ಎಲ್ಲ ಏರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ. ಓಟ ಹಾಗೂ ನಡಿಗೆಯ ಆರಂಭದಿಂದ ಅಂತ್ಯದವರೆಗೆ ಭಾಗವಹಿಸಿದವರ ನೋಂದಣಿ ಹಾಗೂ ವಿಡಿಯೋ ಚಿತ್ರೀಕರಣ ನಡೆಯಲಿದೆ. ಓಟದ ನಂತರ ವಲ್ಲಭಬಾಯ್ ಪುಣ್ಯತಿಥಿ ಹಿನ್ನೆಲೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. ನರೇಂದ್ರ ಮೋದಿಯವರು ವಿಶ್ವದಲ್ಲಿಯೇ ಅತಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ದೇಶಾದ್ಯಂತ ಮಣ್ಣು ಹಾಗೂ ಲೋಹ ಸಂಗ್ರಹ ಅಭಿಯಾನ ನಡೆಯಲಿದೆ ಎಂದರು.
ಸಮಿತಿ ಪ್ರಮುಖರಾದ ಮಹೇಂದ್ರನಾಥ್, ಎಸ್. ದತ್ತಾತ್ರಿ,  ಅರುಣ, ಚನ್ನಬಸಪ್ಪ, ರತ್ನಾಕರ ಶೆಣೈ, ಮಧುಸೂದನ್, ಭವಾನಿರಾವ್ ಮೋರೆ, ಹಿರಣ್ಣಯ್ಯ, ಮೋಹನರೆಡ್ಡಿ, ಹೃಷಿಕೇಶ ಪೈ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.