ಮಕ್ಕಳಿಗೆ ಕನ್ನಡ ಸಾಹಿತ್ಯ ಕಲಿಸಿ
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಡೆಸಿಕೊಂಡು ಬರುತ್ತಿರುವ ಸಾಹಿತ್ಯ ಹುಣ್ಣಿಮೆಗೆ 100ರ ಸಂಭ್ರಮ. ಈ ಸಂಭ್ರಮವನ್ನು ಅಷ್ಟೇ ಅದ್ಧೂರಿಯಾಗಿ ಭಾನುವಾರ ನಗರದ ಮಲ್ಲೇಶ್ವರ ನಗರದಲ್ಲಿ ಆಚರಿಸಿತು.
ಸಂಗೀತ, ನೃತ್ಯ, ಹಾಸ್ಯ, ಸಾಹಿತ್ಯ ಚುಟುಕುಗಳ ವಾಚನ, ಚಂದಿರನ ಕುರಿತು ಕವಿಗಳು ಬರೆದ ಕವನಗಳ ಗಾಯನ, ದೇಶಭಕ್ತಿಗೀತೆಗಳು ವೇದಿಕೆಯಲ್ಲಿ ಮೇಳೈಸಿದವು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕನ್ನಡಭಿಮಾನಿಗಳು ಕಾರ್ಯಕ್ರಮ ಸ್ವಾರಸ್ಯ ಸವಿದರು.
100ರ ಸಂಭ್ರಮದ ಅಂಗವಾಗಿ ಉಮಾ ದಿಲೀಪ್ ನಿರ್ದೇಶನದ 100 ಮಕ್ಕಳ ಸಮೂಹ ಗಾಯನ- ನೃತ್ಯ, ಕೆ. ಯುವರಾಜ್ ನಿರ್ದೇಶನದಲ್ಲಿ 100 ಕಲಾವಿದರಿಂದ ವೃಂದಗಾನದಲ್ಲಿ ಚಂದಿರ ಕಾರ್ಯಕ್ರಮಗಳು ನೋಡುಗರನ್ನು ಮನಸೆಳೆದವು.
ಗುರುಗುಹ ಸಂಗೀತ ವಿದ್ಯಾಲಯ ಹಾಗೂ ನಟನಂ ಬಾಲನಾಟ್ಯ ಕೇಂದ್ರದಿಂದ ಸಮೂಹ ಗಾನದಲ್ಲಿ ಹರಿದಾಸ ದರ್ಶನ, ನೃತ್ಯ ಹಾಗೂ ಪ್ರೊ. ಕೆ. ಓಂಕಾರಪ್ಪ, ವಿಭಾ, ದೀಪ್ತಿ ಭದ್ರಾವತಿ ಅವರಿಂದ ಕವನ ವಾಚನ, ಗಣೇಶ್ ವೈದ್ಯ, ಎಸ್.ಕೆ. ಪ್ರಸನ್ನಕುಮಾರ್, ಹೊಸಳ್ಳಿ ನಾಗರತ್ನ, ಟಿ.ಜೆ. ರಕ್ಷಿತ ಮತ್ತು ತಂಡದಿಂದ ಗಾಯನ ನಡೆಯಿತು.
ವಿಶೇಷ ಸ್ಥಾನ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಾಸ್ಯ ಚಕ್ರವರ್ತಿ ಗಂಗಾವತಿ ಪ್ರಾಣೇಶ್, ಪ್ರಾರಂಭದಲ್ಲೇ ಹಾಸ್ಯ ಚಟಾಕಿ ಹಾರಿಸಿದರು. ಅವರ ಹಾಸ್ಯದ ಝಲಕ್ಕಿಗೆ ಪ್ರೇಕ್ಷಕರಿಂದ ಚಪ್ಪಾಳೆ, ಸಿಳ್ಳೆಗಳು ಹರಿದು ಬಂದವು. ಮಹಿಳೆಯರನ್ನು ಒಲೈಸಿಕೊಂಡು ಹಾಸ್ಯಕ್ಕಿಳಿದ ಪ್ರಾಣೇಶ್ ಮಹಿಳೆಯರಿಗೆ ನಮ್ಮ ನಾಡಿನಲ್ಲಿ ವಿಶೇಷವಾದ ಸ್ಥಾನವಿದೆ. ಅವರಿಗೆ ಪ್ರತಿಯೊಬ್ಬರು ಗೌರವಿಸಬೇಕು ಎಂದು ತಮ್ಮ ಹಾಸ್ಯದಲ್ಲಿ ಉಲ್ಲೇಖಿಸಿದರು.
ವಿದೇಶಗಳಲ್ಲಿಯೂ ಕನ್ನಡಿಗರಿದ್ದಾರೆ. ಅವರಿಗೆ ಕನ್ನಡ ಭಾಷೆಯ ಮೇಲೆ ಅತಿಯಾದ ವ್ಯಾಮೋಹ. ಭಾಷೆಯ ಉಳಿವಿಗಾಗಿ ಅವರು ಅಲ್ಲಿಂದಲೇ ಹೋರಾಟ ನಡೆಸುತ್ತಿದ್ದಾರೆ. ವಿದೇಶಗಳಲ್ಲಿ ಕನ್ನಡ ಭಾಷೆಯ ಕಾರ್ಯಕ್ರಮಗಳು ಆಯೋಜನೆಗೊಂಡರೆ ಸಾವಿರಾರು ಜನ ಸೇರುತ್ತಾರೆ ಎಂದರು.
ಹಾಸ್ಯ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಹಾಸ್ಯದಿಂದ ಜನರಿಗೆ ಏನಾದರೂ ಹೇಳಿದರೆ ಅರ್ಥ ಮಾಡಿಕೊಳ್ಳುತ್ತಾರೆ. ಆದರಿಂದ ಹಾಸ್ಯಕ್ಕೆ ಸಾಕಷ್ಟು ಮಹತ್ವವಿದೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಪತ್ನಿ ಜಯಲಕ್ಷ್ಮೀ, ಉದ್ಯಮಿ ಕೆ.ಇ. ಕಾಂತೇಶ್, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಉಮೇಶ್ ಆರಾಧ್ಯ, ನಗರಸಭೆ ಸದಸ್ಯೆ ಸುರೇಖಾ ಮುರಳೀಧರ್, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ಶಿವಮೊಗ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ನಿವಾಸಿಗಳು ಸಂಘದ ಅಧ್ಯಕ್ಷ ಸಿ.ಬಿ. ಶಾಂತವೀರಪ್ಪ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

